ಟ್ರಂಪ್ ಜತೆ ವಿವಾದಕ್ಕೆ ಆಸಕ್ತಿ ಇಲ್ಲ ಎಂದ ಪೋಪ್

BeFunky collage (56)

ಕ್ರೈಸ್ತರ ಪರಮೋಚ್ಚ ಗುರು ಪೋಪ್ ಲಿಯೋ XIV ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ವಾಗ್ವಾದಕ್ಕೆ ತೊಡಗುವುದಕ್ಕೆ ತಮಗೆ ಯಾವುದೇ ಆಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಪೋಪ್ ಮತ್ತು ಟ್ರಂಪ್ ನಡುವೆ ಇರಾನ್ ಯುದ್ಧದ ಬಗ್ಗೆ ತೀವ್ರ ವಾಕ್ಸಮರ ನಡೆದಿತ್ತು. ಟ್ರಂಪ್ ಅವರು “ಪೋಪ್ ಲಿಯೋ XIV ಅವರನ್ನು ನಾನೇ ಆಯ್ಕೆ ಮಾಡಿದ್ದೇನೆ” ಎಂದು ಹೇಳಿದ್ದಕ್ಕೆ ಪೋಪ್ ಪ್ರತಿಕ್ರಿಯಿಸಿದ್ದರು. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪೋಪ್, “ನನ್ನ ಶಾಂತಿ ಸಂದೇಶವು ಯಾರನ್ನೂ ಗುರಿಯಾಗಿಟ್ಟುಕೊಂಡಿಲ್ಲ. ಇದು ಸಾರ್ವತ್ರಿಕ ಸಂದೇಶ. ಭೂಮಿಯಲ್ಲಿ ನಡೆಯುತ್ತಿರುವ ಎಲ್ಲಾ ಯುದ್ಧಗಳಿಗೆ ಅನ್ವಯವಾಗುತ್ತದೆ. ಟ್ರಂಪ್ ಅವರೊಂದಿಗೆ ವಿವಾದಕ್ಕೆ ತೊಡಗುತ್ತಿದ್ದೇನೆ ಎಂದು ಭಾವಿಸಲಾಗುತ್ತಿದೆ. ಆದರೆ ಆ ವಿಚಾರದಲ್ಲಿ ನನಗೆ ಯಾವುದೇ ಆಸಕ್ತಿ ಇಲ್ಲ” ಎಂದು ಹೇಳಿದ್ದಾರೆ.

ಇತರ ಮುಖ್ಯ ಸುದ್ದಿಗಳು :

ರಷ್ಯಾ ತೈಲ ಖರೀದಿಗೆ ಅಮೆರಿಕ ವಿನಾಯಿತಿ ವಿಸ್ತರಣೆ ವಾಷಿಂಗ್ಟನ್: ಅಮೆರಿಕ ಸರ್ಕಾರ ರಷ್ಯಾದಿಂದ ಕಚ್ಚಾ ತೈಲ ಖರೀದಿಗೆ ನೀಡಿದ್ದ ವಿನಾಯಿತಿಯನ್ನು ಮತ್ತೊಂದು ತಿಂಗಳ ಕಾಲ (ಏಪ್ರಿಲ್ 17ರಿಂದ ಮೇ 16ರವರೆಗೆ) ವಿಸ್ತರಿಸಿದೆ. ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಹೇರಿದ್ದ ನಿರ್ಬಂಧದ ನಡುವೆಯೂ ಭಾರತ ಸೇರಿದಂತೆ ಹಲವು ದೇಶಗಳಿಗೆ ಇದು ತಾತ್ಕಾಲಿಕ ಉಪಶಮನವನ್ನು ನೀಡಿದೆ. ಅಮೆರಿಕ-ಇರಾನ್ ಯುದ್ಧದಿಂದಾಗಿ ಜಾಗತಿಕ ತೈಲ ಬೆಲೆಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

 

Exit mobile version