ಚೀನಾ ಗಡಿಯಲ್ಲಿ 50 ಪ್ರಯಾಣಿಕರಿದ್ದ ರಷ್ಯಾದ AN-24 ವಿಮಾನ ಪತನ: 50 ಮಂದಿ ಸಾ*ವು

111 (31)

ಮಾಸ್ಕೊ: ರಷ್ಯಾದ ದೂರದ ಪೂರ್ವ ಭಾಗದ ಅಮುರ್ ಪ್ರದೇಶದಲ್ಲಿ, ಚೀನಾ ಗಡಿಯ ಸಮೀಪದ ಟಿಂಡಾ ನಗರಕ್ಕೆ ತೆರಳುತ್ತಿದ್ದ ಆನ್-24 ಪ್ಯಾಸೆಂಜರ್ ವಿಮಾನವು ಗುರುವಾರ ರಾತ್ರಿ ರೇಡಾರ್‌ನಿಂದ ಕಣ್ಮರೆಯಾಗಿ, ನಂತರ ಪತನಗೊಂಡಿರುವುದಾಗಿ ತಿಳಿದುಬಂದಿದೆ. ಈ ದುರಂತದಲ್ಲಿ ವಿಮಾನದಲ್ಲಿದ್ದ ಸುಮಾರು 43 ರಿಂದ 50 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಗಳು ಸೇರಿದಂತೆ ಯಾರೂ ಬದುಕುಳಿಯಲಿಲ್ಲ ಎಂದು ರಷ್ಯಾದ ತುರ್ತು ಸೇವಾ ಅಧಿಕಾರಿಗಳು ದೃಢಪಡಿಸಿದ್ದಾರೆ.

ಸಿಬೀರಿಯಾ ಮೂಲದ ಅಂಗಾರ ಏರ್‌ಲೈನ್ಸ್‌ಗೆ ಸೇರಿದ ಈ ಆನ್-24 ವಿಮಾನವು ಖಬರೋವ್ಸ್ಕ್‌ನಿಂದ ಬ್ಲಾಗೊವೆಶ್ಚೆನ್ಸ್ಕ್ ಮೂಲಕ ಟಿಂಡಾಕ್ಕೆ ತೆರಳುತ್ತಿತ್ತು. ವಿಮಾನವು ಟಿಂಡಾ ವಿಮಾನ ನಿಲ್ದಾಣದಲ್ಲಿ ಎರಡನೇ ಬಾರಿಗೆ ಲ್ಯಾಂಡಿಂಗ್‌ಗೆ ಪ್ರಯತ್ನಿಸುವ ವೇಳೆ ಏರ್ ಟ್ರಾಫಿಕ್ ಕಂಟ್ರೋಲ್‌ನೊಂದಿಗೆ ಸಂಪರ್ಕ ಕಳೆದುಕೊಂಡಿತು.

ರಕ್ಷಣಾ ತಂಡಗಳು ವಿಮಾನದ ಉರಿಯುತ್ತಿರುವ ಅವಶೇಷಗಳನ್ನು ಟಿಂಡಾದಿಂದ ಸುಮಾರು 16 ಕಿಲೋಮೀಟರ್ ದೂರದ ಗುಡ್ಡಗಾಡು ಪ್ರದೇಶದಲ್ಲಿ ಪತ್ತೆ ಮಾಡಿವೆ. ವಿಮಾನವು ದಟ್ಟವಾದ ಕಾಡಿನ ಪ್ರದೇಶದಲ್ಲಿ ಪತನಗೊಂಡಿದ್ದು, ಆರಂಭಿಕ ವರದಿಗಳ ಪ್ರಕಾರ ಯಾವುದೇ ಬದುಕುಳಿದವರು ಕಂಡುಬಂದಿಲ್ಲ. ಪೈಲಟ್ ದೋಷ ಅಥವಾ ಕಳಪೆ ಗೋಚರತೆಯಿಂದ ಈ ದುರಂತ ಸಂಭವಿಸಿರಬಹುದು ಎಂದು ರಷ್ಯಾದ ತುರ್ತು ಸೇವಾ ಸಚಿವಾಲಯದ ಊಹಿಸಿದೆ. ಆದರೆ, ಅಂತಿಮ ಕಾರಣವನ್ನು ಇನ್ನೂ ದೃಢೀಕರಿಸಲಾಗಿಲ್ಲ.

ಶೋಧ ಕಾರ್ಯಾಚರಣೆ:

“ವಿಮಾನವನ್ನು ಶೋಧಿಸಲು ಎಲ್ಲಾ ಅಗತ್ಯ ಶಕ್ತಿಗಳು ಮತ್ತು ಸಂಪನ್ಮೂಲಗಳನ್ನು ನಿಯೋಜಿಸಲಾಗಿದೆ” ಎಂದು ಅಮುರ್ ಪ್ರದೇಶದ ಗವರ್ನರ್ ವಾಸಿಲಿ ಒರ್ಲೋವ್ ಅವರು ತಮ್ಮ ಟೆಲಿಗ್ರಾಮ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಆರಂಭಿಕ ಮಾಹಿತಿಯ ಪ್ರಕಾರ, ವಿಮಾನದಲ್ಲಿ 43 ಪ್ರಯಾಣಿಕರು, ಐವರು ಮಕ್ಕಳು ಸೇರಿದಂತೆ, ಮತ್ತು ಆರು ಸಿಬ್ಬಂದಿಗಳಿದ್ದರು. ಆದರೆ, ರಷ್ಯಾದ ತುರ್ತು ಸೇವಾ ಸಚಿವಾಲಯವು ಒಟ್ಟು 40 ಜನರಿದ್ದರು ಎಂದು ಸ್ವಲ್ಪ ಕಡಿಮೆ ಸಂಖ್ಯೆಯನ್ನು ಉಲ್ಲೇಖಿಸಿದೆ. ಈ ಸಂಖ್ಯೆಯ ವ್ಯತ್ಯಾಸವನ್ನು ಇನ್ನೂ ಸ್ಪಷ್ಟಪಡಿಸಲಾಗಿಲ್ಲ.

Exit mobile version