ಸೈಲೆಂಟ್ ಕಿಲ್ಲರ್: ಹೃದಯಾಘಾತಕ್ಕೆ 2 ಗಂಟೆ ಮೊದಲು ದೇಹದಲ್ಲಿ ಈ ಲಕ್ಷಣಗಳು ಕಂಡ್ರೆ ಡೇಂಜರ್!

1 (16)

ಹೃದಯಾಘಾತ, ಇಂದು ‘ಸೈಲೆಂಟ್ ಕಿಲ್ಲರ್’ ಎಂದೇ ಖ್ಯಾತವಾಗಿದೆ. ಜಾಗತಿಕವಾಗಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಯುವಕರು, ಮಧ್ಯವಯಸ್ಕರು, ಹಿರಿಯರು ಎಂಬ ಭೇದವಿಲ್ಲದೆ ಈ ಮಾರಕ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ, ಈಗಲೇ ಎಚ್ಚೆತ್ತುಕೊಳ್ಳುವುದು ಅತ್ಯಗತ್ಯ.

ಹೃದಯಾಘಾತವು ಇದ್ದಕ್ಕಿದ್ದಂತೆ ಸಂಭವಿಸುತ್ತದೆ ಮತ್ತು ಕೆಲವೇ ನಿಮಿಷಗಳಲ್ಲಿ ಎದೆನೋವು ತೀವ್ರಗೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯಸ್ಸಿನವರಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಹೃದಯಾಘಾತವು ವೈದ್ಯಕೀಯ ತುರ್ತುಸ್ಥಿತಿಯಾಗಿದ್ದು, ರೋಗಿಯು ಸಾಮಾನ್ಯವಾಗಿ ಎದೆನೋವು, ದವಡೆ, ಕುತ್ತಿಗೆ, ಅಥವಾ ಬೆನ್ನುನೋವನ್ನು ಅನುಭವಿಸುತ್ತಾನೆ.

ADVERTISEMENT
ADVERTISEMENT

YouTube video player

ಹೃದಯಾಘಾತಕ್ಕೆ ಕೆಲವು ಗಂಟೆಗಳ ಮೊದಲು ದೇಹದಲ್ಲಿ ಕೆಲವು ವಿಶಿಷ್ಟ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದರೆ, ಇವುಗಳನ್ನು ಕೆಲವರು ನಿರ್ಲಕ್ಷಿಸಿದರೆ, ಸಮಸ್ಯೆ ಗಂಭೀರವಾಗಿ, ಕೆಲವೊಮ್ಮೆ ಜೀವಕ್ಕೇ ಅಪಾಯವಾಗಬಹುದು. ಆದ್ದರಿಂದ, ಈ ಲಕ್ಷಣಗಳ ಬಗ್ಗೆ ಅರಿವು ಮುಖ್ಯ.

ಹೃದಯಾಘಾತಕ್ಕೆ 2 ಗಂಟೆ ಮೊದಲು ದೇಹದಲ್ಲಿ ಕಾಣಿಸುವ ಲಕ್ಷಣಗಳು:

1) ತೀವ್ರ ಎದೆನೋವು: ಎದೆಯ ಮಧ್ಯಭಾಗದಲ್ಲಿ ಒತ್ತಡ ಅಥವಾ ತೀವ್ರ ನೋವು ಕಾಣಿಸಿಕೊಳ್ಳುತ್ತದೆ.

2) ದೇಹದ ಇತರ ಭಾಗಗಳಲ್ಲಿ ನೋವು: ಎಡಗಡೆ ಭುಜ, ಕುತ್ತಿಗೆ, ಬೆನ್ನು, ಅಥವಾ ದವಡೆಯಲ್ಲಿ ನೋವು ಕಾಣಿಸಿಕೊಂಡು, ಕ್ರಮೇಣ ಹೊಟ್ಟೆಯ ಕಡೆಗೆ ಚಲಿಸಬಹುದು.

3) ಉಸಿರಾಟದ ತೊಂದರೆ: ಉಸಿರುಗಟ್ಟಿದಂತಹ ಭಾವನೆ, ಲಘು ದೈಹಿಕ ಚಟುವಟಿಕೆಯಿಂದಲೂ ಉಸಿರಾಟದ ಸಮಸ್ಯೆ ಉಂಟಾಗುತ್ತದೆ.

4) ಅತಿಯಾದ ಬೆವರುವಿಕೆ: ಇದ್ದಕ್ಕಿದ್ದಂತೆ ತಣ್ಣನೆಯ ಬೆವರುವಿಕೆ ಆರಂಭವಾಗುತ್ತದೆ.

5) ತಲೆತಿರುಗುವಿಕೆ: ತೀವ್ರವಾದ ತಲೆಸುತ್ತುವಿಕೆ, ಕೆಲವೊಮ್ಮೆ ಪ್ರಜ್ಞೆ ತಪ್ಪುವಿಕೆ ಕಾಣಿಸಿಕೊಳ್ಳಬಹುದು.

ತಜ್ಞರ ಸಲಹೆ: ಈ ಲಕ್ಷಣಗಳು ಕಂಡುಬಂದರೆ ಗಾಬರಿಯಾಗದೆ, ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ. ಸಕಾಲಿಕ ಚಿಕಿತ್ಸೆ ಜೀವ ಉಳಿಸಬಹುದು.

Exit mobile version