ಶುಂಠಿ ಟೀ ಅಥವಾ ಲೆಮನ್ ಟೀ..ನಿಮ್ಮ ದೇಹಕ್ಕೆ ಯಾವುದು ಬೆಸ್ಟ್‌..!

Untitled design 2025 12 27T142717.953

ಚಹಾ ಕೇವಲ ಪಾನೀಯವಲ್ಲ, ಅದೊಂದು ಭಾವನೆ. ಆದರೆ ಇಂದಿನ ದಿನಗಳಲ್ಲಿ ಜನರು ಸಕ್ಕರೆ ಮತ್ತು ಹಾಲಿನ ಟೀ ಬಿಟ್ಟು ಗಿಡಮೂಲಿಕೆ ಅಥವಾ ಹಣ್ಣಿನ ಸಾರವಿರುವ ಟೀ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಅದರಲ್ಲಿ ಪ್ರಮುಖವಾದವು ಶುಂಠಿ ಮತ್ತು ನಿಂಬೆ ಚಹಾ. ಇವೆರಡೂ ವಿಭಿನ್ನ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ.

ಶುಂಠಿ ಚಹಾದ ಮ್ಯಾಜಿಕ್:

ಶುಂಠಿಯು ನೈಸರ್ಗಿಕವಾಗಿ ಉರಿಯೂತ ನಿವಾರಕ (Anti-inflammatory) ಗುಣಗಳನ್ನು ಹೊಂದಿದೆ. ನೀವು ಚಳಿಗಾಲದಲ್ಲಿ ಗಂಟಲು ನೋವು, ಕೆಮ್ಮು ಅಥವಾ ಶೀತದಿಂದ ಬಳಲುತ್ತಿದ್ದರೆ ಶುಂಠಿ ಟೀ ನಿಮಗೆ ಮೊದಲ ಆಯ್ಕೆಯಾಗಲಿ.

ಕೀಲು ನೋವುಗೆ ಮದ್ದು: ಹೌದು ಇದರಲ್ಲಿರುವ ‘ಜಿಂಜರಾಲ್’ ಅಂಶ ಕೀಲುಗಳ ಊತ ಮತ್ತು ನೋವನ್ನು ಕಡಿಮೆ ಮಾಡುತ್ತದೆ.ಇನ್ನೂ ಜೀರ್ಣಕ್ರಿಯೆಗೂ ಸಹ ಇದು ಉತ್ತಮವಾಗಿ ಸಹಾಯ ಮಾಡುತ್ತದೆ. ಹೊಟ್ಟೆಯಲ್ಲಿ ಗ್ಯಾಸ್ ಅಥವಾ ಜೀರ್ಣಕ್ರಿಯೆಯ ಸಮಸ್ಯೆ ಇದ್ದರೆ, ಶುಂಠಿ ಟೀ ಕುಡಿಯುವುದರಿಂದ ತಕ್ಷಣದ ಆರಾಮ ಸಿಗುತ್ತದೆ. ದಿನವಿಡೀ ದೈಹಿಕವಾಗಿ ದಣಿದವರಿಗೆ ಈ ಟೀ ಮರುಜೀವ ನೀಡುತ್ತದೆ.

ಲೆಮನ್ ಟೀಯ ಲಾಭಗಳು:

ಮನಸ್ಸನ್ನು ಪ್ರಶಾಂತವಾಗಿಡಲು ಮತ್ತು ದೇಹವನ್ನು ಹಗುರಗೊಳಿಸಲು ಲೆಮನ್ ಟೀ ಅತ್ಯುತ್ತಮ.

ಒತ್ತಡ ನಿವಾರಣೆಗೆ ಇದು ಸಹಾಯ ಮಾಡುತ್ತದೆ. ನಿಂಬೆಯ ಸುವಾಸನೆಯು ಮೆದುಳನ್ನು ಶಾಂತಗೊಳಿಸುತ್ತದೆ. ಹೆಚ್ಚಿನ ಕೆಲಸದ ಒತ್ತಡ ಅಥವಾ ತಲೆನೋವು ಇದ್ದಾಗ ಇದು ರಾಮಬಾಣ. ಲೆಮನ್ ಟೀ ಸೇವನೆಯಿಂದ ದೇಹದಲ್ಲಿರುವ ಕಲ್ಮಶಗಳು (Toxins) ಹೊರಹೋಗುತ್ತವೆ. ಇದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಇದರೊಟ್ಟಿಗೆ ತೂಕ ಇಳಿಕೆಗೂ ಸಹಾಯ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಲೆಮನ್ ಟೀ ಸೇವಿಸುವುದು ಹೆಚ್ಚು ಪರಿಣಾಮಕಾರಿ.

ಯಾವುದು ಉತ್ತಮ ?

ಇದು ಸಂಪೂರ್ಣವಾಗಿ ನಿಮ್ಮ ಅಂದಿನ ದೈಹಿಕ ಸ್ಥಿತಿಯ ಮೇಲೆ ಅವಲಂಬಿತವಾಗಿದೆ. ನಿಮಗೆ ಉಸಿರಾಟದ ತೊಂದರೆ ಅಥವಾ ಜೀರ್ಣಕ್ರಿಯೆಯ ಸಮಸ್ಯೆ ಇದ್ದರೆ ಶುಂಠಿ ಟೀ ಆರಿಸಿ. ಒಂದು ವೇಳೆ ನೀವು ಮಾನಸಿಕವಾಗಿ ದಣಿದಿದ್ದರೆ ಅಥವಾ ತೂಕ ಇಳಿಸುವ ಗುರಿ ಹೊಂದಿದ್ದರೆ ಲೆಮನ್ ಟೀ ಉತ್ತಮ.

ಚಹಾ ತಯಾರಿಸುವಾಗ ನೆನಪಿಡಬೇಕಾದ ಅಂಶ:

ಹೆಚ್ಚಿನವರು ಚಹಾವನ್ನು ಅತಿಯಾಗಿ ಕುದಿಸುತ್ತಾರೆ, ಇದರಿಂದ ಚಹಾ ಕಹಿಯಾಗುವುದಲ್ಲದೆ ಅದರ ಔಷಧೀಯ ಗುಣಗಳು ನಾಶವಾಗುತ್ತವೆ. ಟೀ ಪುಡಿ ಕುದಿಯುವ ಕೊನೆಯ ಹಂತದಲ್ಲಿ ಶುಂಠಿ ಅಥವಾ ನಿಂಬೆ ರಸವನ್ನು ಸೇರಿಸಿ. ಎರಡು ನಿಮಿಷ ಮುಚ್ಚಿಟ್ಟು ನಂತರ ಸೇವಿಸಿದರೆ ಅದರ ಸಂಪೂರ್ಣ ಲಾಭ ನಿಮ್ಮದಾಗುತ್ತದೆ.

Exit mobile version