ಉದ್ಯೋಗಾಕಾಂಕ್ಷಿಗಳಿಗೆ ಗುಡ್‌‌ನ್ಯೂಡ್‌: ಇನ್ಫೋಸಿಸ್‌ನಲ್ಲಿ ಹೊಸಬರ ಸ್ಯಾಲರಿ ₹21 ಲಕ್ಷ ರೂ. ಏರಿಕೆ

Untitled design 2025 12 25T202729.296

ಬೆಂಗಳೂರು (ಡಿ.25): ಭಾರತದ ಐಟಿ ಕ್ಷೇತ್ರದಲ್ಲಿ ಪ್ರಮುಖ ಸ್ಥಾನ ಹೊಂದಿರುವ ಇನ್ಫೋಸಿಸ್ (Infosys) ಇದೀಗ ಫ್ರೆಶರ್ಸ್‌ಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ವಿಶ್ವದ ಅತಿದೊಡ್ಡ ಐಟಿ ಸೇವಾ ಕಂಪನಿಗಳಲ್ಲಿ ಒಂದಾಗಿರುವ ಇನ್ಫೋಸಿಸ್, ಹೊಸ ಪ್ರತಿಭೆಗಳನ್ನು ಆಕರ್ಷಿಸಲು ತನ್ನ ನೇಮಕಾತಿ ನೀತಿಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಮುಂದಾಗಿದೆ. ಇದರ ಭಾಗವಾಗಿ ಹೊಸಬರ ಆರಂಭಿಕ ವೇತನವನ್ನು ಗರಿಷ್ಠವಾಗಿ ವಾರ್ಷಿಕ 21 ಲಕ್ಷ ರೂಪಾಯಿವರೆಗೆ ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ.

ಬೆಂಗಳೂರು ಮೂಲದ ಈ ಪ್ರತಿಷ್ಠಿತ ಸಂಸ್ಥೆ ದೇಶ-ವಿದೇಶಗಳಲ್ಲಿ ತನ್ನ ವ್ಯಾಪಕ ಕಾರ್ಯಾಚರಣೆ ಹೊಂದಿದ್ದು, ಲಕ್ಷಾಂತರ ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿದೆ. ಇತ್ತೀಚಿನ ತಂತ್ರಜ್ಞಾನ ಬದಲಾವಣೆಗಳು, ವಿಶೇಷವಾಗಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ (AI), ಡೇಟಾ ಸೈನ್ಸ್, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಡಿಜಿಟಲ್ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಇನ್ಫೋಸಿಸ್ ಹೊಸ ನೇಮಕಾತಿ ಮಾದರಿಯನ್ನು ಅಳವಡಿಸಿಕೊಳ್ಳುತ್ತಿದೆ.

ಇದುವರೆಗೆ ಹೆಚ್ಚಿನ ಮಟ್ಟಿಗೆ ಕಾಲೇಜು ಕ್ಯಾಂಪಸ್ ಸಂದರ್ಶನಗಳ ಮೇಲೆ ಅವಲಂಬಿತವಾಗಿದ್ದ ಇನ್ಫೋಸಿಸ್, ಈಗ ತನ್ನದೇ ಕ್ಯಾಂಪಸ್‌ನಲ್ಲಿ ನೇರ ಸಂದರ್ಶನ (Direct Hiring) ಮೂಲಕ ಪ್ರತಿಭಾವಂತ ಯುವಕರನ್ನು ಆಯ್ಕೆ ಮಾಡಲು ಹೆಚ್ಚು ಒತ್ತು ನೀಡುತ್ತಿದೆ.

ಭರ್ಜರಿ ವೇತನದೊಂದಿಗೆ ಉದ್ಯೋಗಾವಕಾಶ

ಇನ್ಫೋಸಿಸ್ ಹೊಸ ನೇಮಕಾತಿಯಲ್ಲಿ ವಿವಿಧ ಹುದ್ದೆಗಳಿಗೆ ಸ್ಪರ್ಧಾತ್ಮಕ ವೇತನವನ್ನು ಘೋಷಿಸಿದೆ. ಪ್ರೋಗ್ರಾಮರ್ (ಲೆವಲ್ 1 ರಿಂದ ಲೆವಲ್ 3), ಡಿಜಿಟಲ್ ಸ್ಪೆಷಲಿಸ್ಟ್ ಎಂಜಿನಿಯರ್ (ಟ್ರೈನಿ) ಸೇರಿದಂತೆ ಪ್ರಮುಖ ತಾಂತ್ರಿಕ ಹುದ್ದೆಗಳಿಗಾಗಿ ನೇಮಕಾತಿ ನಡೆಯಲಿದೆ. ಕೆಲಸದ ಜವಾಬ್ದಾರಿ, ತಾಂತ್ರಿಕ ನೈಪುಣ್ಯ ಮತ್ತು ಹುದ್ದೆಯ ಮಟ್ಟವನ್ನು ಅವಲಂಬಿಸಿ, ಹೊಸಬರಿಗೆ ವಾರ್ಷಿಕ 7 ಲಕ್ಷದಿಂದ 21 ಲಕ್ಷ ರೂಪಾಯಿವರೆಗೆ ವೇತನ ನೀಡಲಾಗುತ್ತದೆ.

 ಹುದ್ದೆವಾರು ವೇತನ ವಿವರ
ಯಾರಿಗೆ ಅವಕಾಶ?

ಬಿಇ, ಬಿಟೆಕ್, ಎಂಇ, ಎಂಟೆಕ್, ಎಂಸಿಎ, ಎಂಎಸ್‌ಸಿ (ಕಂಪ್ಯೂಟರ್ ಸೈನ್ಸ್), ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಸೇರಿದಂತೆ ವಿವಿಧ ತಾಂತ್ರಿಕ ಪದವಿದಾರರಿಗೆ ಈ ಅವಕಾಶ ಲಭ್ಯವಿದೆ. ಪದವಿ ಅಥವಾ ವೃತ್ತಿಪರ ಕೋರ್ಸ್ ಮುಗಿಸಿರುವ ಪ್ರತಿಭಾವಂತ ಯುವಕರಿಗೆ ಇದು ಅತ್ಯುತ್ತಮ ಅವಕಾಶವಾಗಲಿದೆ.

ಅಂತಾರಾಷ್ಟ್ರೀಯ ಮಟ್ಟದ ವೇತನ

ಈ ಕುರಿತು ಮಾತನಾಡಿದ ಇನ್ಫೋಸಿಸ್‌ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ (CHRO) ಶಾದಿ ಮ್ಯಾಥ್ಯೂ, “ಪ್ರತಿಭಾವಂತರನ್ನು ಸಂಸ್ಥೆಗೆ ಸೆಳೆಯಲು ಮತ್ತು ಅವರ ಕರಿಯರ್ ಬೆಳವಣಿಗೆಗೆ ಸಹಾಯ ಮಾಡುವ ಉದ್ದೇಶದಿಂದ ನಾವು ಅಂತಾರಾಷ್ಟ್ರೀಯ ಮಟ್ಟದ ವೇತನ ನೀಡುತ್ತಿದ್ದೇವೆ. ಹೊಸಬರು ತಮ್ಮ ವೃತ್ತಿಜೀವನವನ್ನು ಆರಂಭಿಸಲು ಇದು ನೆರವಾಗಲಿದೆ” ಎಂದು ತಿಳಿಸಿದ್ದಾರೆ.

Exit mobile version