ನಿಮ್ಮ ಬಳಿ ಆಪಲ್ ಐಫೋನ್ ಇದೆಯಾ? ಹಾಗಾದರೆ, ಈ ಸುದ್ದಿ ನಿಮಗಾಗಿ ಕಾದಿದೆ. ಇತ್ತೀಚೆಗೆ ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ ರಿಸರ್ಚ್ (NBER) ಪ್ರಕಟಿಸಿದ ಒಂದು ವರದಿ ಬೆಚ್ಚಿಬೀಳಿಸಿದ್ದು, ಐಫೋನ್ ಬಳಕೆಯಿಂದ ಸಂತಾನಹೀನತೆ (ಬಂಜೆತನ) ಸಮಸ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ ಎಂದು ಹೇಳಲಾಗಿದೆ. ಕೇವಲ ವಯಸ್ಕರಲ್ಲ, ಬದಲಿಗೆ ಹದಿಹರೆಯದವರು ಸೇರಿದಂತೆ ಎಲ್ಲಾ ವಯೋಮಾನದ ಐಫೋನ್ ಬಳಕೆದಾರರಲ್ಲಿ ಈ ಸಮಸ್ಯೆ ತೀವ್ರವಾಗಿ ಕಂಡುಬಂದಿದೆ.
ಅಮೆರಿಕದಲ್ಲಿ ನಡೆಸಲಾದ ಈ ಸಂಶೋಧನೆಯು 1980 ರಿಂದ 2024 ರವರೆಗಿನ ಬಂಜೆತನ ಪ್ರಕರಣಗಳನ್ನು ಆಧರಿಸಿದೆ. 2007 ರಲ್ಲಿ ಐಫೋನ್ ಬಿಡುಗಡೆಯಾದ ನಂತರದ ಅಂಕಿ-ಅಂಶಗಳು ಅತ್ಯಂತ ಗಂಭೀರವಾಗಿವೆ. 2007 ರಿಂದ 2024 ರ ಅವಧಿಯಲ್ಲಿ ಅಮೆರಿಕದಲ್ಲಿ ಶಿಶು ಜನನ ಪ್ರಮಾಣದಲ್ಲಿ ಭಾರೀ ಕುಸಿತ ಕಾಣಿಸಿದೆ. ಇದು ಕೇವಲ ಅಮೆರಿಕಕ್ಕೆ ಸೀಮಿತವಲ್ಲ, ಜಾಗತಿಕವಾಗಿಯೂ ಐಫೋನ್ ಹಾಗೂ ಇತರೆ ಸ್ಮಾರ್ಟ್ಫೋನ್‌ಗಳ ಸಿಗ್ನಲ್ ಪ್ರಭಾವದಿಂದ ಸಂತಾನಹೀನತೆ ಹೆಚ್ಚಾಗುತ್ತಿರುವುದು ದಾಖಲಾಗಿದೆ.
ವಯೋಮಾನವಾರು ಜನನ ಪ್ರಮಾಣ ಕುಸಿತದ ಅಂಕಿ-ಅಂಶಗಳು
-
15 ರಿಂದ 19 ವರ್ಷ ವಯಸ್ಸಿನ ಮಹಿಳೆಯರು: ಶೇ. 70ರಷ್ಟು ಜನನ ಪ್ರಮಾಣ ಕುಸಿತ – ಇದು ಅತ್ಯಂತ ಆಘಾತಕಾರಿ ಅಂಕಿ ಅಂಶ.
-
20 ರಿಂದ 24 ವರ್ಷ ವಯಸ್ಸಿನ ಮಹಿಳೆಯರು: ಶೇ. 47ರಷ್ಟು ಕುಸಿತ.
-
30 ರಿಂದ 34 ವರ್ಷ ವಯಸ್ಸಿನ ಮಹಿಳೆಯರು: ಶೇ. 7ರಷ್ಟು ಕುಸಿತ.
-
35 ರಿಂದ 39 ವರ್ಷ ವಯಸ್ಸಿನ ಮಹಿಳೆಯರು: ಶೇ. 14ರಷ್ಟು ಕುಸಿತ.
ಐಫೋನ್ ಹೇಗೆ ಸಂತಾನಹೀನತೆಗೆ ಕಾರಣವಾಗುತ್ತದೆ?
ಸಂಶೋಧಕರ ಪ್ರಕಾರ, ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ.
-
ಮೊಬೈಲ್ ಸಿಗ್ನಲ್‌ನ ವಿಕಿರಣ ಪ್ರಭಾವ: ಐಫೋನ್ ಸೇರಿದಂತೆ ಸ್ಮಾರ್ಟ್ಫೋನ್‌ಗಳು ಹೊರಸೂಸುವ ರೇಡಿಯೋ ಫ್ರೀಕ್ವೆನ್ಸಿ ವಿಕಿರಣವು (RF-EMF) ಪುರುಷರಲ್ಲಿ ಸ್ಪರ್ಮ್‌ಗಳ ಸಂಖ್ಯೆ ಹಾಗೂ ಗುಣಮಟ್ಟವನ್ನು ಕುಗ್ಗಿಸುತ್ತದೆ. ಮಹಿಳೆಯರಲ್ಲಿ ಅಂಡಾಣುಗಳ ಬೆಳವಣಿಗೆಗೂ ಅಡ್ಡಿಯಾಗುತ್ತದೆ. ಪಾಕೆಟ್‌ನಲ್ಲಿ ಅಥವಾ ಹತ್ತಿರದಲ್ಲಿ ಐಫೋನ್ ಕ್ಯಾರಿ ಮಾಡುವುದರಿಂದ ಸಂತಾನೋತ್ಪತ್ತಿ ಅಂಗಗಳ ಮೇಲೆ ನೇರ ಪರಿಣಾಮ ಬೀರುತ್ತದೆ.
-
ಅಶ್ಲೀಲ ದೃಶ್ಯಗಳ ವೀಕ್ಷಣೆ: ಮೊಬೈಲ್‌ನಲ್ಲಿ ಸುಲಭವಾಗಿ ಅಶ್ಲೀಲತೆ ಲಭ್ಯವಾಗುವುದು ಸಹ ದೊಡ್ಡ ಕಾರಣ. ಅತಿಯಾದ ಅಶ್ಲೀಲ ವೀಕ್ಷಣೆಯು ಮಾನಸಿಕ ಮತ್ತು ದೈಹಿಕವಾಗಿ ನಿಜವಾದ ಸಂಬಂಧಗಳಲ್ಲಿ ಆಸಕ್ತಿ ಕಡಿಮೆ ಮಾಡುತ್ತದೆ. ಇದರಿಂದಾಗಿ ವಿವಾಹೇತರ ಸಂಬಂಧಗಳು, ತಡವಾದ ವಿವಾಹ, ಮತ್ತು ಸಂತಾನೋತ್ಪತ್ತಿಯ ಬಗ್ಗೆ ಅನಾಸಕ್ತಿ ಹೆಚ್ಚಾಗಿ ಜನನ ಪ್ರಮಾಣ ಕುಸಿಯುತ್ತಿದೆ.
ಐಫೋನ್ ಬಳಕೆದಾರರೇ ಮಕ್ಕಳೇ ಆಗಲ್ವಾ?
ಈ ವರದಿಯು ಮತ್ತೊಂದು ಪ್ರಶ್ನೆಯನ್ನು ಎತ್ತುತ್ತದೆ – ಐಫೋನ್ ಬಳಕೆಯಿಂದಾಗಿಯೇ ಮುಂದಿನ ಪೀಳಿಗೆಯೇ ಇಲ್ಲದಂತಾಗುತ್ತದೆಯೇ? 15-19 ವರ್ಷದ ಹದಿಹರೆಯದ ಮಹಿಳೆಯರಲ್ಲಿ ಜನನ ಪ್ರಮಾಣ ಶೇ.70ರಷ್ಟು ಕುಸಿದಿರುವುದು ಎಚ್ಚರಿಕೆಯ ಗಂಟೆಯಾಗಿದೆ. ಮುಂದಿನ 10-20 ವರ್ಷಗಳಲ್ಲಿ ಯುವ ಪೀಳಿಗೆಯಲ್ಲಿ ತಾಯಂದಿರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ.
ನಿಜವಾಗಿಯೂ ದೋಷ ಯಾರದು?
ಸಂಪೂರ್ಣವಾಗಿ ಐಫೋನ್ ಮಾತ್ರ ಕಾರಣ ಎನ್ನುವುದು ಸರಿಯಲ್ಲ. ಸಿಗ್ನಲ್ ವಿಕಿರಣ, ನಿದ್ರಾಹೀನತೆ, ಒತ್ತಡ, ಲೈಂಗಿಕತೆಯ ಕುರಿತಾದ ಬದಲಾದ ದೃಷ್ಟಿಕೋನ ಇವೆಲ್ಲವೂ ಜಂಟಿಯಾಗಿ ಸಂತಾನಹೀನತೆಗೆ ಕಾರಣವಾಗುತ್ತಿವೆ.
ನೀವು ಐಫೋನ್ ಬಳಸುತ್ತಿದ್ದರೆ, ಭಯಪಡುವ ಅಗತ್ಯವಿಲ್ಲ, ಆದರೆ ಎಚ್ಚರವಿರಲೇಬೇಕು. ದಿನಕ್ಕೆ ಎಷ್ಟು ಗಂಟೆ ಫೋನ್ ಬಳಸುತ್ತೀರಿ? ಅದನ್ನು ಎಲ್ಲಿ ಇಡುತ್ತೀರಿ? ನಿಮ್ಮ ಜೀವನಶೈಲಿ ಹೇಗಿದೆ? ಎಂಬುದರ ಬಗ್ಗೆ ಗಮನ ಹರಿಸಿ. ಅತಿಯಾದ ಬಳಕೆ, ಪಾಕೆಟ್‌ನಲ್ಲಿ ಫೋನ್ ಇಡುವುದು, ರಾತ್ರಿ ಹೊತ್ತು ಬೆಡ್‌ನಲ್ಲಿ ಫೋನ್ ಬಳಸುವುದು ಇವೆಲ್ಲವನ್ನೂ ಕಡಿಮೆ ಮಾಡಿ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ಸ್ಮಾರ್ಟ್‌ಫೋನ್ ಬುದ್ಧಿವಂತಿಕೆಯಿಂದ ಬಳಸಿ, ಆರೋಗ್ಯಕರ ಜೀವನವನ್ನು ಆಯ್ಕೆ ಮಾಡಿಕೊಳ್ಳಿ.
