ಎಪ್‌ಸ್ಟೀನ್ ಫೈಲ್ಸ್ ಪ್ರಕರಣ: ಬ್ರಿಟನ್ ಮಹಾರಾಜ ಕಿಂಗ್ ಚಾರ್ಲ್ಸ್ ಸಹೋದರನ ಬಂಧನ

Untitled design 2026 02 19T164837.917

ಬ್ರಿಟನ್ ರಾಜಕುಟುಂಬ ಮತ್ತೊಮ್ಮೆ ಗಂಭೀರ ವಿವಾದದ ಹೊರೆಗೆ ಸಿಲುಕಿದೆ. ಗ್ರೇಟ್ ಬ್ರಿಟನ್ ಮಹಾರಾಜ ಕಿಂಗ್ ಚಾರ್ಲ್ಸ್ ಅವರ ಸಹೋದರ ಪ್ರಿನ್ಸ್ ಆಂಡ್ರ್ಯೂ ಅವರನ್ನು ಥೇಮ್ಸ್ ವ್ಯಾಲಿ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ. ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಅವರೊಂದಿಗೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಎಪ್‌ಸ್ಟೀನ್ ಸಂಪರ್ಕವೇ ಮುಖ್ಯ ಕಾರಣ?

ಪ್ರಿನ್ಸ್ ಆಂಡ್ರ್ಯೂ ಹೆಸರು ಬಹುಕಾಲದಿಂದಲೇ ಜೆಫ್ರಿ ಎಪ್‌ಸ್ಟೀನ್ ಪ್ರಕರಣದಲ್ಲಿ ಕೇಳಿಬರುತ್ತಿತ್ತು. ಎಪ್‌ಸ್ಟೀನ್ ವಿರುದ್ಧ ಬಾಲಕಿಯರ ಲೈಂಗಿಕ ದೌರ್ಜನ್ಯ ಸೇರಿದಂತೆ ಹಲವು ಗಂಭೀರ ಆರೋಪಗಳು ಕೇಳಿಬಂದಿದ್ದವು. ಆತನ ಬಂಧನ ಮತ್ತು ಅನುಮಾನಾಸ್ಪದ ಸಾವಿನ ನಂತರವೂ, ಆತನ ಸಂಪರ್ಕದಲ್ಲಿದ್ದ ಪ್ರಮುಖ ವ್ಯಕ್ತಿಗಳ ಕುರಿತು ತನಿಖೆಗಳು ಮುಂದುವರಿದಿದ್ದವು.

ಈ ಹಿನ್ನೆಲೆ­ಯಲ್ಲಿ ಜೆಫ್ರಿ ಎಪ್‌ಸ್ಟೀನ್ ಫೈಲ್ಸ್‌ನಲ್ಲಿ ಪ್ರಿನ್ಸ್ ಆಂಡ್ರ್ಯೂ ಹೆಸರು ಕಾಣಿಸಿಕೊಂಡಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಕೆಲವು ವಿಡಿಯೋ ಮತ್ತು ಫೋಟೋಗಳು ಹೊರಬಿದ್ದಿರುವುದರಿಂದ ಪ್ರಕರಣ ಗಂಭೀರ ಸ್ವರೂಪ ಪಡೆದಿದೆ ಎನ್ನಲಾಗುತ್ತಿದೆ. ಎಪ್‌ಸ್ಟೀನ್ ಜೊತೆ ರಹಸ್ಯ ಮಾಹಿತಿಗಳನ್ನು ಹಂಚಿಕೊಂಡಿರುವ ಆರೋಪವೂ ಪ್ರಿನ್ಸ್ ಆಂಡ್ರ್ಯೂ ವಿರುದ್ಧ ಕೇಳಿಬಂದಿದೆ.

  • Categories: Flash News, ವಿದೇಶ
  • Tags:
  • Exit mobile version