ಟ್ರಂಪ್ ಹ*ತ್ಯೆಗೆ ಯತ್ನ: ಒಂಟಿ ತೋಳ ದಾಳಿಗೆ ಅಸಲಿ ಕಾರಣವೇನು?

Untitled design 2026 04 26T123114.915

ವಾಷಿಂಗ್ಟನ್: ತಮ್ಮ ಮೇಲೆ ನಡೆದ ಹತ್ಯೆ ಯತ್ನದ ಬಗ್ಗೆ ಮೊದಲ ಬಾರಿಗೆ ಸ್ಪಷ್ಟ ಪ್ರತಿಕ್ರಿಯೆ ನೀಡಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅತಿ ಹೆಚ್ಚು ಪರಿಣಾಮಕಾರಿ ನಾಯಕರೇ ಹಂತಕರಿಗೆ ಗುರಿಯಾಗುತ್ತಾರೆ ಎಂದು ಹೇಳಿದ್ದಾರೆ. ತಮ್ಮ ಮೇಲಿನ ದಾಳಿಯ ಹಿಂದಿನ ಕಾರಣವನ್ನು ವಿವರಿಸಿರುವ ಟ್ರಂಪ್, ಅಮೆರಿಕಾದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರನ್ನು ಹೆಸರಿಸಿ, ತಾವೂ ಅವರಂತೆಯೇ ಪರಿಣಾಮಕಾರಿ ಅಧ್ಯಕ್ಷನಾಗಿರುವುದರಿಂದಲೇ ಗುರಿಯಾಗುತ್ತಿದ್ದೇನೆ ಎಂದು ಹೇಳಿದ್ದಾರೆ.

ಲಿಂಕನ್ ರೀತಿಯೇ ನಾನೂ ಹತ್ಯೆ ಯತ್ನಕ್ಕೆ ಗುರಿ

ನ್ಯೂಯಾರ್ಕ್ ನಲ್ಲಿ ನಡೆದ ಒಂದು ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಟ್ರಂಪ್, “ಅಬ್ರಹಾಂ ಲಿಂಕನ್ ತುಂಬಾ ಪರಿಣಾಮಕಾರಿ ಅಧ್ಯಕ್ಷರಾಗಿದ್ದರು. ಅವರು ಅಧ್ಯಕ್ಷರಾಗಿದ್ದಾಗಲೇ ಹತ್ಯೆಯಾದರು. ನಾನೂ ಸಹ ಆ ರೀತಿಯ ಪರಿಣಾಮಕಾರಿ ಅಧ್ಯಕ್ಷತೆಯನ್ನು ನೀಡಿದ್ದೇನೆ. ನಾನು ದೇಶಕ್ಕಾಗಿ ಸಾಕಷ್ಟು ಶ್ರಮಿಸಿದ್ದೇನೆ. ಹೀಗಾಗಿ ನಾನು ಹತ್ಯೆ ಯತ್ನಗಳಿಗೆ ಗುರಿಯಾಗುತ್ತಿದ್ದೇನೆ” ಎಂದು ಹೇಳಿದರು.

‘ನನ್ನ ಮೇಲೆ ಸಿಟ್ಟು ಇರುವ ಜನರಿಂದಲೇ ಸಂಚು’

ತಮ್ಮ ವಿರುದ್ಧ ಅಸಮಾಧಾನ ಹೊಂದಿರುವ ಜನರೇ ಹತ್ಯೆಗೆ ಸಂಚು ನಡೆಸುತ್ತಾರೆ ಎಂದು ಆರೋಪಿಸಿದ ಅವರು, “ನಾನು ಈ ದೇಶವನ್ನು ಸಂಪೂರ್ಣವಾಗಿ ಬದಲಾಯಿಸಿದ್ದೇನೆ. ನನ್ನ ನೀತಿಗಳು, ನಿರ್ಧಾರಗಳು ಸಾಕಷ್ಟು ಮಂದಿಗೆ ಸಮ್ಮತವಾಗಿಲ್ಲ. ಅವರಿಗೆ ನನ್ನ ಮೇಲೆ ಸಿಟ್ಟಿದೆ. ಅದೇ ಸಿಟ್ಟಿನಿಂದಲೇ ನನ್ನ ಹತ್ಯೆಗೆ ಸಂಚು ರೂಪುಗೊಳ್ಳುತ್ತಿದೆ” ಎಂದು ಹೇಳಿದ್ದಾರೆ.

ಒಂಟಿ ತೋಳ ದಾಳಿಯ ಹಿನ್ನೆಲೆ

 ಟ್ರಂಪ್ ಮೇಲೆ ಮೂರು ಹತ್ಯೆ ಯತ್ನಗಳು ನಡೆದಿವೆ. ಅವುಗಳಲ್ಲಿ ಬಹುತೇಕವು “ಒಂಟಿ ತೋಳ” (Lone Wolf) ದಾಳಿಗಳಾಗಿವೆ. ಆದರೆ ತಾನು ಪರಿಣಾಮಕಾರಿ ನಾಯಕನಾಗಿರುವುದರಿಂದಲೇ ಜನರಿಗೆ ತನ್ನ ಬಗ್ಗೆ ತೀವ್ರ ಪ್ರೀತಿ ಅಥವಾ ತೀವ್ರ ದ್ವೇಷ ಎರಡೂ ಇದೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.

ಅಬ್ರಹಾಂ ಲಿಂಕನ್ ಕುರಿತು ಪ್ರಸ್ತಾಪವೇಕೆ?

ಅಮೆರಿಕಾದ 16ನೇ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಅವರು 1865ರಲ್ಲಿ ಅಧ್ಯಕ್ಷರಾಗಿದ್ದಾಗಲೇ ಹತ್ಯೆಯಾದರು. ಅಮೆರಿಕಾದ ಅಂತರ್ಯುದ್ಧದ ಸಂದರ್ಭದಲ್ಲಿ ಸಂಯುಕ್ತ ರಾಷ್ಟ್ರವನ್ನು ಒಗ್ಗೂಡಿಸಿದ ಮಹಾನ್ ನಾಯಕ ಎಂದು ಲಿಂಕನ್ ಪ್ರಸಿದ್ಧರು. 

ರಾಜಕೀಯ ವಿಶ್ಲೇಷಕರ ಪ್ರತಿಕ್ರಿಯೆ

ಟ್ರಂಪ್ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಕೆಲವು ವಿಶ್ಲೇಷಕರು, ‘ತಮ್ಮ ಮೇಲಿನ ಅನುಕಂಪ ಹೆಚ್ಚಿಸಿಕೊಳ್ಳಲು ಮತ್ತು ತಮ್ಮ ಬೆಂಬಲಿಗರನ್ನು ಮತ್ತಷ್ಟು ಒಗ್ಗೂಡಿಸಲು ಟ್ರಂಪ್ ಈ ಹೋಲಿಕೆ ಮಾಡಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕೆಲವರು, ‘ಲಿಂಕನ್ರಂತಹ ಐತಿಹಾಸಿಕ ವ್ಯಕ್ತಿಯೊಂದಿಗೆ ಹೋಲಿಕೆ ಅತಿರೇಕ’ ಎಂದು ಟೀಕಿಸಿದ್ದಾರೆ.

Exit mobile version