ಮಾವಿನ ಹಣ್ಣು ತಿನ್ನೋ ಮುನ್ನ ಬಿ ಕೇರ್ ಫುಲ್..!

ಮಾವಿನ ಹಣ್ಣು ತಿಂದವರಲ್ಲಿ ಕಂಡು ಬರ್ತಿದೆ ಈ ರೋಗಗಳು..!

Film 2025 04 26t170656.083

ಮಾವಿನ ಹಣ್ಣು ತಿನ್ನೋ ಮುನ್ನ ಎಚ್ಚರ. ಬೇಸಿಗೆ ಕಾಲ ಬಂತು ಅಂದ್ರೆ ಜನ ಮಾವಿನ ಹಣ್ಣನ್ನ ನೆನೆಯುತ್ತಾರೆ.ಆದ್ರೆ ಈಗ ಅದೇ ಮಾವಿನಹಣ್ಣು ತಿಂದವರಲ್ಲಿ ರೋಗ ಕಂಡು ಬರ್ತಿದೆ.
ಮಾವಿನ ಹಣ್ಣನ್ನು, ಹಣ್ಣುಗಳ ರಾಜ ಅಂತಾನೇ ಕರೀತಾರೆ. ಬೇಸಿಗೆ ಆರಂಭವಾಯ್ತು ಅಂದ್ರೆ ಮಾವು, ಹಲಸಿನ ಹಣ್ಣು ಕಾಲ ಕೂಡ ಶುರುವಾಯ್ತು ಅಂತಾನೆ. ಇನ್ನೂ ಈ ಸೀಸನ್‌‌ನಲ್ಲಿ ಸಿಗುವ ಮಾವಿನ ಹಣ್ಣು ತಿನ್ನಲು ಜನ ಕಾಯುತ್ತಿರುತ್ತಾರೆ. ಮಾವಿನ ಹಣ್ಣುಗಳ ರಾಶಿ ಮಾರ್ಕೆಟ್‌‌‌‌ಗೆ ಎಂಟ್ರಿ ಆಗಿದೆ. ಆದ್ರೆ ಶಾಕಿಂಗ್ ವಿಚಾರ ಅಂದ್ರೆ ಎಲ್ಲರ ನೆಚ್ಚಿನ ಮಾವಿನ ಹಣ್ಣುಗಳು ಜನರಿಗೆ ಕಾಯಿಲೆ ತರುತ್ತೆ, ಈ ಸೀಸನ್‌‌‌ನಲ್ಲಿ ಸಿಗುತ್ತಿರುವ ಮಾವಿನ ಹಣ್ಣುಗಳಲ್ಲಿ ಹೆಚ್ಚಾಗಿ ಕೇಮಿಕಲ್‌‌‌ ಬಳಕೆ ಆಗ್ತೀದೆ ಮತ್ತು ಇದರಿಂದ ಜನರ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.

ರಾಸಾಯನಿಕ ಮಾವಿನ ಹಣ್ಣು ಕಂಡು ಹಿಡಿಯುವುದು ಹೇಗೆ?
1) ಮಾವಿನಹಣ್ಣು ನೀರಲ್ಲಿ ಮುಳುಗಿದ್ರೆ ರಾಸಾಯನಿಕ ಇರೋದು ಖಚಿತ..!

2) ಮಾವಿನ ಹಣ್ಣಿನ ತೊಟ್ಟಿನ ಭಾಗ ಹಣ್ಣಾಗಿರುವುದಿಲ್ಲ

ಮಕ್ಕಳಿಂದ ಮುದುಕರವರೆಗೂ ಎಲ್ಲರಿಗೂ ಮಾವಿನ ಹಣ್ಣು ಅಂದ್ರೆ ಬಲು ಇಷ್ಟ. ಸೀಸನಲ್ ಹಣ್ಣು ತಿನ್ನಲು ಮುಗಿಬೀಳುವವರು ಈಗ ಯೋಚನೆ ಮಾಡಲೇಬೇಕಿದೆ. ಯಾಮಾರಿದ್ರೆ ಯಮಲೋಕದ ಕದ ತಟ್ಟಬೇಕಾಗುತ್ತೆ ಎನ್ನುವಂತಹ ಭಯವನ್ನು ಜನರು ಕೂಡ ಹೊರ ಹಾಕುತ್ತಿದ್ದಾರೆ. ಮಾವಿನ ಕಾಯಿಯನ್ನು ಹಣ್ಣು ಮಾಡಲು ಅನೇಕ ರಾಸಾಯನಿಕ ಬಳಕೆ ಮಾಡ್ತಿರುವುದರಿಂದ ಅಂತಹ ಮಾವಿನಹಣ್ಣನ್ನು ತಿಂತಿರುವ ಜನರಿಗೂ ಕೂಡ ಈಗಾಗಲೇ ಗಂಟಲು ಕೆರೆತ, ತುರಿಕೆ, ಚರ್ಮದ ಸಮಸ್ಯೆ, ಅಲರ್ಜಿಯಂತಹ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎನ್ನುವಂತಹ ಆತಂಕ ಕೂಡ ಹೊರ ಹಾಕುತ್ತಿದ್ದಾರೆ.
ಎಲ್ಲರ ನೆಚ್ಚಿನ ಮಾವಿನಹಣ್ಣು ಇದೀಗ ಜನರ ಪಾಲಿಕೆ ಕಂಟಕವಾಗಿದೆ. ಹಣ್ಣುಗಳ ರಾಜನಾದ ಮಾವಿನ ಹಣ್ಣು ರಾಸಾಯನಿಕ ಮುಕ್ತವಾಗಿ ಜನರಿಗೆ ಸಿಗಲಿ ಎನ್ನುವುದೇ ನಮ್ಮ ಆಶಯ.

Exit mobile version