ಮತ್ತೆ ಬಲೂಚಿಸ್ತಾನದ ಮೇಲೆ ಪಾಕ್ ದಾಳಿ: ಸುಮ್ಮನಿರುತ್ತಾ ಅಫ್ಘಾನಿಸ್ತಾನ ?

Untitled design 2026 09 21T180152.658

ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ನಡುವಿನ ಬಿಕ್ಕಟ್ಟು ಮುಂದುವರೆದಿದ್ದು, ಇದೀಗ ಅಫ್ಘಾನ್ ಗಡಿ ಭಾಗ ಹಾಗೂ ಬಲೂಚಿಸ್ತಾನದ ಮೇಲೂ ಪಾಕ್ ಸೇನೆ ತನ್ನ ದಾಳಿಯನ್ನು ಮುಂದುವರೆಸಿದೆ. ಈ ಬೆಳವಣಿಗೆಯು ಈಗಾಗಲೇ ತೀವ್ರ ಆರ್ಥಿಕ ಹಾಗೂ ರಾಜಕೀಯ ಸಂಕಷ್ಟದಲ್ಲಿ ಸಿಲುಕಿರುವ ಪಾಕಿಸ್ತಾನವನ್ನು ಮತ್ತಷ್ಟು ಗಂಭೀರ ಸಮಸ್ಯೆಗೆ ದೂಡಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಪಾಕ್ ವಿರುದ್ಧ ಅಫ್ಘಾನ್ ಗಡಿಯಲ್ಲಿ ಹೆಚ್ಚಿದ ಉದ್ವಿಗ್ನತೆ ಪಾಕಿಸ್ತಾನ ಹಾಗೂ ಅಫ್ಘಾನ್ನ ತಾಲಿಬಾನ್ ಸರ್ಕಾರದ ನಡುವೆ ಆಗಾಗ ನಡೆಯುತ್ತಿದ್ದ ಸಂಘರ್ಷ ಈಗ ಮತ್ತೆ ಉಲ್ಬಣಗೊಂಡಿದೆ. ಇಷ್ಟು ದಿನ ತೆರೆಮರೆಯಲ್ಲಿದ್ದ ಆಕ್ರೋಶ ಈಗ ಬಹಿರಂಗವಾಗಿದ್ದು, ಬಲೂಚಿಸ್ತಾನದ ಮೇಲಿನ ಪಾಕಿಸ್ತಾನದ ಈ ದಿಢೀರ್ ಆಕ್ರಮಣವು ಅಲ್ಲಿನ ಗುಂಪುಗಳು ಹಾಗೂ ತಾಲಿಬಾನ್ ಪಡೆಗಳನ್ನು ಕೆರಳಿಸುವಂತೆ ಮಾಡಿದೆ.

ಸೌದಿ ಮೈತ್ರಿಕೂಟದ ಲೆಕ್ಕಾಚಾರ ಹಾಗೂ ಅನುಮಾನಗಳು ಇರಾನ್ ಹಾಗೂ ಸೌದಿ ಅರೇಬಿಯಾ ನಡುವಿನ ರಾಜತಾಂತ್ರಿಕ ಹಾಗೂ ಪ್ರಾದೇಶಿಕ ಬೆಳವಣಿಗೆಗಳ ಈ ಸಂದರ್ಭದಲ್ಲಿ, ಸೌದಿಗೆ ನೇರವಾಗಿ ಬೆಂಬಲ ನಿಲ್ಲಬೇಕಿದ್ದ ಪಾಕಿಸ್ತಾನವು ತನ್ನ ಆಂತರಿಕ ಹಾಗೂ ಗಡಿ ಸಂಘರ್ಷಗಳಲ್ಲಿ ಮುಳುಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮುಸ್ಲಿಂ ರಾಷ್ಟ್ರಗಳ ಮಿಲಿಟರಿ ಮೈತ್ರಿಕೂಟದಲ್ಲಿ ಪ್ರಮುಖ ಪಾತ್ರ ವಹಿಸಬೇಕಾದ ಪಾಕಿಸ್ತಾನ, ತನ್ನ ಗಡಿಯಲ್ಲಿಯೇ ವಿವಾದಗಳನ್ನು ಮೈಮೇಲೆಳೆದುಕೊಂಡಿರುವುದು ಇತರೆ ರಾಷ್ಟ್ರಗಳ ಅಸಮಾಧಾನಕ್ಕೂ ಕಾರಣವಾಗಬಹುದು ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.

ಪಾಕ್‌ಗೆ ತಕ್ಕ ತಿರುಗೇಟು

ತಾಲಿಬಾನ್ ಎಚ್ಚರಿಕೆ ಪಾಕಿಸ್ತಾನದ ಈ ಅಬ್ಬರದ ದಾಳಿಗೆ ಕೆರಳಿರುವ ತಾಲಿಬಾನ್ ಕಡೆಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. “ಪಾಕಿಸ್ತಾನದ ಈ ಕೃತ್ಯಕ್ಕೆ ನಾವು ತಕ್ಕ ಉತ್ತರ ನೀಡುತ್ತೇವೆ, ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಮುಂದಿನ ದಿನಗಳಲ್ಲಿ ನಾವು ನೀಡುವ ತಿರುಗೇಟು ಅತ್ಯಂತ ತೀವ್ರವಾಗಿರುತ್ತದೆ” ಎಂದು ಎಚ್ಚರಿಕೆ ನೀಡಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಟೀಕೆಗಳು ಸದ್ಯ ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಹಾಗೂ ಆಂತರಿಕ ಅಶಾಂತಿಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಇಂತಹ ಸಂದರ್ಭದಲ್ಲಿ ಅಫ್ಘಾನ್ ಮೇಲೆ ಅನಗತ್ಯ ಯುದ್ಧ ಅಥವಾ ದಾಳಿಯ ಪ್ರಮೇಯವಿತ್ತೇ ಎಂದು ನೆಟ್ಟಿಗರು ಹಾಗೂ ರಾಜಕೀಯ ವಿಶ್ಲೇಷಕರು ತೀವ್ರವಾಗಿ ಪ್ರಶ್ನಿಸುತ್ತಿದ್ದಾರೆ.

Exit mobile version