ರಾಜ್ಯದಲ್ಲಿ ಕೋವಿಡ್ ಆತಂಕದ ಮಧ್ಯೆ ಇದೀಗ ಡೆಂಗ್ಯೂ ರೌದ್ರ ನರ್ತನ ಶುರುವಾಗಿದೆ. ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತಿದ್ದು ಸಿಲಿಕಾನ್ ಸಿಟಿಯಲ್ಲಿ ಡವ ಡವ ಶುರುವಾಗಿದೆ. ರಾಜ್ಯ ರಾಜಧಾನಿ ಡೆಂಗ್ಯೂ ಫ್ಯಾಕ್ಟರಿ ಆಗಿ ಬದಲಾಗುತ್ತಿದ್ದು. ಸಿಲಿಕಾನ್ ಸಿಟಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ರಾಜ್ಯದಲ್ಲಿ ಕೋವಿಡ್ ಆತಂಕ ಜೋರಾಗಿದೆ ಈ ಮಧ್ಯೆ ಸದ್ದಿಲ್ಲದೆ ಡೆಂಗ್ಯೂ ಆರ್ಭಟ ಜೋರಾಗಿದೆ. ದಿನದಿಂದ ದಿನಕ್ಕೆ ಡೆಂಗ್ಯೂ ರೋಗಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಆಸ್ಪತ್ರೆಗಳತ್ತಾ ಮುಖ ಮಾಡುತ್ತಿರುವ ಸಂಖ್ಯೆ ಹೆಚ್ಚಳವಾಗಿದೆ. ರಾಜ್ಯದಲ್ಲಿ ನಿಯಂತ್ರಣಕ್ಕೆ ಸಿಗದೇ ನಾಗಲೋಟ ಮುಂದುವರಿಸುತ್ತಿದ್ದು ಡೆಂಗ್ಯೂ ಪ್ರಕರಣಗಳ ಸಂಖ್ಯೆ ಸಾವಿರದ ಗಡಿಯನ್ನು ಸಮೀಪಿಸಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ 823 ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು ರಾಜ್ಯದ ಜನರಲ್ಲಿ ಆತಂಕ ಹೆಚ್ಚಳವಾಗಿದ್ದು ಡೆಂಗ್ಯೂ ನಿಯಂತ್ರಣದ ಬಗ್ಗೆ ಆರೋಗ್ಯ ಇಲಾಖೆ ಟೆನ್ಷನ್ ಶರುವಾಗಿದೆ.
ಇನ್ನೂ ಈ ಬಾರಿ ಮಕ್ಕಳಿಗೆ ಡೆಂಗ್ಯೂ ಹೆಚ್ಚಾಗಿ ವಕ್ಕರಿಸುತ್ತಿದೆ. ಪೋಷಕರು ಕೊಂಚ ಯಾಮಾರಿದ್ರೂ ಜೀವಕ್ಕೆ ಅಪಾಯ ಉಂಟಾಗುವ ಸಾದ್ಯತೆ ಇದೆ .ಡೆಂಗ್ಯೂ ಆರಂಭದಲ್ಲಿ ಮಕ್ಕಳಲ್ಲಿ ಸಹಜವಾಗಿ ಕಾಣಿಸಿಕೊಂಡು ಮೂರು ದಿನಗಳ ಕಾಲ ಜ್ವರದ ಲಕ್ಷಣ ಮುಂದುವರಿಯುತ್ತದೆ. ಕೆಲ ಮಕ್ಕಳಿಗೆ 3 ದಿನಗಳ ಬಳಿಕ ಜ್ವರ ಕಮ್ಮಿಯಾಗಿ ಅಪಾಯ ಹೆಚ್ಚಾಗುವ ಸಾದ್ಯತೆ ಇದೆ. ಜ್ವರದಿಂದ ಮಕ್ಕಳು ಗುಣಮುಖರಾದ್ರೂ ಅಂತಾ ಕೇರ್ ಲೆಸ್ ಮಾಡಿದ್ರೆ ಡೆಂಗ್ಯೂ ಸಿವಿಯರ್ ಅಗಿ ಯೂರಿಯನ್ ಹಾಗೂ ಬೇಧಿ ಮೂಲಕ ರಕ್ತಸಾವ್ರ ಆಗೋ ಸಾಧ್ಯತೆ ಇದ್ದು ಅದಷ್ಟೂ ಪೋಷಕರು ಎಚ್ಚರಿಕೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಸಿಲಿಕಾನ್ ಸಿಟಿ ಡೆಂಗ್ಯೂ ಫ್ಯಾಕ್ಟರಿ ಆದಂತಿದೆ. ರಾಜ್ಯ ರಾಜಧಾನಿಯಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಗಗನಕ್ಕೇರಿದ್ದು ಸಿಲಿಕಾನ್ ಸಿಟಿ ಮಂದಿಯಲ್ಲಿ ಡವ ಡವ ಶುರುವಾಗಿದೆ. ರಾಜ್ಯದ ಡೆಂಗ್ಯೂ ಪ್ರಕರಣಗಳಲ್ಲಿ ಸಿಲಿಕಾನ್ ಸಿಟಿಯೆ ಅರ್ಧಕ್ಕಿಂತ ಹೆಚ್ಚು ಕೊಡುಗೆ ನೀಡಿದ್ದು ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಗ್ಯೂ ಕೇಸ್ ಸಂಖ್ಯೆ 700 ಸಾವಿರದ ಗಡಿ ದಾಟಿದೆ. ಇನ್ನು ಬೆಂಗೂರಿನಲ್ಲಿ ಕಳೆದ 20 ದಿನದಲ್ಲಿ 300 ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದ್ದು ಇದೇ ರೀತಿ ಮುಂದುವರೆದ್ರೆ ಎನೂ ಗತಿ ಅನ್ನೋ ಸ್ಥಿತಿ ಸಿಲಿಕಾನ್ ಸಿಟಿಯಲ್ಲಿ ಉದ್ಬವವಾಗಿದೆ.
ಕೋವಿಡ್ ಟೆನ್ಷನ ಮದ್ಯೆ ಇದೀಗಾ ಡೆಂಗ್ಯೂ ಆರ್ಭಟ ರಾಜ್ಯವನ್ನೆ ನಲುಗಿಸುತ್ತಿದ್ದು. ಇತ್ತ ಆರೋಗ್ಯ ಇಲಾಖೆ ಕೋವಿಡ್ ನಿಯಂತ್ರಣಕ್ಕೆ ನಾನ ಕಸರತ್ತು ಮಾಡುತಿದ್ರೆ. ಡೆಂಗ್ಯೂ ಸೈಲೆಂಟ್ ಆಗಿ ತನ್ನ ಕರಮತ್ತ ತೋರಿಸುತಿರೊದಂತು ಸತ್ಯ.