ಸಣ್ಣ ಪುಟ್ಟ ವಿಷಯಗಳು ಮರೆತು ಹೋಗುತ್ತಿದೆಯೇ ? ಹಾಗಿದ್ರೆ ಇದು ಬ್ರೈನ್ ಫಾಗ್ ಇರಬಹುದು, ಎಚ್ಚರ !

Untitled design 2026 01 24T223052.636

ಒಂದು ಕಾಲದಲ್ಲಿ ಮರೆವು ಅಥವಾ ಜ್ಞಾಪಕಶಕ್ತಿ ಕುಂದುವಿಕೆ ಎನ್ನುವುದು ಕೇವಲ ವೃದ್ಧಾಪ್ಯದ ಲಕ್ಷಣವಾಗಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಇಪ್ಪತ್ತು-ಮೂವತ್ತರ ಹರೆಯದ ಯುವಕರು ಕೂಡ ಏನೋ ಮರೆತುಹೋಯಿತು, ಕೆಲಸದಲ್ಲಿ ಗಮನ ಹರಿಸಲು ಆಗುತ್ತಿಲ್ಲ ಎಂದು ದೂರುತ್ತಿದ್ದಾರೆ. ಈಗಿನ ಯುವಕರ ಈ ಸ್ಥಿತಿಯನ್ನ ಬ್ರೈನ್ ಫಾಗ್ (Brain Fog) ಎಂದು ಕರೆಯಲಾಗುತ್ತದೆ.

ಬ್ರೈನ್ ಫಾಗ್ ಎಂದರೇನು?

ಬ್ರೈನ್ ಫಾಗ್ ಎನ್ನುವುದು ಮೆದುಳಿಗೆ ಸಂಬಂಧಿಸಿದ ಒಂದು ಅಸ್ಪಷ್ಟ ಸ್ಥಿತಿ. ಇದು ಒಂದು ಕಾಯಿಲೆಯಲ್ಲದಿದ್ದರೂ, ನಿಮ್ಮ ಮೆದುಳಿನ ಕಾರ್ಯಕ್ಷಮತೆ ಕುಂದುತ್ತಿದೆ ಎಂಬುದರ ಲಕ್ಷಣವಾಗಿದೆ. ಈ ಸ್ಥಿತಿಯಲ್ಲಿ ವ್ಯಕ್ತಿಯು ಮಾನಸಿಕವಾಗಿ ದಣಿದಿರುತ್ತಾನೆ, ವಿಷಯಗಳನ್ನು ಗ್ರಹಿಸಲು ಕಷ್ಟಪಡುತ್ತಾನೆ ಮತ್ತು ಸಣ್ಣ ಪುಟ್ಟ ವಿಚಾರಗಳನ್ನು ನೆನಪಿಟ್ಟುಕೊಳ್ಳಲು ಕಷ್ಟಪಡುತ್ತಾನೆ.

ಬ್ರೈನ್ ಫಾಗ್ ಆವರಿಸಲು ಮುಖ್ಯ ಕಾರಣಗಳೇನು ?
  1. ಅತಿಯಾದ ಪೋನ್‌ ಬಳಕೆ: ಸ್ಮಾರ್ಟ್‌ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳ ಅತಿಯಾದ ಬಳಕೆ ಮೆದುಳನ್ನು ಸದಾ ಕಾಲ ಕಾರ್ಯನಿರತವಾಗಿರುವಂತೆ ಮಾಡುತ್ತದೆ. ಇದರಿಂದ ಹೊರಬರುವ ನೀಲಿ ಬೆಳಕು ನಿದ್ರೆಯ ಹಾರ್ಮೋನ್ ಆದ ಮೆಲಟೋನಿನ್ ಉತ್ಪಾದನೆಯನ್ನು ಕುಂಠಿತಗೊಳಿಸುತ್ತದೆ.

  2. ಒತ್ತಡ (Stress): ಕೆಲಸ ಅಥವಾ ವೈಯಕ್ತಿಕ ಜೀವನದ ಒತ್ತಡವು ದೇಹದಲ್ಲಿ ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ನೇರವಾಗಿ ಮೆದುಳಿನ ಮೇಲೆ ಪ್ರಭಾವ ಬೀರಲಿದ್ದು, ಆಲೋಚನಾ ಶಕ್ತಿಯನ್ನು ಮಂದಗೊಳಿಸುತ್ತದೆ.

  3. ನಿದ್ರಾಹೀನತೆ: ಮೆದುಳು ತನ್ನನ್ನು ತಾನು ಪುನಶ್ಚೇತನಗೊಳಿಸಿಕೊಳ್ಳಲು (Repair) ಸಾಕಷ್ಟು ನಿದ್ರೆ ಅಗತ್ಯ. ನಿದ್ರೆ ಕೆಡುವುದರಿಂದ ಮರುದಿನ ಮೆದುಳು ಚುರುಕಾಗಿ ಕೆಲಸ ಮಾಡುವುದಿಲ್ಲ.

  4. ಆಹಾರ ಮತ್ತು ಹಾರ್ಮೋನ್ ಅಸಮತೋಲನ: ಪೌಷ್ಟಿಕಾಂಶದ ಕೊರತೆ ಮತ್ತು ಹಾರ್ಮೋನ್‌ಗಳಲ್ಲಿನ ಏರುಪೇರು ಕೂಡ ಇದಕ್ಕೆ ಪ್ರಮುಖ ಕಾರಣವಾಗಿದೆ.

ಬ್ರೈನ್ ಫಾಗ್ ಲಕ್ಷಣಗಳು
ಬ್ರೈನ್ ಫಾಗ್‌ನಿಂದ ಹೊರಬರಲು ಪರಿಹಾರಗಳು

ಬ್ರೈನ್ ಫಾಗ್ ತಡೆಯಲು ನಿಮ್ಮ ಜೀವನಶೈಲಿಯಲ್ಲಿ ಸರಳ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯ:

ಬ್ರೈನ್ ಫಾಗ್ ಅನ್ನು ಆರಂಭದಲ್ಲೇ ಗಮನಿಸಿ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ, ಮುಂದೆ ಸಂಭವಿಸಬಹುದಾದ ಬೊಜ್ಜು, ಮಧುಮೇಹ ಅಥವಾ ಖಿನ್ನತೆಯಂತಹ ಗಂಭೀರ ಸಮಸ್ಯೆಗಳಿಂದ ಪಾರಾಗಬಹುದು.

 

Exit mobile version