ವಯಸ್ಕರ ಮುಖದಲ್ಲಿ ಬರುವ ಮೊಡವೆಗೆ ಕಾರಣವೇನು? ಚರ್ಮ ಸಮಸ್ಯೆಗೆ ಇಲ್ಲಿದೆ ಪರಿಹಾರ

Untitled design 2025 12 03T071534.340

ಮೊಡವೆ ಎಂದರೆ ಹದಿಹರೆಯದ ಸಮಸ್ಯೆ ಎಂಬ ಕಲ್ಪನೆ ಈಗ ಸಂಪೂರ್ಣ ತಪ್ಪಾಗಿದೆ. 20, 30, 40 ವರ್ಷಗಳಾದರೂ ಮುಖದಲ್ಲಿ ಮೊಡವೆ ಕಾಡುತ್ತಿರುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಚರ್ಮವೈದ್ಯರ ಬಳಿಗೆ ಹೋಗುವ ವಯಸ್ಕರ ಪ್ರಮಾಣದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಸ್ಪಷ್ಟ ಏರಿಕೆಯಾಗಿದೆ. ಯಾಕೆ ಮೊಡವೆ ವಯಸ್ಸಿನೊಂದಿಗೆ ಕಡಿಮೆಯಾಗುವುದರ ಬದಲು, ಹೆಚ್ಚಾಗುತ್ತಿದೆ? ಇದರ ಹಿಂದೆ ಹಲವಾರು ಆಳವಾದ ಕಾರಣಗಳಿವೆ.

ವಯಸ್ಕರಲ್ಲಿ ಮೊಡವೆ ಏಕೆ ಉಂಟಾಗುತ್ತದೆ?

ವಯಸ್ಕರಲ್ಲಿ ಕಾಣಿಸಿಕೊಳ್ಳುವ ಮೊಡವೆಗಳು ಹದಿಹರೆಯದವಿರಿಗಿಂತ ಹೆಚ್ಚು ಹಠಮಾರಿ. ಕಾರಣ ಮೂಲಭೂತವಾಗಿ ದೇಹದ ಒಳಾಂಗಣ ಬದಲಾವಣೆಗಳು, ಜೀವನಶೈಲಿ ಮತ್ತು ಚರ್ಮದ ತೈಲಸ್ರಾವದ ಅಸಮತೋಲನವಾಗಿರುತ್ತದೆ. ಎಳೆ ವಯಸ್ಸಿನ ಮೊಡವೆಗಳು ಸಾಮಾನ್ಯ ಚಿಕಿತ್ಸೆಗೆ ಸುಲಭವಾಗಿ ಗುಣಮುಖವಾಗುತ್ತದೆ. ಆದರೆ ವಯಸ್ಕರಲ್ಲಿ ಮೊಡವೆಯ ಹಿಂದೆ ಹಾರ್ಮೋನ್, ಆಹಾರಕ್ರಮ, ಒತ್ತಡ, ನಿದ್ರೆ ಹಾಗೂ ಚಯಾಪಚಯದ ಸಮಸ್ಯೆ ಇವೆಲ್ಲ ದೊಡ್ಡ ಪಾತ್ರ ವಹಿಸುತ್ತವೆ.

ಮಹಿಳೆಯರಲ್ಲಿ ವಯಸ್ಕ ಮೊಡವೆಯ ಪ್ರಮುಖ ಕಾರಣಗಳು

ಮಹಿಳೆಯರ ಮೊಡವೆಗೆ ಅತ್ಯಂತ ದೊಡ್ಡ ಕಾರಣ ಹಾರ್ಮೋನಲ್ ಅಸಮತೋಲನ.

ಈ ಹಾರ್ಮೋನುಗಳ ಗೊಂದಲದಿಂದ ಕುತ್ತಿಗೆ, ದವಡೆ, ಗಲ್ಲದ ಭಾಗಗಳಲ್ಲಿ ಕೆಂಪಾಗಿ ಊದಿಕೊಂಡ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಇವು ಗುಣವಾದ ಮೇಲೂ ಕಪ್ಪು ಕಲೆಗಳು, ಗುಣಮುಖವಾದ ನಂತರದ ಗುರುತುಗಳು ಬಿಟ್ಟು ಹೋಗುವ ಸಾಧ್ಯತೆ ಹೆಚ್ಚು.

ಜೀವನಶೈಲಿ ಕಾರಣಗಳು

ಇವೆಲ್ಲವೂ ಚರ್ಮವನ್ನು ಅಕಾಲಿಕವಾಗಿ ವಯಸ್ಸಾಗುವಂತೆ ಮಾಡಿ, ಸುಕ್ಕುಗಳು ಬೇಗ ಕಾಣಿಸುವಂತೆ ಮಾಡುತ್ತವೆ.

ವಯಸ್ಕ ಪುರುಷರಲ್ಲಿ ಮೊಡವೆ: ಯಾಕೆ ಬರುತ್ತದೆ?

ಪುರುಷರಲ್ಲಿ ಮೊಡವೆ ಹೆಚ್ಚಾಗಲು ಹಾರ್ಮೋನ್ಸ್ ಮಾತ್ರ ಕಾರಣವಲ್ಲ. ಕೆಲವು ಪ್ರಮುಖ ಕಾರಣಗಳು.

ಪುರುಷರ ಚರ್ಮದಲ್ಲಿ ತೈಲಸ್ರಾವ (Sebum) ಹೆಚ್ಚು. ಧೂಮಪಾನ ಮತ್ತು ಅಲ್ಕೋಹಾಲ್‌ ಇದನ್ನು ಇನ್ನಷ್ಟು ದುರ್ಬಲಗೊಳಿಸಿ ಬ್ಯಾಕ್ಟೀರಿಯಾ ಬೆಳವಣಿಗೆ ಹೆಚ್ಚಿಸಿ ಮೊಡವೆಗೆ ಕಾರಣವಾಗಬಹುದು.

ತಲೆಯ ಚರ್ಮ 

ಹೆಚ್ಚು ಜನರಿಗೆ ತಿಳಿದಿರದ ಒಂದು ಕಾರಣ ಎಂದರೆ ತಲೆಯ ಚರ್ಮದ ಸಮಸ್ಯೆಗಳು.
ಇವು ಕೂಡ ಮುಖದಲ್ಲಿ ಮೊಡವೆಯನ್ನೇಂಟು ಮಾಡಬಹುದು.

ಈ ತೊಂದರೆಗಳು ಹಣೆ, ಕಪಾಲ, ಕಿವಿಯ ಸುತ್ತಮುತ್ತ ಹಾಗೂ ಬೆನ್ನಿನ ಮೇಲೆಯೂ ಮೊಡವೆ ಬೆಳೆಸುತ್ತವೆ.

ವಯಸ್ಕ ಮೊಡವೆಗೆ ಪರಿಣಾಮಕಾರಿ ಚಿಕಿತ್ಸೆ – ಏನು ಮಾಡಬೇಕು?

1. ಹಾರ್ಮೋನ್ ಪರೀಕ್ಷೆ
PCOS, ಥೈರಾಯ್ಡ್, ಇನ್ಸುಲಿನ್‌ ಪ್ರತಿರೋಧ ಇವೆಲ್ಲಕ್ಕೂ ಪರೀಕ್ಷೆ ಮಾಡಿಸಿಕೊಳ್ಳಿ.

2. ಜೀವನಶೈಲಿ ಸುಧಾರಣೆ

3. ಸ್ಟ್ರೆಸ್‌ ಮ್ಯಾನೆಜ್‌ಮೆಂಟ್:
ಯೋಗ, ಧ್ಯಾನ, ಹವ್ಯಾಸಗಳು – ಇವೆಲ್ಲ ಹಾರ್ಮೋನ್ ನಿಯಂತ್ರಣಕ್ಕೆ ಸಹಕಾರಿ.

4. ತಲೆಯ ಚರ್ಮದ ಆರೋಗ್ಯ:
ಆಂಟಿ-ಡ್ಯಾಂಡ್ರಫ್ ಶಾಂಪೂ, ತಲೆಗೆ ಅತಿಯಾದ ಎಣ್ಣೆ ಬಳಕೆಯನ್ನು ತಪ್ಪಿಸುವುದು ಮುಖ್ಯ.

5. ವೈದ್ಯಕೀಯ ಚಿಕಿತ್ಸೆ:

ಚರ್ಮದ ಸಮಸ್ಯೆ ಎಷ್ಟು ಹಳೆಯದು, ಅದರ ಮೂಲ ಕಾರಣವೇನು, ದೇಹದ ಒಳಾಂಗಣ ಸ್ಥಿತಿ ಹೇಗೆ ಇದೆ ಎನ್ನುವುದನ್ನು ತಜ್ಞರಿಗೆ ವಿವರಿಸಿದರೆ ಚಿಕಿತ್ಸೆ ಪರಿಣಾಮಕಾರಿ ಆಗುತ್ತದೆ.

Exit mobile version