ಬೆಳಗ್ಗೆ ಒಂದು ಕಪ್ ಬಿಸಿ ಕಾಫಿ ಕುಡಿಯದೇ ದಿನ ಆರಂಭವಾಗದವರು ಎಷ್ಟೋ ಮಂದಿ. ಆದರೆ ಕುಡಿದ ನಂತರ ಉಳಿದ ಕಾಫಿ ಡಿಕಾಕ್ಷನ್ ಅಥವಾ ಫಿಲ್ಟರ್‌ನಲ್ಲಿ ಉಳಿದ ಕಾಫಿ ಪುಡಿಯನ್ನು ನೀವು ಏನು ಮಾಡುತ್ತೀರಿ? ಕಸದ ಬುಟ್ಟಿಗೆ ಎಸೆಯುತ್ತೀರಾ? ಇನ್ಮುಂದೆ ಹಾಗೆ ಮಾಡಬೇಡಿ ಈ “ವೇಸ್ಟ್” ಎನಿಸಿಕೊಳ್ಳುವ ಕಾಫಿ ನಿಮ್ಮ ಕೂದಲಿನ ಆರೋಗ್ಯಕ್ಕೆ ಅದ್ಭುತ ಮದ್ದಾಗಿದೆ.
ಕೂದಲು ಉದುರುವುದು, ತಲೆಹೊಟ್ಟು, ಕೂದಲು ಬೆಳ್ಳಗಾಗುವುದು, ಈ ಸಮಸ್ಯೆಗಳಿಗೆ ದುಬಾರಿ ಶಾಂಪೂ, ಎಣ್ಣೆಗಳು ಬೇಕಿಲ್ಲ. ಮನೆಯಲ್ಲಿರುವ ಕಾಫಿಯೇ ಸಾಕು. ಕಾಫಿಯಲ್ಲಿ ಕೆಫೀನ್ ಮತ್ತು ಆಂಟಿಆಕ್ಸಿಡೆಂಟ್‌ಗಳು ಹೇರಳವಾಗಿರುತ್ತವೆ. ಇವು ತಲೆಯ ಚರ್ಮದಲ್ಲಿ ರಕ್ತ ಸಂಚಾರ ಹೆಚ್ಚಿಸಿ, ಕೂದಲು ಗಟ್ಟಿಯಾಗುವಂತೆ ಮಾಡುತ್ತವೆ. ಅಲ್ಲದೆ, ಕೂದಲು ಉದುರಲು ಮುಖ್ಯ ಕಾರಣವಾದ DHT (ಡೈಹೈಡ್ರೋಟೆಸ್ಟೋಸ್ಟೆರಾನ್) ಹಾರ್ಮೋನ್‌ನ್ನು ತಡೆಯುತ್ತವೆ ಎಂದು ಅಧ್ಯಯನಗಳು ತೋರಿಸಿವೆ.
ಕಾಫಿ ನೀರಿನಿಂದ ಕೂದಲು ತೊಳೆಯಿರಿ ಸರಳ ವಿಧಾನ ತಲೆ ಸ್ನಾನ ಮಾಡಿದ ನಂತರ ಕೊನೆಯ ರಿಂಸ್‌ಗೆ ಕಾಫಿ ಬಳಸಿ.
- ಬ್ಲ್ಯಾಕ್ ಕಾಫಿ (ಹಾಲು, ಸಕ್ಕರೆ ಇಲ್ಲದ್ದು) ತಯಾರಿಸಿ ಅಥವಾ ಉಳಿದ ಡಿಕಾಕ್ಷನ್ ತೆಗೆದುಕೊಳ್ಳಿ.
- ಶಾಂಪೂ ಮಾಡಿದ ನಂತರ ಒದ್ದೆ ಕೂದಲಿನ ಮೇಲೆ ಈ ಕಾಫಿ ನೀರನ್ನು ಸುರಿಯಿರಿ.
- 2-3 ನಿಮಿಷಗಳ ಕಾಲ ತಲೆಯ ಚರ್ಮಕ್ಕೆ ಮಸಾಜ್ ಮಾಡಿ.
- 15-20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು, ನಂತರ ಸಾದಾ ನೀರಿನಲ್ಲಿ ತೊಳೆಯಿರಿ.
ವಾರಕ್ಕೆ 2-3 ಬಾರಿ ಈ ರಿಂಸ್ ಮಾಡಿ ನೋಡಿ. ಕೂದಲು ಉದುರುವಿಕೆ ಕಡಿಮೆಯಾಗಿ, ಕೂದಲು ದಪ್ಪನಾಗಿ, ಹೊಳಪು ಹೆಚ್ಚುತ್ತದೆ.
ಕಾಫಿ ಪುಡಿ ಹೇರ್ ಮಾಸ್ಕ್
- ಫಿಲ್ಟರ್‌ನಲ್ಲಿ ಉಳಿದ ಕಾಫಿ ಪುಡಿಯನ್ನು ತೆಗೆದುಕೊಳ್ಳಿ.
- ಅದಕ್ಕೆ ಒಂದು ಚಮಚ ಆಲಿವ್ ಆಯಿಲ್ ಅಥವಾ ಕಾಕೊನಟ್ ಆಯಿಲ್ ಬೆರೆಸಿ.
- ತಲೆಯ ಚರ್ಮಕ್ಕೆ ಲೇಪಿಸಿ 20-30 ನಿಮಿಷ ಬಿಡಿ.
- ನಂತರ ಮೈಲ್ಡ್ ಶಾಂಪೂದಿಂದ ತೊಳೆಯಿರಿ.
ಇದು ತಲೆಹೊಟ್ಟು ಕಡಿಮೆ ಮಾಡಿ, ಕೂದಲು ಬೇರುಗಳನ್ನು ಬಲಪಡಿಸುತ್ತದೆ.
ಕಾಫಿಯ ಇತರ ಲಾಭಗಳು
- ಕೂದಲು ಬೆಳ್ಳಗಾಗುವಿಕೆ ತಡೆಯುತ್ತದೆ.
- ಕೂದಲಿಗೆ ನೈಸರ್ಗಿಕ ಕಪ್ಪು ಬಣ್ಣ ನೀಡುತ್ತದೆ.
- ತಲೆಯ ಚರ್ಮದ ಸೋಂಕುಗಳನ್ನು ತಡೆಯುತ್ತದೆ.
ಆದರೆ ಎಚ್ಚರಿಕೆ: ಕಾಫಿ ಅಲರ್ಜಿ ಇರುವವರು ಬಳಸಬೇಡಿ. ಮೊದಲ ಬಾರಿ ಸಣ್ಣ ಪ್ರಮಾಣದಲ್ಲಿ ಪ್ರಯೋಗ ಮಾಡಿ. ಕಾಫಿ ನೀರು ಬಹಳ ಬಿಸಿಯಿರಬಾರದು.
ಅಡುಗೆ ಮನೆಯಲ್ಲಿರುವ ಕಾಫಿಯೇ ನಿಮ್ಮ ಕೂದಲಿನ ಸ್ನೇಹಿತ. ದುಬಾರಿ ಪ್ರೊಡಕ್ಟ್‌ಗಳಿಗೆ ಹಣ ಖರ್ಚು ಮಾಡುವ ಬದಲು ಈ ನೈಸರ್ಗಿಕ ಪರಿಹಾರ ಬಳಸಿ ನೋಡಿ. ಕೆಲವೇ ವಾರಗಳಲ್ಲಿ ಫಲಿತಾಂಶ ಕಾಣುತ್ತದೆ.
