ಚಳಿಗಾಲದಲ್ಲಿ ಈ 3 ಚಹಾ ಸೇವಿಸಿ ಅದ್ಭುತ ಪ್ರಯೋಜನ ಪಡೆಯಿರಿ

Untitled design 2025 12 01T073251.482

ಚಳಿಗಾಲ ಬಂದರೆ ಸೀನು, ಸೋರುವ ಮೂಗು, ಕೆರೆಯುವ ಗಂಟಲು, ಕೆಮ್ಮು – ಇವೆಲ್ಲವೂ ಉಚಿತ ಬೋನಸ್‌ನಂತೆ ಬರುತ್ತವೆ. ಆದರೆ ಈ ಸಮಯದಲ್ಲಿ ಬಿಸಿಬಿಸಿ ಚಹಾದ ಕಪ್ ಹಿಡಿದರೆ ದೇಹಕ್ಕೆ ಬೆಚ್ಚನೆಯ ಆಲಿಂಗನ ಸಿಗುತ್ತದೆ. ಹಾಲು ಚಹಾ ಮಾತ್ರವಲ್ಲ, ಗ್ರೀನ್ ಟೀ, ಮಸಾಲಾ ಟೀ, ಹರ್ಬಲ್ ಟೀಗಳು ಚಳಿಯನ್ನು ಓಡಿಸುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಗಟ್ಟಿಗೊಳಿಸುತ್ತವೆ.

 ಚಳಿಗಾಲದಲ್ಲಿ ಫ್ಲೂ ವೈರಸ್‌ಗಳು ಹೆಚ್ಚು ತೊಂದರೆ ಕೊಡುತ್ತವೆ. ಆದರೆ ಬಿಸಿ ಚಹಾದಲ್ಲಿರುವ ನೈಸರ್ಗಿಕ ಉತ್ಕರ್ಷಣ ನಿರೋಧಕಗಳು ದೇಹದ ಪ್ರತಿರೋಧಕ ಸಾಮರ್ಥ್ಯವನ್ನು ಹೆಚ್ಚಿಸಿ ಸೋಂಕುಗಳ ವಿರುದ್ಧ ಹೋರಾಡುತ್ತವೆ. ಚಹಾವನ್ನು ದೇಹದ ಕೋಶಗಳಿಗೆ ಹಾಕುವ ಪುಟ್ಟ ಬೆಚ್ಚನೆಯ ಬಟ್ಟೆಯಂತೆ ಪರಿಗಣಿಸಬಹುದು. ಹೀಗೆ ಬಿಸಿಯಾದ ಚಹಾ ದೇಹವನ್ನು ಒಳಗಿನಿಂದ ಬಲಪಡಿಸುತ್ತದೆ.

ಗ್ರೀನ್‌ ಟೀ: ಶ್ರೇಷ್ಠ ಉತ್ಕರ್ಷಣ ನಿರೋಧಕ

ಗ್ರೀನ್‌ ಟೀಯಲ್ಲಿ ಆಂಟಿ–ಆಕ್ಸಿಡೆಂಟ್ಸ್ ತುಂಬಾ ಅಧಿಕ. ಮೂಗು ಸೋರುವ ದಿನಗಳಲ್ಲಿ ಗ್ರೀನ್‌ ಟೀ ಕುಡಿದರೆ ದೇಹಕ್ಕೆ ಒಂದು ರೀತಿಯ ಶಕ್ತಿ ನೀಡುತ್ತದೆ. ಇದರಿಂದ ಚಯಾಪಚಯದ ಕ್ರಿಯೆ ಹೆಚ್ಚುತ್ತದೆ, ತೂಕ ಇಳಿಸಲು ಪ್ರಯತ್ನಿಸುವವರಿಗೆ ಇದು ಸೂಕ್ತ. ಜೊತೆಗೆ ಗ್ರೀನ್‌ ಟೀಯಲ್ಲಿ ಕೆಫೇನ್‌ ಪ್ರಮಾಣ ಕಡಿಮೆ ಇರುವುದರಿಂದ ಹೃದಯಕ್ಕೆ ಮೃದುವಾದ ಪಾನೀಯ.

ಮಸಾಲೆ ಚಹಾ: ರುಚಿ–ಆರೋಗ್ಯಕ್ಕೆ ಉತ್ತಮ

ಭಾರತೀಯರ ಆಹಾರದಲ್ಲಿ ಮಸಾಲೆ ಮಹತ್ವದ್ದು.. ಶುಂಠಿ, ದಾಲ್ಚಿನ್ನಿ, ಏಲಕ್ಕಿ, ಲವಂಗ ಮುಂತಾದ ಮಾಲಿನ್ಯ ನಿವಾರಕ, ಜೀರ್ಣ ಸಹಾಯಕ ಪದಾರ್ಥಗಳು ಮಸಾಲೆ ಚಹಾದಲ್ಲಿ ಸೇರಿ ಅದು ರುಚಿ ಮಾತ್ರವಲ್ಲ, ಔಷಧೀಯ ಗುಣವನ್ನೂ ಕೊಡುತ್ತವೆ.
– ಜೀರ್ಣಾಂಗಗಳ ಕಾರ್ಯಕ್ಷಮತೆ ಹೆಚ್ಚುತ್ತದೆ
– ರೋಗ ನಿರೋಧಕ ಶಕ್ತಿ ಸುಧಾರಿಸುತ್ತದೆ
– ದೇಹವನ್ನು ಬೇಗನೆ ಬೆಚ್ಚಗಾಗಿಸುತ್ತದೆ

ಚಳಿಯ ತೀವ್ರತೆಯಲ್ಲಿ ಒಂದು ಕಪ್ ಮಸಾಲೆ ಚಹಾ ದೇಹಕ್ಕೆ ಚೈತನ್ಯ ತುಂಬುತ್ತದೆ.

ಹರ್ಬಲ್‌ ಟೀ

ಪುದೀನಾ, ರೋಸ್‌ಮೆರಿ, ತುಳಸಿ, ಲೆಮನ್‌ಗ್ರಾಸ್‌ ಮೊದಲಾದ ಗಿಡಮೂಲಿಕೆಗಳಿಂದ ತಯಾರಾಗುವ ಹರ್ಬಲ್‌ ಚಹಾಗಳು ದೇಹಕ್ಕೆ ಹಿತಕರ. ಹರ್ಬಲ್‌ ಟೀ ಕುಡಿದಾಗ
ಗಂಟಲು ನೋವು ಕಡಿಮೆಯಾಗುತ್ತದೆ
ಮೂಗು ಕಟ್ಟಿರುವುದು ಸಡಿಲವಾಗುತ್ತದೆ
ದೇಹದಲ್ಲಿ ನೀರಿನ ಸಮತೋಲನ ಕಾಪಾಡುತ್ತದೆ
ಮನಸ್ಸಿಗೆ ಶಾಂತಿ ಸುಧಾರಣೆ

ಇಂಥ ಚಹಾಗಳ ಘಮಿಸುವ ವಾಸನೆಯೇ ಒಮ್ಮೆ ಕುಡಿಯುವ ಆಸೆಯನ್ನು ಹೆಚ್ಚಿಸುತ್ತದೆ. ಚಳಿಯಲ್ಲಿರುವಾಗ ದೇಹಕ್ಕೆ ನೀರು ಅಗತ್ಯ. ಆದರೆ ತಣ್ಣೀರು ಕುಡಿಯಲು ದೇಹ ಒಪ್ಪದು. ಹರ್ಬಲ್‌ ಟೀ, ಗ್ರೀನ್‌ ಟೀ, ಲೆಮನ್‌ ಟೀ ಎಲ್ಲವೂ ನೀರಿನ ಕೊರತೆಯನ್ನು ತುಂಬುವಷ್ಟಲ್ಲ, ಹೊರಡುವ ಆವಿಯೇ ಕಟ್ಟಿದ ಮೂಗಿಗೆ natural steam therapy ಆಗಿ ನೆರವಾಗುತ್ತದೆ.

ಉಪಯುಕ್ತ ಗಿಡಮೂಲಿಕೆ ಚಹಾಗಳು

ಶುಂಠಿ ಟೀ: ಕಫ ಸಡಿಲಿಸಲು, ಉದರದ ತೊಂದರೆ ನಿವಾರಣೆಗೆ
ಪುದೀನಾ ಟೀ: ಜೀರ್ಣಕ್ರಿಯೆ ಸುಧಾರಣೆ, ತಲೆನೋವು ತಗ್ಗಿಸುವುದು
ತುಳಸಿ ಟೀ: ಶಕ್ತಿ ಬಲಪಡಿಸುವುದು
ಲೆಮನ್‌ಗ್ರಾಸ್ ಟೀ: ದೇಹಕ್ಕೆ ನೈಸರ್ಗಿಕ ಬೆಚ್ಚನೆ, ಅಜೀರ್ಣ ನಿವಾರಣೆ
ಜೇನು–ನಿಂಬೆ ಟೀ: ಗಂಟಲು ನೋವು ಕಡಿಮೆ, ವೈರಲ್‌ ಸೋಂಕಿನಲ್ಲಿ ಆರಾಮ

ಚಳಿಗಾಲಕ್ಕೆ ಚಹಾ ಒಂದೇ ಉತ್ತಮ ಗೆಳೆಯ. ಸೀನು, ಕೆಮ್ಮು, ಗಂಟಲು ನೋವು, ಊಟದ ಅಜೀರ್ಣ ಎಲ್ಲಕ್ಕೂ ಗಿಡಮೂಲಿಕೆ ಚಹಾಗಳು ನೈಸರ್ಗಿಕ ಪರಿಹಾರ. ಚಳಿಯಲ್ಲಿ ಜಾರಿಕೊಂಡು ಕುಳಿತುಕೊಳ್ಳುವುದಕ್ಕಿಂತ ಒಳ್ಳೆಯ ಗ್ರೀನ್‌ ಟೀ ಅಥವಾ ಮಸಾಲೆ ಚಹಾ ಸಿಪ್‌ ಮಾಡಿ, ದೇಹ–ಮನಸ್ಸಿಗೆ ಚೈತನ್ಯ ತುಂಬಿಕೊಳ್ಳಿ.

Exit mobile version