ಹಠಾರ್ ಹೃದಯಾಘಾತ ಪ್ರಕರಣಗಳು ಹೆಚ್ಚಾದ ಬೆನ್ನಲ್ಲೆ ಸರ್ಕಾರದ ತನಿಖೆಗೆ ತಂಡ ರಚಿಸಿತ್ತು. ಕೋವಿಡ್ ಹಾಗೂ ಹೃದಯಘಾತಕ್ಕೆ ಇರುವ ಸಂಭಂದದ ಬಗ್ಗೆ ತನಿಖೆ ನಡೆಸಲು ಸೂಚಿಸಿತ್ತು. ಇದೀಗಾ ವರದಿ ಆರೋಗ್ಯ ಇಲಾಖೆ ಕೈ ಸೇರಿದ್ದು ಕೋವಿಡ್ ಮಾಯವಾದ್ರು ಅದರ ಕಪ್ಪು ಛಾಯೆ ಮಾತ್ರ ಮೆರಯಾಗಿಲ್ಲಾ ಎಂಬಂತಾಗಿದೆ. ಹಾಗಿದ್ರೆ ಸಮಿತಿ ನೀಡಿದ ರಿಪೋರ್ಟ್ ನಲ್ಲಿ ಏನಿದೆ.
ಕೋವಿಡ್ ಬಂದು ಹೋದ ಬಳಿಕ ಅನೇಕರಲ್ಲಿ ನಾನ ರೀತಿಯ ರೋಗಗಳು ಕಾಟ ಕೊಡಲು ಆರಂಬಿಸಿತ್ತು. ಅದರಲ್ಲೂ ಹಠಾತ್ ಹೃದಯಘಾತವಾಗಿ ರಸ್ತೆ ಮಧ್ಯದಲ್ಲಿ ಉಸಿರು ಚೆಲ್ಲುತಿದ್ದವರ ಸಂಖ್ಯೆ ಹೆಚ್ಚಳವಾಗಿತ್ತು. ಕೋವಿಡ್ ಹಾಗೂ ಕೋವಿಡ್ ಲಸಿಕೆ ಬಗ್ಗೆ ಅನೇಕ ಅನುಮಾನ ಶರುವಾದ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಆರೋಗ್ಯ ಇಲಾಖೆ ಈ ಬಗ್ಗೆ ತನಿಖೆ ನಡೆಸುವಂತೆ ತಾಂತ್ರಿಕ ಸಲಹಾ ಸಮಿತಿಯೊಂದನ್ನು ರಚಿಸಿ ವರದಿ ನೀಡುವಂತೆ ಸೂಚಿತ್ತು. ಸಮಿತಿ ಕೂಡ ತಜ್ಞರ ತಂಡದೊಂದಿಗೆ ತನಿಖೆ ನಡೆಸಿ ಆರೋಗ್ಯ ಇಲಾಖೆಗೆ ವರದಿ ನೀಡಿದೆ.
ಇಂದು ಹಠಾತ್ ಹೃದಯಾಘಾತಕ್ಕೆ ಕಾರಣಗಳೇನು ಅನ್ನುವುರ ವರದಿಯನ್ನು ತಾಂತ್ರಿಕ ಸಲಹಾ ಸಮಿತಿ ಆರೋಗ್ಯ ಇಲಾಖೆಗೆ ನೀಡಿದೆ. ಇನ್ನೂ ಕೋವಿಡ್ ಎಂಬ ಮಹಾಮಾರಿ ಕಣ್ಮರೆಯಾಗಿ ಹೋಗಿದ್ರು ಅದರ ಕರಿನೆರಳು ಮಾತ್ರ ಬೆಂಬಿಡದೆ ಜನರನ್ನು ಕಾಡಲು ಶುರುಮಾಡಿದೆ. ಹೌದು ತಾಂತ್ರಿಕ ಸಲಹಾ ಸಮಿತಿ 251 ಜನರ ಮೇಲೆ ಪರೀಕ್ಷೆ ನಡೆಸಿದ ಸಂಧರ್ಭದಲ್ಲಿ ಹೃದಯಘಾತಕ್ಕೆ ಸಂಭಂದಿಸಿದ ಒಂದಿಷ್ಟು ಅಂಶಗಳು ಲಭ್ಯವಾಗಿದೆ.
ಪ್ರಮುಖವಾಗಿ ಕೋವಿಡ್ ಆದ ಬಳಿಕ ಜನರ ಜೀವನ ಶೈಲಿ ಬದಲಾಗಿದ್ದು ಹಾಗೂ ಜನರಲ್ಲಿ ಬೊಜ್ಜು ಡಯಾಬಿಟಿಸ್ ನಂತಹ ಕಾಯಿಲೆಗಳು ಹೆಚ್ಚಾಗಿ ರಕ್ತದ ಒತ್ತಡ ಹೆಚ್ಚಳವಾಗಿದೆ ಇನ್ನೂ ಮಧ್ಯಪಾನಿಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿಯೇ ಈ ಹೃದಯಘಾತ ಪ್ರಕರಣ ಹೆಚ್ಚಳವಾಗಿದೆ. ಹಾಗೂ ಕೊವಿಡ್ ಸಮಯದಲ್ಲಿ ತೆಗೆದುಕೊಳ್ಳುತ್ತಿದ್ದ ಬೇರೆ ಬೇರೆ ಔಷಧಿಯು ದೇಹದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುವುದರಿಂದ ಹೃದಯಘಾತವಾಗ್ತಿದೆ ಎಂಬ ಅಚ್ಚರಿಯ ಸಂಗತಿ ಹೊರಬಿದ್ದಿದೆ.
ಇನ್ನೂ ಕೋವಿಡ್ ಲಸಿಕೆಯಿಂದಾಗಿ ಯಾವುದೇ ರೀತಿಯ ಅಡ್ಡಪರಿಣಾಮ ಇಲ್ಲಾ ಅನ್ನೋದು ಬಹುತೇಕ ಖಚಿತವಾಗಿದೆ. ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲೂ ಕೋವಿಡ್ ಲಸಿಕೆಯ ಮೇಲೆ ಅನುಮಾನವಿದ್ದು ಇದೀಗಾ ರಾಜ್ಯದಲ್ಲಿ ನಿರ್ಮಾವಾಗಿದ್ದ ಅನುಮಾನಕ್ಕೂ ತೆರೆಬಿದ್ದಿದೆ. ಇನ್ನೂ ಹೃದಯಘಾತ ಹಾಗೂ ತಕ್ಷಣವೇ ಕುಸಿದು ಬಿದ್ದ ಮೃತ ಪಟ್ಟರೆ ಅದನ್ನು ಅಧಿಸೂಚಿತ ಕಾಯಿಲೆ ಎಂದು ಸರ್ಕಾರದ ಘೋಷಣೆ ಮಾಡಲು ನಿರ್ಧಾರಿಸಿದೆ.ಹೃದಯಘಾತದಿಂದ ಮನೆಯಲ್ಲಿ ಅಥವಾ ರಸ್ತೆಯಲ್ಲಿ ಯಾರಾದ್ರೂ ಸಾವನ್ನಪ್ಪಿದ್ರೆ ಅವರ ಪೋಸ್ಟ್ ಮಾರ್ಟಂ ಮಾಡುತ್ತಿರಲಿಲ್ಲಾ ಆದ್ರೆ ಇದೀಗಾ ಹೃದಯಘಾತದಿಂದ ಸಾವನ್ನಪ್ಪಿದವರು ಪೋಸ್ಟ್ ಮಾರ್ಟಂ ಕಡ್ಡಾಯವಾಗಿ ಮಾಡಲು ಇಲಾಖೆ ನಿರ್ಧಾರ ಕೈಗೊಂಡಿದೆ.
ಇನ್ನೂ ಆರೋಗ್ಯ ಇಲಾಖೆಯ ಕೈ ವರದಿ ಸಲ್ಲಿಕೆ ಮಾಡುವುದರ ಜೊತೆಗೆ ಇಲಾಖೆಗೆ ತಾಂತ್ರಿಕ ಸಲಹ ಸಮಿತಿ ಅನೇಕ ಸಲಹೆಗಳನ್ನು ನೀಡಿದೆ ಅವುಗಳನ್ನು ಜಾರಿಗೆ ತರಲು ಆರೋಗ್ಯ ಇಲಾಖೆ ನಿರ್ಧಾರಿಸಿದೆ. ಒಂದಿಷ್ಟು ಯೋಜನೆಗಳು ಈಗಾಗಲೇ ಜಾರಿಯಲ್ಲಿದ್ದು ಅವುಗಳನ್ನು ವಿಸ್ತರಣೆ ಮಾಡಲು ನಿರ್ಧಾರ ಮಾಡಿದೆ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲೂ ಹೃದಯಘಾತ ಸಂಬಂಧಿಸಿದ ಪಾಠಗಳನ್ನು ಸೇರಿಸಲು ಈಗಾಗಲೇ ಮಾತು ಕಥೆ ನಡೆಸಿತ್ತು ಇನ್ನೂ ಹಲವಾರು ಯೋಜನೆಗಳನ್ನು ಜಾರೊಗೊಳಿಸಲು ಪ್ಲಾನ್ ಮಾಡಿದೆ.
ಹಾಗಿದ್ರೆ ಹೃದಯ ಜೋಪಾನ ಮಾಡಲು ಇಲಾಖೆ ಕ್ರಮಗಳೇನು ಅಂತಾ ನೋಡೋದಾದ್ರೆ…!
- ಆಸ್ಪತ್ರೆ ಹೊರಗೆ ಯಾರಾದ್ರೂ ಸಾವನ್ನಪ್ಪಿದ್ರೆ ಮರಣೋತ್ತರ ಪರೀಕ್ಷೆ ಕಡ್ಡಾಯ
- ಸಾರ್ವಜನಿಕರಲ್ಲಿ ಹೃದಯಘಾತ ವಿಚಾರವಾಗಿ ಅರಿವು ಮೂಡಿಸಲು ಅಭಿಯಾನ
- 15 ವರ್ಷದೊಳಗಿನ ಮಕ್ಕಳಿಗೆ ಹೃದಯ ತಪಾಸಣೆ ಕಡ್ಡಾಯ
- ಪಠ್ಯಪುಸ್ತಕದಲ್ಲಿ ಹೃದಯಕ್ಕೆ ಸಂಬಂಧಪಟ್ಟ ಪಾಠ ಸೇರ್ಪಡೆ
- ಶಾಲೆಗಳಲ್ಲಿ ಹೃದಯ ಹಾಗೂ ಹೃದಯಘಾತಕ್ಕೆ ಸಂಬಂಧಪಟ್ಟಂತೆ ನೈತಿಕ ಶಿಕ್ಷಣ
- ಸಿಪಿಆರ್ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು
- ಎಲ್ಲಾ ತಾಲೂಕುಗಳಲ್ಲೂ ಪುನೀತ್ ರಾಜ್ಕುಮಾರ್ ಹೃದಯಜ್ಯೋತಿ ಯೋಜನೆ ವಿಸ್ತರಣೆ
- ಎಇಡಿಯನ್ನ ಸಾರ್ವಜನಿಕರ ಸ್ಥಳಗಳಲ್ಲಿ ಅಳವಡಿಸಲು ಕ್ರಮ
- ಸರ್ಕಾರಿ ನೌಕರರಿಗೆ,ಗುತ್ತಿಗೆ ನೌಕರರಿಗೆ ವರ್ಷಕ್ಕೊಮ್ಮೆ ತಪಾಸಣೆ
- ಖಾಸಗಿ ಕಂಪನಿಗಳಲ್ಲಿ ಪ್ರತಿವರ್ಷಕ್ಕೊಮ್ಮೆ ಸ್ಕ್ರೀನಿಂಗ್ ಮಾಡಿಸುವುದು ಕಡ್ಡಾಯ
- ಗೃಹ ಆರೋಗ್ಯ ಯೋಜನೆಯಲ್ಲಿ ಹೃದಯ ತಪಾಸಣೆಯನ್ನ ಸೇರಿಸಲು ಚಿಂತನೆ
ಕೋವಿಡ್ ಮಾಯವಾಗಿದ್ರೂ ಆದರ ಕರಿಛಾಯೆ ಮಾತ್ರ ಜನರನ್ನು ಬೆಂಬಿಡದೆ ಕಾಡುತಿದೆ. ಆರೋಗ್ಯ ಇಲಾಖೆ ಕೂಡ ಪುಟ್ಟ ಹೃದಯಗಳ ಜೋಪಾನ ಮಾಡಲು ದೊಡ್ಡ ದೊಡ್ಡ ಯೋಜನೆಗಳನ್ನು ಆರಂಭಿಸಲು ಚಿಂತನೆ ನಡೆಸಿದ್ರೆ. ಇತ್ತ ಕೋವಿಡ್ ಲಸಿಕೆಯಿಂದಾಗಿ ಜೀವ ಹೋಗುತ್ತೆ ಅನ್ನೂ ಗಾಳಿ ಸುದ್ದಿಗೆ ಫುಲ್ ಸ್ಟಾಪ್ ಬಿದ್ದಿದ್ದು. ಕೊವಿಡ್ ನಿಂದಾ ಬಳಲಿದ್ದವರು ಮತ್ತು ಸಾರ್ವಜನಿಕರು ಜೀವನ ಶೈಲಿಯ ಬಗ್ಗೆ ಹೆಚ್ಚಿನ ಗಮನಹರಿಸೋದು ಉತ್ತಮ.