ದುಬೈ ಏರ್ ಶೋ-2025ರ ಅಂತಿಮ ದಿನದಲ್ಲಿ ಭಾರತೀಯ ವಾಯುಸೇನೆಯ ದೇಶೀಯ ನಿರ್ಮಿತ ಹೆಚ್‌ಎಎಲ್ ತೇಜಸ್ ಯುದ್ಧ ವಿಮಾನವೊಂದು ದುರಂತಕ್ಕೆ ತುತ್ತಾಗಿದೆ. ಅಲ್ ಮಕ್ತೂಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರದರ್ಶನ ನೀಡುತ್ತಿದ್ದಾಗ ಸ್ಥಳೀಯ ಸಮಯ ಮಧ್ಯಾಹ್ನ 2:10ರ ಸುಮಾರಿಗೆ ತೇಜಸ್ ವಿಮಾನ ಧರೆಗೆ ಅಪ್ಪಳಿಸಿದ್ದು, ಸ್ಥಳದಲ್ಲಿ ದಟ್ಟ ಕಪ್ಪು ಹೊಗೆ ಮತ್ತು ಬೆಂಕಿ ಮೂಡಿದೆ.
ಸಾವಿರಾರು ಪ್ರೇಕ್ಷಕರ, ಮಹಿಳೆಯರು, ಮಕ್ಕಳು ಸೇರಿದಂತೆ ಆತಂಕಕ್ಕೀಡಾಗಿ ಚೀರಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋಗಳು ತೇಜಸ್‌ನ ಪತನವನ್ನು ಚಿತ್ರಿಸುತ್ತಿವೆ. ದುಬೈನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಪೈಲಟ್ ಸಾವನ್ನಪ್ಪಿದ್ದಾರೆ.
ಘಟನೆಯ ವಿವರಗಳು: ಪ್ರದರ್ಶನದಲ್ಲಿ ಭಾರತೀಯ ವಾಯುಸೇನೆಯ ತೇಜಸ್ ಮಾರ್ಕ್-1 ವಿಮಾನವು ಆಕಾಶದಲ್ಲಿ ಅದ್ಭುತ ಸುತ್ತಾಟ ನೀಡುತ್ತಿದ್ದಾಗ ಅನಿರೀಕ್ಷಿತವಾಗಿ ನಿಯಂತ್ರಣ ತಪ್ಪಿ ಧರೆಗೆ ಕುಸಿಯಿತು. ಅಪಘಾತದ ನಂತರ ತಕ್ಷಣ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಇಂಟರ್ನಲ್ ಸೈರನ್‌ಗಳು ಮತ್ತು ಆಪಾದ್ ಸ್ಥಿತಿ ಘೋಷಣೆಯಾಗಿದೆ. ಘಟನಾ ಸ್ಥಳದಲ್ಲಿ ಯಾರಿಗೂ ಇತರ ಗಾಯಗಳಾಗಿಲ್ಲ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದ್ದರೂ, ಪೈಲಟ್ ಸಾವನ್ನಪ್ಪಿದ್ದಾರೆ.
ಭಾರತೀಯ ವಾಯುಸೇನೆಯಿಂದ ತಕ್ಷಣ “ತೇಜಸ್ ವಿಮಾನ ದುಬೈ ಏರ್ ಶೋದಲ್ಲಿ ಕ್ರಾಶ್ ಆಗಿದೆ. ಹೆಚ್ಚಿನ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ” ಎಂದು ಹೇಳಿಕೆ ಬಿಡುಗಡೆ ಮಾಡಿದ್ದು, ಅಧಿಕೃತ ಹೇಳಿಕೆಗಾಗಿ ಕಾಯಲಾಗುತ್ತಿದೆ. ಇದು ತೇಜಸ್‌ನ ಎರಡನೇ ಕ್ರಾಶ್ ಮೊದಲನೆಯದು 2024ರಲ್ಲಿ ಜೈಸಲ್ಮೇರ್ ಬಳಿ ನಡೆದಿತ್ತು.
ತೇಜಸ್ ವಿಮಾನವು ಭಾರತದ ‘ಮೇಕ್ ಇನ್ ಇಂಡಿಯಾ’ ಯೋಜನೆಯ ಸಾಕ್ಷಾತ್ ಸಂಕೇತವಾಗಿದ್ದು, ದುಬೈ ಏರ್ ಶೋದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಇದರ ಸಾಮರ್ಥ್ಯವನ್ನು ತೋರಿಸುವ ಉದ್ದೇಶವಾಗಿತ್ತು. ಈ ದುರಂತವು ಭಾರತೀಯ ರಕ್ಷಣಾ ಉದ್ಯಮಕ್ಕೆ ದೊಡ್ಡ ದಕ್ಕೆಯಾಗಬಹುದು ಎಂದು ತಜ್ಞರು ಭಾವಿಸುತ್ತಿದ್ದಾರೆ. ಘಟನೆಯ ಕಾರಣವನ್ನು ತಿಳಿಯಲು ತನಿಖೆ ಆರಂಭವಾಗಿದೆ.
