ಡೀಸೆಲ್​ ಟ್ಯಾಂಕರ್​ಗೆ ಬಸ್ ಡಿಕ್ಕಿ: ಸೌದಿ ಅರೇಬಿಯಾದಲ್ಲಿ 42 ಭಾರತೀಯರು ಸಜೀವ ದಹನ

Untitled design 2025 11 17T105552.459

ಸೌದಿ ಅರೇಬಿಯಾ: ಸೌದಿ ಅರೇಬಿಯಾದ ಮೆಕ್ಕಾ-ಮದೀನಾ ಹೆದ್ದಾರಿಯಲ್ಲಿ ಸೋಮವಾರ ಬೆಳಗ್ಗೆ ನಡೆದ ಭಯಾನಕ ಅಪಘಾತ ಸಂಭವಿಸಿದೆ. ಉಮ್ರಾ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್‌ಗೆ ಡೀಸೆಲ್ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ 42 ಮಂದಿ ಭಾರತೀಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರಲ್ಲಿ ಬಹುತೇಕರು ತೆಲಂಗಾಣದ ಹೈದರಾಬಾದ್ ನಿವಾಸಿಗಳು ಎಂದು ತಿಳಿದುಬಂದಿದ್ದು, ಇದರಲ್ಲಿ 20 ಮಂದಿ ಮಹಿಳೆಯರು ಮತ್ತು 11 ಮಂದಿ ಮಕ್ಕಳು ಸೇರಿದ್ದಾರೆ.

ಘಟನೆಯ ವಿವರ

ಮೆಕ್ಕಾದಲ್ಲಿ ಉಮ್ರಾ ಧಾರ್ಮಿಕ ವಿಧಿವಿಧಾನಗಳನ್ನು ಪೂರ್ಣಗೊಳಿಸಿ ಮದೀನಾಗೆ ಮರಳುತ್ತಿದ್ದ ಬಸ್, ಅಕ್ರಮ್ ಪ್ರದೇಶದಲ್ಲಿ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿಯಾಗಿದೆ. ಬೆಳಗ್ಗೆ 9 ಗಂಟೆ ಸುಮಾರಿಗೆ ನಡೆದಿದ್ದು, ಬಸ್ ಸಂಪೂರ್ಣ ಧ್ವಂಸಗೊಂಡಿದೆ. ಟ್ಯಾಂಕರ್‌ನಲ್ಲಿದ್ದ ಡೀಸೆಲ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದು, 42 ಮಂದಿ ಭಾರತೀಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳೀಯ ಪೊಲೀಸರು ಮತ್ತು ತುರ್ತು ತಂಡಗಳು ತಕ್ಷಣ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರೂ, ಹಲವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಉಳಿದವರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಮೃತರ ಗುರುತು ಮತ್ತು ಹಿನ್ನೆಲೆ

ಸೌದಿ ಅರೇಬಿಯಾದ ಉಮ್ರಾ ಸಚಿವಾಲಯ ಈ ದುರ್ಘಟನೆಯನ್ನು ಅಧಿಕೃತವಾಗಿ ಖಚಿತಪಡಿಸಿದ್ದು, ಮೃತರ ಗುರುತು ಪತ್ತೆಗೆ ತೀವ್ರ ತನಿಖೆ ನಡೆಸುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಬಸ್‌ನಲ್ಲಿ ಸುಮಾರು 50ಕ್ಕೂ ಹೆಚ್ಚು ಯಾತ್ರಿಗಳಿದ್ದರು. ಬಹುತೇಕರು ಹೈದರಾಬಾದ್‌ನಿಂದ ಉಮ್ರಾ ಯಾತ್ರೆಗೆ ತೆರಳಿದ್ದ ಕುಟುಂಬಗಳು ಎಂದು ಹೇಳಲಾಗಿದೆ. ಈ ಕುಟುಂಬಗಳು  ಮೆಕ್ಕಾದ ಪವಿತ್ರ ಸ್ಥಳಗಳನ್ನು ಭೇಟಿಯಾಗಿ ಮದೀನಾಗೆ ತೆರಳುತ್ತಿದ್ದರು. ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆ ಹೆಚ್ಚಿದೆ ಎನ್ನಲಾಗಿದೆ.

Exit mobile version