ಪಟಾಕಿಯಿಂದ ಸುಟ್ಟ ಗಾಯವಾದರೆ ತಕ್ಷಣ ಏನು ಮಾಡಬೇಕು? ಇಲ್ಲಿದೆ ಸಿಂಪಲ್ ಮನೆಮದ್ದು!

Untitled design 2025 10 21t082407.640

ಬೆಳಕಿನ ಹಬ್ಬ ಎಂದೇ ಪ್ರಸಿದ್ಧವಾದ ಈ ಹಬ್ಬದಲ್ಲಿ ದೀಪಗಳು, ಪಟಾಕಿಗಳು ಮತ್ತು ಸಿಹಿತಿನಿಸುಗಳು ಮುಖ್ಯ ಪಾತ್ರ ವಹಿಸುತ್ತವೆ. ಆದರೆ, ಪಟಾಕಿಗಳನ್ನು ಸುಡುವಾಗ ಉಂಟಾಗುವ ಅಪಾಯಗಳು ಹಬ್ಬದ ಸಂಭ್ರಮವನ್ನು ಕಸಿದುಕೊಳ್ಳಬಹುದು. ಪ್ರತಿ ವರ್ಷ ದೀಪಾವಳಿ ಸಮಯದಲ್ಲಿ ಸಾವಿರಾರು ಜನರು ಪಟಾಕಿ ಅಥವಾ ದೀಪಗಳಿಂದ ಸುಟ್ಟ ಗಾಯಗಳಿಗೆ ತುತ್ತಾಗುತ್ತಾರೆ. ವಿಶೇಷವಾಗಿ ಮಕ್ಕಳು ಮತ್ತು ಯುವಕರಲ್ಲಿ ಇದು ಹೆಚ್ಚು ಕಂಡುಬರುತ್ತದೆ.

ಹಬ್ಬದ ದಿನಗಳಲ್ಲಿ ವೈದ್ಯರು ರಜೆಯಲ್ಲಿರುವುದರಿಂದ, ಸಣ್ಣ ಗಾಯಗಳಿಗೆ ಮನೆಯಲ್ಲೇ ಪ್ರಥಮ ಚಿಕಿತ್ಸೆ ಮಾಡುವುದು ಅತ್ಯಗತ್ಯ. ಆದರೆ, ತಪ್ಪು ಮದ್ದುಗಳು ಸೋಂಕು ಅಥವಾ ಹೆಚ್ಚಿನ ಹಾನಿಯನ್ನು ಉಂಟುಮಾಡಬಹುದು. ತಜ್ಞ ವೈದ್ಯರ ಸಲಹೆಯನ್ನು ಆಧರಿಸಿ, ಸುಟ್ಟ ಗಾಯಗಳಿಗೆ ಸರಿಯಾದ ಪರಿಹಾರಗಳನ್ನು ನೋಡೋಣ.

ತಕ್ಷಣ ಮಾಡಬೇಕಾದ ಪ್ರಥಮ ಚಿಕಿತ್ಸೆ

  1. ತಣ್ಣೀರಿನ ಧಾರೆ: ಪಟಾಕಿ ಸಿಡಿದು ಸುಟ್ಟುಕೊಂಡ ತಕ್ಷಣ, ಸುಟ್ಟ ಭಾಗವನ್ನು ಸಾಧ್ಯವಾದರೆ ಚೆನ್ನಾಗಿ ಹರಿಯುವ ತಣ್ಣೀರಿನ ಕೆಳಗೆ 15-20 ನಿಮಿಷಗಳ ಕಾಲ ಇರಿಸಿ. ಇದು ಉರಿಯುವಿಕೆಯನ್ನು ಕಡಿಮೆ ಮಾಡಿ, ನೋವನ್ನು ತಗ್ಗಿಸುತ್ತದೆ ಮತ್ತು ಗಾಯವನ್ನು ಆಳವಾಗುವುದರಿಂದ ತಡೆಯುತ್ತದೆ.

  2. ಸ್ವಚ್ಛತೆಗೆ ಪ್ರಾಮುಖ್ಯ: ಗಾಯವನ್ನು ಸಾಬೂನು ಇಲ್ಲದೇ ನೀರಿನಲ್ಲಿ ಮೃದುವಾಗಿ ತೊಳೆಯಿರಿ. ಗಾಯದ ಮೇಲೆ ಉರಿಯುವಂಥ ರಾಸಾಯನಿಕ ಕಣಗಳು ಉಳಿದಿದ್ದರೆ ಅವು ತೊಳೆದು ಹೋಗುತ್ತವೆ.

  3. ನಂಜುನಿರೋಧಕ ಕ್ರೀಮ್: ಗಾಯವನ್ನು ಚೆನ್ನಾಗಿ ಒಣಗಿಸಿದ ನಂತರ, ‘ಬರ್ನೋಲ’ ಅಥವಾ ಇತರ ನಂಜುನಿರೋಧಕ ಸುಟ್ಟಗಾಯದ ಕ್ರೀಮ್ (Burn Cream) ಹಚ್ಚಿರಿ. ಇದು ಸೋಂಕು ಬರದಂತೆ ರಕ್ಷಿಸುತ್ತದೆ.

ಪರಿಣಾಮಕಾರಿ ಮನೆಮದ್ದುಗಳು 

ಯಾವುದನ್ನು ಮಾಡಬಾರದು? 

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ಗಾಯ ಆಳವಾಗಿದ್ದರೆ, ದೊಡ್ಡ ಪ್ರಮಾಣದಲ್ಲಿ ಸುಟ್ಟುಕೊಂಡರೆ, ಮುಖ, ಕೈಕಾಲುಗಳು ಅಥವಾ ಜನನೇಂದ್ರಿಯಗಳಿಗೆ ಗಾಯವಾಗಿದ್ದರೆ, ಅಥವಾ ಗಾಯ ಗುಣವಾಗುತ್ತಿಲ್ಲ ಎಂದರೆ  ತಕ್ಷಣ ಹತ್ತಿರದ ಆಸ್ಪತ್ರೆಗೆ ಹೋಗಿ. ಪ್ರಥಮ ಚಿಕಿತ್ಸೆ ಕೇವಲ ಆರಂಭಿಕ ನೆರವು ಮಾತ್ರ, ಸರಿಯಾದ ವೈದ್ಯಕೀಯ ಚಿಕಿತ್ಸೆ ಅತ್ಯಗತ್ಯ.

ದೀಪಾವಳಿಯ ಸುರಕ್ಷಿತ ಆಚರಣೆ:

ದೀಪಾವಳಿಯ ಬೆಳಕು ಸಂತೋಷ ತರಲಿ, ನೋವು ತರಬಾರದು. ಎಚ್ಚರಿಕೆಯಿಂದ ಆಚರಿಸಿ, ಸುರಕ್ಷಿತರಾಗಿರಿ

Exit mobile version