ಸುಡಾನ್‌ನಲ್ಲಿ ಮಿಲಿಟರಿ ವಿಮಾನ ಪತನ: 46 ಸಾ*ವು

ಸುಡಾನ್‌ನಲ್ಲಿ ಮಿಲಿಟರಿ ವಿಮಾನ ಪತನ: 46 ಸಾ*ವು

Untitled Design 2025 02 26t174952.724

ಸುಡಾನ್‌ನಲ್ಲಿ ಅಂತರಿಕ ಯುದ್ಧ ಮುಂದುವರೆದಿರುವ ನಡುವೆ, ಒಮ್ಡುರ್‌ಮ್ಯಾನ್‌ನಲ್ಲಿ ಸೇನಾ ವಿಮಾನವೊಂದು ಪತನಗೊಂಡು 46 ಮಂದಿ ಮೃತಪಟ್ಟಿದ್ದಾರೆ. ಅಪಘಾತಕ್ಕೀಡಾದ ಉಕ್ರೇನ್ ನಿರ್ಮಿತ ಆಂಟೊನೊವ್ ವಿಮಾನವು ವಾಡಿ ಸಯೀದ್ನಾ ವಾಯುನೆಲೆಯಿಂದ ಟೇಕಾಫ್ ಆದ ಕೆಲವೇ ನಿಮಿಷಗಳ ನಂತರ ಪತನಗೊಂಡಿದೆ. ಈ ವಿಮಾನದಲ್ಲಿ ಸೇನಾ ಸಿಬ್ಬಂದಿ ಮತ್ತು ನಾಗರಿಕರು ಇದ್ದರು.

ಘಟನೆಯ ವಿವರಗಳು:

ಈ ದುರಂತದಲ್ಲಿ 46 ಮಂದಿ ಸಾವನ್ನಪ್ಪಿದ್ದು, ಐದು ಜನರಿಗೆ ಗಾಯಗಳಾಗಿವೆ. ಗಾಯಗೊಂಡವರು ಓಮ್‌ಡರ್ಮನ್‌ನ ನೌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೇನೆ ಈ ಘಟನೆ ಬಗ್ಗೆ ದೃಢೀಕರಿಸಿದರೂ, ಅಪಘಾತದ ನಿರ್ದಿಷ್ಟ ಕಾರಣವನ್ನು ಬಹಿರಂಗಪಡಿಸಿಲ್ಲ.

ಸುಡಾನ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ 
2023ರ ಏಪ್ರಿಲ್‌ನಿಂದಲೂ ಮಿಲಿಟರಿ ಮತ್ತು ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳ (RSF) ನಡುವೆ ಸಂಘರ್ಷ ಮುಂದುವರೆದಿದೆ. ಈ ಯುದ್ಧವು ಸುಡಾನ್‌ನಲ್ಲಿ ತೀವ್ರ ಹಾನಿಯನ್ನು ಉಂಟುಮಾಡಿದ್ದು, ವಿಶೇಷವಾಗಿ ಡಾರ್ಫರ್ ಪ್ರದೇಶದಲ್ಲಿ ದೌರ್ಜನ್ಯ ಹೆಚ್ಚಾಗಿದೆ.

ಖಾರ್ಟೌಮ್, ಡಾರ್ಫರ್, ಮತ್ತು ಸುಡಾನ್‌ನ ಇತರ ಭಾಗಗಳಲ್ಲಿ ಭಾರೀ ಹಾನಿಯಾಗಿದೆ. ಯುದ್ಧದಲ್ಲಿ 24,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 14 ಮಿಲಿಯನ್ ಜನರು ಸ್ಥಳಾಂತರಗೊಂಡಿದ್ದಾರೆ. ಮೆಡೆಸಿನ್ಸ್ ಸಾನ್ಸ್ ಫ್ರಾಂಟಿಯರ್ಸ್ (MSF) ಸೇರಿದಂತೆ ಅಂತರರಾಷ್ಟ್ರೀಯ ನೆರವು ಸಂಸ್ಥೆಗಳು ಹಿಂಸಾಚಾರದ ಪರಿಣಾಮ ತಮ್ಮ ಕಾರ್ಯಾಚರಣೆಯನ್ನು ನಿಲ್ಲಿಸುತ್ತಿವೆ.

ಇತ್ತೀಚಿನ ಮಿಲಿಟರಿ ವಿಮಾನ ದುರಂತದಿಂದ ಸುಡಾನ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ತೀವ್ರಗೊಂಡಿದ್ದು, ಸೇನೆ ಮತ್ತು ಆರ್‌ಎಸ್‌ಎಫ್ ನಡುವೆ ದಾಳಿಗಳ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.

Exit mobile version