ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮೂಡಚಿಂತಲಹಳ್ಳಿ ಗ್ರಾಮದಲ್ಲಿ ನಡೆದಿರುವ ಒಂದು ದಾರುಣ ಘಟನೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. 38 ವರ್ಷದ ವಿವಾಹವಿಚ್ಛೇದನ ಹೊಂದಿದ ಮಹಿಳೆಯೊಬ್ಬಳೊಂದಿಗಿನ ಅಕ್ರಮ ಸಂಬಂಧ ಮತ್ತು ಲೈಂಗಿಕ ಪ್ರಚೋದನೆಯಿಂದ ಉಂಟಾದ ಕಿರುಕುಳಕ್ಕೆ ಬೇಸತ್ತು, ಯುವಕನೊಬ್ಬನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 19 ವರ್ಷದ ನಿಖಿಲ್ ಕುಮಾರ್ ಎಂಬಾತ ತನ್ನ ಜೀವವನ್ನು ಕೊನೆಗೊಳಿದ್ದಾನೆ. ಶಾರದಾ ಎಂಬುವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನೆಂಬ ಆರೋಪ ಕೇಳಿಬಂದಿದೆ.
ನಿಖಿಲ್ ಕುಮಾರ್ ಮೂಡಚಿಂತಲಹಳ್ಳಿ ಗ್ರಾಮದ ನಿವಾಸಿಯಾಗಿದ್ದ. ಆದರೆ ಗ್ರಾಮದಲ್ಲೇ ವಾಸಿಸುತ್ತಿದ್ದ 38 ವರ್ಷದ ಶಾರದಾ ಎಂಬ ಮಹಿಳೆಯೊಂದಿಗೆ ಅಕ್ರಮ ಸಂಬಂಧಕ್ಕೆ ಒಳಗಾಗಿ ತನ್ನ ಜೀವನವನ್ನೇ ಕಳೆದುಕೊಂಡಿದ್ದಾನೆ. ಶಾರದಾ ಹಲವು ವರ್ಷಗಳ ಹಿಂದೆ ತನ್ನ ಗಂಡನಿಂದ ವಿಚ್ಛೇದನ ಪಡೆದು, ಇಬ್ಬರು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು.
ಪೋಷಕರು ಈ ಸಂಬಂಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ನಿಖಿಲ್‌ಗೆ ಕೇವಲ 19 ವರ್ಷ ವಯಸ್ಸು, ಆದರೆ ಶಾರದಾ 38 ವರ್ಷದವಳು, ಇವರಿಬ್ಬರ ಈ ವಯೋವ್ಯತ್ಯಾಸ ಮತ್ತು ಇವರ ಸಂಬಂಧವನ್ನು ಪೋಷಕರು ಸಹಿಸಲಿಲ್ಲ. ಆದರೆ ಶಾರದಾ ಯುವಕನನ್ನು ಬಿಡದೇ ಪೋಷಕರ ಕಣ್ಣು ತಪ್ಪಿಸಿ, ರಾತ್ರಿ ಹೊತ್ತು ಕಾರಿನ ಡಿಕ್ಕಿಯಲ್ಲಿ ನಿಖಿಲ್‌ನ್ನು ಹೊರಗಡೆ ಕರೆದೊಯ್ಯುತ್ತಿದ್ದಳು ಎಂದು ಆರೋಪಿಸಲಾಗಿದೆ. ಅಲ್ಲದೇ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಳು ಎನ್ನಲಾಗಿದೆ. ಶಾರದಾ ಯುವಕನನ್ನು ಕಳ್ಳತನ ಪ್ರಕರಣಗಳಲ್ಲಿ ತೊಡಗಿಸುತ್ತಿದ್ದಳು ಎಂಬ ಗಂಭೀರ ಆರೋಪಗಳೂ ಇವೆ. ಇದರಿಂದ ನಿಖಿಲ್ ಮಾನಸಿಕವಾಗಿ ಹದಗೆಟ್ಟಿದ್ದ.
ಈ ಎಲ್ಲಾ ಒತ್ತಡಗಳನ್ನು ತಾಳಲಾರದ ನಿಖಿಲ್ ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿಂತಾಮಣಿಯ ಕಾಚಹಳ್ಳಿ ಕೆರೆ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಅವನ ಶವ ಪತ್ತೆಯಾಯಿತು. ಘಟನೆ ನಡೆದ ದಿನ ಪೋಷಕರು ಮಗನನ್ನು ಹುಡುಕಾಡುತ್ತಿದ್ದರು. ಕೊನೆಗೆ ಕೆರೆ ಬಳಿ ಶವವನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ.
ಪೋಷಕರು ತಕ್ಷಣ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಾರದಾ ವಿರುದ್ಧ ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ತನಿಖೆ ಆರಂಭಿಸಿದ್ದಾರೆ.
‘ಮಿಸ್ ಯು ಚಿನ್ನ’ ಅಂತ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ನೇಣಿಗೆ ಶರಣಾದ ಯುವಕ
ಹದಿಹರೆಯದ ವಯಸ್ಸಲ್ಲೇ ಪ್ರೀತಿ ಪ್ರೇಮ ಅಂತ ಅಪ್ರಾಪ್ತೆ ಜೊತೆ ಪ್ರಣಯದಾಟ ಆಡಿದ ಆತ ಅದೇನಾಯ್ತೋ ಏನೋ ಕೊನೆಗೆ ಆಕೆಯ ವೇಲ್ ನಿಂದಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾಯುವ ಮುನ್ನ ಇನ್ಸ್ಟಾಗ್ರಾಮ್‌ನಲ್ಲಿ ಮಿಸ್ ಯು “ಚಿನ್ನ” ಅಂತ ಪೋಟೋ ಸಮೇತ ಪೋಸ್ಟ್ ಹಾಕಿ ಸೂಸೈಡ್ ಮಾಡಿಕೊಂಡಿದ್ದಾನೆ.
ಸಾಯುವ ಮುನ್ನ ಮಿಸ್ ಯು ಚಿನ್ನ ಅಂತ ಆಕೆಯೊಂದಿಗಿನ ಪೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಆಕೆಯ ವೇಲ್ ನಿಂದಲೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವಕನ ಹೆಸರು ಚಿರುತ್ ಕುಮಾರ್ ಚಿಕ್ಕಬಳ್ಳಾಪುರ ತಾಲೂಕಿನ ಬಾಲಕುಂಟಹಳ್ಳಿಯ ನಿವಾಸಿ. ಇನ್ನೂ 18 ವರ್ಷ ವಯಸ್ಸು, ಎಸ್ ಎಸ್ ಎಲ್ ಸಿಯಲ್ಲಿ ಒಂದಲ್ಲ ಎರಡಲ್ಲ ಅಂತ ಮೂರು ಬಾರಿ ಫೇಲ್ ಆಗಿದ್ದ ಚಿರುತ್ ಊರಲ್ಲೇ ಕೃಷಿ ಕೆಲಸ ಮಾಡಿಕೊಂಡಿದ್ದ. ಆದ್ರೆ ಚಿರುತ್ ಕುಮಾರ್ ಇದ್ದಕ್ಕಿದ್ದಂತೆ ಜಕ್ಕಲಮಡುಗು ಜಲಾಶಯದ ಬಳಿ ಜಮೀನು ಪಕ್ಕದಲ್ಲೇ ಇದ್ದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಂದೆ ತಾಯಿಗೆ ಒಬ್ಬನೇ ಮಗನಾಗಿದ್ದ ಚಿರುತ್ ಕುಮಾರ್ ಅದ್ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದ ಅನ್ನೋದು ಆರಂಭದಲ್ಲಿ ಸಂಬಂಧಿಕರಿಗೂ ಗೊತ್ತಾಗಿರಲಿಲ್ಲ. ಕೊನೆಗೆ ಆತನ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜಾಲಾಡಿದಾಗ ಆತ ಸಾಯುವ ಮುನ್ನ ಅಪ್ರಾಪ್ತ ಬಾಲಕಿಯೊಂದಿಗೆ ಇರುವ ಪೋಟೋಗಳನ್ನ ಹಾಕಿಕೊಂಡಿದ್ದಾನೆ. ಇದರಿಂದ ಪ್ರೇಮ ವೈಫಲ್ಯದಿಂದಲೇ ಚಿರುತ್ ಕುಮಾರ್ ಸೂಸೈಡ್ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಈ ಹಿಂದೆಯೂ ಎರಡು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಸಾಯುವುದಾಗಿ ಚಿರುತ್ ಕುಮಾರ್ ಪೋಸ್ಟ್ ಮಾಡಿದ್ದನಂತೆ. ಆಗ ಸ್ನೇಹಿತರೇ ಹೋಗಿ ಅವನಿಗೆ ಬುದ್ದಿ ಮಾತು ಹೇಳಿ ಮನೆಗೆ ಕರೆದುಕೊಂಡು ಬಂದಿದ್ರಂತೆ. ಆದ್ರೆ ಈಗ ಮೂರನೇ ಬಾರಿ ಸೂಸೈಡ್ ಮಾಡಿಕೊಂಡು ಸಾವಿನ ಮನೆ ಸೇರಿಕೊಂಡಿದ್ದಾನೆ. ಇನ್ನೂ ಅಪ್ರಾಪ್ತ ಬಾಲಕಿ ಚಿರುತ್ ನನ್ನ ಬಿಟ್ಟು ಬೇರೆ ಯಾರೋ ಹುಡುಗನನ್ನ ಪ್ರೀತಿ ಮಾಡುತ್ತಿದ್ದಳಂತೆ, ಚಿರುತ್ ಪೋನ್ ರಿಸೀವ್ ಮಾಡದೆ ಅವೈಡ್ ಮಾಡಿದ್ಲಂತೆ. ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾರೆ ಅಪ್ತ ಸ್ನೇಹಿತರು.
