ನೀವು ರಾತ್ರಿ 2-3 ಗಂಟೆಯವರೆಗೆ ಮೊಬೈಲ್ ಸ್ಕ್ರೋಲ್ ಮಾಡುತ್ತೀರಾ? ಬ್ರೇಕ್‌ಫಾಸ್ಟ್ ಬಿಟ್ಟು ಕಾಫಿ ಕುಡಿದು ಆಫೀಸ್ ಧಾವಿಸುತ್ತೀರಾ? ವ್ಯಾಯಾಮಕ್ಕೆ “ಟೈಮಿಲ್ಲ” ಎನ್ನುತ್ತೀರಾ? ಈ ಎಲ್ಲ “ಸಣ್ಣ” ತಪ್ಪುಗಳು ನಿಮ್ಮ ಸಂತಾನೋತ್ಪತ್ತಿ ಸಾಮರ್ಥ್ಯವನ್ನೇ ನಾಶ ಮಾಡುತ್ತಿವೆ ಎಂಬುದು ಇಂದಿನ ಕಹಿ ಸತ್ಯ.
ಪ್ರಸಿದ್ಧ ಸಂತಾನೋತ್ಪತ್ತಿ ತಜ್ಞೆ ಡಾ. ಕಾಮಿನಿ ಎ. ರಾವ್ ಅವರು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಬೆಚ್ಚಿಬೀಳಿಸುವ ಅಂಕಿಅಂಶಗಳನ್ನು ಬಿಚ್ಚಿಟ್ಟಿದ್ದಾರೆ. “ಕಳೆದ 30 ವರ್ಷಗಳಲ್ಲಿ ಭಾರತದಲ್ಲಿ ಬಂಜೆತನದ ಪ್ರಮಾಣ ಎರಡು ಪಟ್ಟು ಹೆಚ್ಚಾಗಿದೆ. ಇದಕ್ಕೆ 100% ಕಾರ್ಥಕ ಜೀವನಶೈಲಿಯೇ ಕಾರಣ,” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಭಾರತದಲ್ಲಿ ಬಂಜೆತನ ಆಘಾತಕಾರಿ ಏರಿಕೆ:
- 1992–93 → 22.4%
- 2005–06 → 25.3%
- 2015–16 → 30.7%
- 2019–21 → 42.9% (NFHS-5)
- 2023 WHO ವರದಿ → ಭಾರತದಲ್ಲಿ ಪ್ರತಿ 6 ಜೋಡಿಗಳಲ್ಲಿ ಒಂದು ಜೋಡಿಗೆ ಬಂಜೆತನ ಸಮಸ್ಯೆ!
ಯಾರಲ್ಲಿ ಹೆಚ್ಚು ಸಮಸ್ಯೆ?
- 40% → ಮಹಿಳೆಯರಲ್ಲಿ
- 40% → ಪುರುಷರಲ್ಲಿ (ವೀರ್ಯದ ಗುಣಮಟ್ಟ ಕಡಿಮೆ)
- 10% → ಇಬ್ಬರಲ್ಲೂ ಸಮಸ್ಯೆ
- 10% → ಕಾರಣವೇ ಗೊತ್ತಾಗದ ಸ್ಥಿತಿ
ಬಂಜೆತನಕ್ಕೆ ನೇರ ಕಾರಣವಾಗುತ್ತಿರುವ 10 ತಪ್ಪುಗಳು:
- ರಾತ್ರಿ 12ಕ್ಕಿಂತ ಮೇಲೆ ಮಲಗುವುದು – ಮತ್ತು ಬೆಳಗ್ಗೆ 8-9ಕ್ಕೆ ಎದ್ದೇಳುವುದು
- ಜಂಕ್ ಫುಡ್, ಸಕ್ಕರೆ ಜಾಸ್ತಿ ಆಹಾರ, ಪ್ರೊಟಾಟೋ ಚಿಪ್ಸ್, ಕೋಲ್ಡ್ ಡ್ರಿಂಕ್ಸ್
- ವ್ಯಾಯಾಮ ಶೂನ್ಯ – ದಿನಕ್ಕೆ 10 ಸಾವಿರ ಹೆಜ್ಜೆ ಕೂಡ ಇಲ್ಲ
- ಮೊಬೈಲ್-ಲ್ಯಾಪ್‌ಟಾಪ್ ಅನ್ನು ತೊಡೆ ಮೇಲಿಟ್ಟುಕೊಂಡು ಕೆಲಸ ಮಾಡುವುದು (ವೀರ್ಯಾಣುಗಳಿಗೆ ತಾಪಮಾನ ಏರಿಕೆ)
- ಧೂಮಪಾನ, ಮದ್ಯಪಾನ – ವೀರ್ಯಾಣುಗಳ ಸಂಖ್ಯೆ 50% ಕಡಿಮೆ ಮಾಡುತ್ತದೆ
- ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ನೀರು ಕುಡಿಯುವುದು (BPA ಹಾರ್ಮೋನ್ ಅಸಮತೋಲನ ಉಂಟುಮಾಡುತ್ತದೆ)
- ಒತ್ತಡ-ಖಿನ್ನತೆ – ಕಾರ್ಟಿಸಾಲ್ ಹಾರ್ಮೋನ್ ಅಂಡೋತ್ಪತ್ತಿಯನ್ನು ತಡೆಯುತ್ತದೆ
- ವಾಯು-ಜಲ ಮಾಲಿನ್ಯ – ವೀರ್ಯಾಣು DNAಗೆ ಡ್ಯಾಮೇಜ್
- ಅತಿಯಾದ ಬೊಜ್ಜು ಅಥವಾ ಅತಿ ತೆಳ್ಳಗಿರುವು
- ತಡೆಯಾಗಿ ಮದುವೆ – 30 ವರ್ಷದ ನಂತರ ಮಹಿಳೆಯರಲ್ಲಿ ಅಂಡಾಣು ಗುಣಮಟ್ಟ ಕ್ಷೀಣಿಸುತ್ತದೆ
ವೈದ್ಯರು ಹೇಳೋ ಸಿಂಪಲ್ ಸಲಹೆಗಳು:
- ರಾತ್ರಿ 10:30ಕ್ಕೆ ಮಲಗಿ, ಬೆಳಗ್ಗೆ 6ಕ್ಕೆ ಎದ್ದೇಳಿ
- ದಿನಕ್ಕೆ 30 ನಿಮಿಷ ವಾಕಿಂಗ್ ಅಥವಾ ಯೋಗ ಅನಿವಾರ್ಯ
- ಹಣ್ಣು, ತರಕಾರಿ, ಬೀನ್ಸ್, ಬೀಜಗಳು, ಒಮೆಗಾ-3 ಸಮೃದ್ಧ ಆಹಾರ
- ವಾರಕ್ಕೊಮ್ಮೆಯಾದರೂ ಸಂಗಾತಿಯೊಂದಿಗೆ ಗುಣಮಟ್ಟದ ಸಮಯ ಕಳೆಯಿರಿ
- ಮದ್ಯ-ಧೂಮಪಾನ ಸಂಪೂರ್ಣ ಬಿಟ್ಟುಬಿಡಿ
- ಮೊಬೈಲ್ ಬಳಕೆಯನ್ನು ದಿನಕ್ಕೆ 2 ಗಂಟೆಗೆ ಇಳಿಸಿ
- ವಾರ್ಷಿಕ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ
“ನಾವು ಇವತ್ತು ಆರೋಗ್ಯಕ್ಕಾಗಿ ಖರ್ಚು ಮಾಡದಿದ್ದರೆ, ನಾಳೆ ಬಂಜೆತನ ಚಿಕಿತ್ಸೆಗೆ ಲಕ್ಷಾಂತರ ಖರ್ಚು ಮಾಡಬೇಕಾಗುತ್ತದೆ,” ಎಂಬುದು ಡಾ. ಕಾಮಿನಿ ರಾವ್ ಅವರ ಎಚ್ಚರಿಕೆ.
ಈ ಸ್ಟೋರಿ ಓದಿದ ಮೇಲಾದರೂ ಎಚ್ಚೆತ್ತುಕೊಳ್ಳಿ, ನಿಮ್ಮ ಜೀವನಶೈಲಿ ಬದಲಾಯಿಸಿ, ನಿಮ್ಮ ಕುಟುಂಬದ ಭವಿಷ್ಯವನ್ನು ಉಳಿಸಿ.
