ತಮಿಳುನಾಡಿನಲ್ಲಿ ಮೇಯನೇಸ್ ನಿಷೇಧ: ಹೆಚ್ಚು ತಿನ್ನುವವರಿಗೆ ಅಪಾಯ ಕಟ್ಟಿಟ್ಟಬುತ್ತಿ..!

Film 2025 04 26t155604.125

ತಮಿಳುನಾಡು ಸರ್ಕಾರವು ಆಹಾರ ಪ್ರಿಯರಿಗೆ ಆಘಾತಕಾರಿ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಜನಪ್ರಿಯ ಆಹಾರ ಸಾಮಗ್ರಿಯಾದ ಮೇಯನೇಸ್‌ನ ಉತ್ಪಾದನೆ, ಪ್ಯಾಕೇಜಿಂಗ್ ಮತ್ತು ಮಾರಾಟದ ಮೇಲೆ ಒಂದು ವರ್ಷದ ನಿಷೇಧವನ್ನು ಹೇರಿದೆ. ಈ ಆದೇಶವು ಏಪ್ರಿಲ್ 8, 2025 ರಿಂದ ಜಾರಿಗೆ ಬರಲಿದೆ. ಮೇಯನೇಸ್‌ನಿಂದ ಆರೋಗ್ಯಕ್ಕೆ ಉಂಟಾಗುವ ಅಪಾಯಗಳು ತಿಳಿಯಿರಿ.

ತಮಿಳುನಾಡಿನಲ್ಲಿ ಮೇಯನೇಸ್ ಏಕೆ ನಿಷೇಧ?

ತಮಿಳುನಾಡು ಸರ್ಕಾರದ ಸಾರ್ವಜನಿಕ ಆರೋಗ್ಯ ಇಲಾಖೆಯ ಪ್ರಕಾರ, ಮೇಯನೇಸ್ ಆಹಾರ ವಿಷವಾಗುವ ಜೊತೆಗೆ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಸಾಮಾನ್ಯವಾಗಿ ಪಾಶ್ಚರೀಕರಿಸಿದ ಮೊಟ್ಟೆಗಳಿಂದ ತಯಾರಿಸಲಾಗುವ ಮೇಯನೇಸ್‌ನಲ್ಲಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾದಂತಹ ಮಾರಕ ಸೂಕ್ಷ್ಮಾಣುಗಳು ಬೆಳೆಯುವ ಸಾಧ್ಯತೆ ಇದೆ. ಅನೇಕ ಹೋಟೆಲ್‌ಗಳಲ್ಲಿ ಸ್ವಚ್ಛವಲ್ಲದ ಕೋಳಿ ಮೊಟ್ಟೆಗಳನ್ನು ಬಳಸುವುದರಿಂದ ಮೇಯನೇಸ್ ಬೇಗನೆ ಹಾಳಾಗುತ್ತದೆ. ಇದನ್ನು ರೆಫ್ರಿಜರೇಟರ್‌ನಲ್ಲಿ ದೀರ್ಘಕಾಲ ಸಂಗ್ರಹಿಸಿದರೂ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ತೆಲಂಗಾಣ ಸರ್ಕಾರವೂ ಈಗಾಗಲೇ ಮೇಯನೇಸ್‌ನ ಮೇಲೆ ನಿಷೇಧವನ್ನು ವಿಧಿಸಿದೆ, ಇದು ಈ ಆಹಾರ ಪದಾರ್ಥದ ಅಪಾಯಕಾರಿ ಸ್ವರೂಪವನ್ನು ಎತ್ತಿ ತೋರಿಸುತ್ತದೆ.

ಮೇಯನೇಸ್‌ನಿಂದ ಆಗುವ ಆರೋಗ್ಯ ಸಮಸ್ಯೆಗಳು

ಆರೋಗ್ಯ ತಜ್ಞರ ಪ್ರಕಾರ, ಮೇಯನೇಸ್‌ನ ಅತಿಯಾದ ಸೇವನೆಯಿಂದ ಕೆಳಗಿನ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು:

Exit mobile version