ಕನಿಷ್ಟ ವೇತನ ಮಸೂದೆ: ಪಿಯುಸಿ ಆದವರಿಗೆ ₹20 ಸಾವಿರ, ಪದವಿಧರರಿಗೆ ₹30 ಸಾವಿರ ಎಲ್ಲಾ ಕ್ಷೇತ್ರಕ್ಕೂ ಅನ್ವಯವಾಗುತ್ತಾ?

Siddu stalin kcr (8)

ಕೇಂದ್ರ ಸರ್ಕಾರ ಭಾರತದಲ್ಲಿ ಶಿಕ್ಷಣ ಆಧಾರಿತ ಹೊಸ ವೇತನ ಮಸೂದೆಯನ್ನು ತರಬಹುದು, ಇದರಲ್ಲಿ ಇದರಲ್ಲಿ ಶಿಕ್ಷಣದ ಮೇಲೆ ವೇತನವನ್ನು ನಿರ್ಧರಿಸಲಾಗುತ್ತದೆ. ಹೌದು ಭಾರತದಲ್ಲಿ ಹಣದುಬ್ಬರ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಪ್ರತಿಯೊಬ್ಬ ಉದ್ಯೋಗಸ್ಥ ವ್ಯಕ್ತಿಯು ತನ್ನ ಸಂಬಳವು ಮನೆಯ ಖರ್ಚುಗಳನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗುವಷ್ಟು ಇರಬೇಕೆಂದು ಬಯಸುತ್ತಾನೆ.

ದೇಶದಲ್ಲಿ ಇಂದು ಅನೇಕರು ತಮ್ಮ ಶಿಕ್ಷಣಕ್ಕೆ ತಕ್ಕಂತೆ ಸಂಬಳ ಪಡೆಯುತ್ತಿಲ್ಲ. ಕಡಿಮೆ ವೇತನದಲ್ಲಿ ಕೆಲಸ ಮಾಡಲು ಒತ್ತಾಯಿಸಲ್ಪಡುತ್ತಾರೆ.  ಈಗ ಕೇಂದ್ರ  ಸರ್ಕಾರ ಹೊಸ ವೇತನ ಮಸೂದೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ ಎಂಬ ಸುದ್ದಿ ಬರುತ್ತಿದೆ. ಇದರಿಂದ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗಿಗಳಿಗೆ ಕನಿಷ್ಟ 20,000 ಸಂಬಳವನ್ನು ಕಡ್ಡಾಯವಾಗಿ ನೀಡಬೇಕಾಗಬಹುದು.

ಈ ಹೊಸ ವೇತನ ನೀತಿ ಜಾರಿಯಾದರೆ, ಯಾವುದೇ ಕಂಪನಿಯು ತನ್ನ ಉದ್ಯೋಗಿಗಳಿಗೆ ಕಡಿಮೆ ವೇತನವನ್ನು ನೀಡಲು ಸಾಧ್ಯವಾಗುವುದಿಲ್ಲ. ಅದು ಸರ್ಕಾರವಾಗಿರಲಿ ಅಥವಾ ಖಾಸಗಿಯಾಗರಲಿ . ಮೂಲಗಳ ಪ್ರಕಾರ ಈ ಪ್ರಸ್ತಾಪದಲ್ಲಿ ಶಿಕ್ಷಣದ ಆಧಾರದ ಮೇಲೆ ಕನಿಷ್ಟ ವೇತನವನ್ನು ನಿರ್ಧರಿಸಬಹುದು.

ಇದರಲ್ಲಿ ಹೈಯರ್ ಸೆಕೆಂಡರಿ (12 ನೇ ತೇರ್ಗಡೆ): ಕನಿಷ್ಠ ₹20,000 ವೇತನ, ಪದವೀಧರರು: ಕನಿಷ್ಠ ₹30,000 ವೇತನ, ಸ್ನಾತಕೋತ್ತರ ಪದವೀಧರರು ಕನಿಷ್ಠ ₹35,000 ವೇತನ ಇರುತ್ತದೆ. ಈವರೆಗೆ ಕೇಂದ್ರ ಸರ್ಕಾರ ಈ ಮಸೂದೆಯ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಈ ಪ್ರಸ್ತಾಪವು ನಿಜವೆಂದು ಸಾಬೀತಾದರೆ, ಅದನ್ನು ಈ ವರ್ಷವೇ ಸಂಸತ್ತಿನಲ್ಲಿ ಮಂಡಿಸಬಹುದು. ಈ ಮಸೂದೆ ಜಾರಿವಯಾದರೆ, ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಕನಿಷ್ಠ ವೇತನದ ಖಾತರಿ ಇರುತ್ತದೆ. ಅರ್ಹ ಅಭ್ಯರ್ಥಿಗಳಿಗೆ ಅವರ ಶಿಕ್ಷಣಕ್ಕೆ ಅನುಗುಣವಾಗಿ ಸರಿಯಾದ ವೇತನ ಸಿಗುತ್ತದೆ. ಪ್ರತಿ ವರ್ಷ ಸಂಬಳ ಹೆಚ್ಚಿಸುವ ಅವಕಾಶವೂ ಇರಬಹುದು. ಈಗ ಸರ್ಕಾರ ನಿಜವಾಗಿಯೂ ಈ ಐತಿಹಾಸಿಕ ನಿರ್ಧಾರವನ್ನು ಕೈಗೊಂಡು ದುಡಿಯುವ ವರ್ಗಕ್ಕೆ ಖುಷಿಕೊಡುತ್ತಾ ಕಾದುನೋಡಬೇಕು.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

 

 

 

 

Exit mobile version