ಚಿಕನ್ ಕ್ಯಾಂಡಿ: ಮಕ್ಕಳನ್ನು ಮರುಳು ಮಾಡುವ ಕ್ರಿಸ್ಪಿ ಸ್ನ್ಯಾಕ್!

Shn (26)

ನೀವು ಚಿಕನ್ ಬಿರಿಯಾನಿ, ಚಿಕನ್ 65 ತಿಂದು ಬೇಸರವಾಗಿದ್ದೀರಾ? ಇಲ್ಲಿ ಸಾಮಾನ್ಯ ಚಿಕನ್ ಅನ್ನು ಚಿಕನ್ ಕ್ಯಾಂಡಿ ಆಗಿ ಮಾಡುವ ಸುಲಭ ಮತ್ತು ರುಚಿಕರವಾದ ರೀತಿ ತಿಳಿಸುತ್ತೇವೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಇಷ್ಟಪಡುವ ಈ ಸ್ನ್ಯಾಕ್ ಅನ್ನು ಮನೆಯಲ್ಲೇ ಬ್ರೆಡ್ ಮತ್ತು ಸಾಮಾನ್ಯ ಸಾಮಗ್ರಿಗಳಿಂದ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು

ಮಾಡುವ ವಿಧಾನ:

  1. ಬ್ರೆಡ್ ಪ್ರಿಪರೇಶನ್: ಬ್ರೆಡ್ ಸ್ಲೈಸ್‌ಗಳನ್ನು ವೃತ್ತಾಕಾರದಲ್ಲಿ ಕತ್ತರಿಸಿ, ಉಳಿದ ಭಾಗವನ್ನು ಮಿಕ್ಸರ್ನಲ್ಲಿ ಪುಡಿ ಮಾಡಿ ಇಡಿ.
  2. ಚಿಕನ್ ಮ್ಯಾರಿನೇಶನ್: ಕತ್ತರಿಸಿದ ಚಿಕನ್‌ಗೆ ಉಪ್ಪು, ಕರಿಮೆಣಸು, ಬೆಳ್ಳುಳ್ಳಿ ಪುಡಿ, ಆರಿಗ್ಯಾನೋ ಹಾಕಿ 15 ನಿಮಿಷ ಮ್ಯಾರಿನೇಟ್ ಮಾಡಿ.
  3. ಬ್ರೆಡ್ ಅಸೆಂಬ್ಲಿಂಗ್: ವೃತ್ತಾಕಾರದ ಬ್ರೆಡ್‌ನ ಮೇಲೆ ಮ್ಯಾರಿನೇಟ್ ಮಾಡಿದ ಚಿಕನ್ ಹರಡಿ, ಮಧ್ಯೆ ಐಸ್ ಕ್ರೀಮ್ ಸ್ಟಿಕ್ ಇರಿಸಿ, ಮೇಲೆ ಮತ್ತೊಂದು ಬ್ರೆಡ್ ಸ್ಲೈಸ್ ಒತ್ತಿ ಅಂಟಿಸಿ.
  4. ಕೋಟಿಂಗ್: ಮೈದಾ ಹಿಟ್ಟು, ಖಾರದ ಪುಡಿ, ನೀರು ಕಲಸಿ ದ್ರವರೂಪದ ಬ್ಯಾಟರ್ ತಯಾರಿಸಿ. ಚಿಕನ್ ಕ್ಯಾಂಡಿಯನ್ನು ಮೊದಲು ಬ್ಯಾಟರ್‌ನಲ್ಲಿ ಅದ್ದಿ, ನಂತರ ಬ್ರೆಡ್ ಪುಡಿಯಲ್ಲಿ ರೋಲ್ ಮಾಡಿ.
  5. ಫ್ರೈಯಿಂಗ್: ಕಾದ ಎಣ್ಣೆಯಲ್ಲಿ ಕೆಂಬಣ್ಣ ಬರುವವರೆಗೆ ಕರಿದು, ಪೇಪರ್ ಟವಲ್‌ನಲ್ಲಿ ಎಣ್ಣೆ ಒಸರಲು ಇಡಿ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version