ಮ್ಯಾನ್ಮಾರ್‌ನಲ್ಲಿ ಮತ್ತೆ ನಡುಗಿದ ಭೂಮಿ: 5.5 ತೀವ್ರತೆಯ ಭೂಕಂಪ

Untitled design 2025 04 13t172838.000

ಮ್ಯಾನ್ಮಾರ್‌ ಮತ್ತೆ ಭೂಕಂಪದ ಕಂಪನ ಅನುಭವಿಸಿದೆ. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆಯ (USGS) ಪ್ರಕಾರ, ಮ್ಯಾನ್ಮಾರ್‌ನ ಮಧ್ಯಭಾಗದಲ್ಲಿರುವ ಸಣ್ಣ ನಗರವಾದ ಆದ ಮೆಕ್ಟಿಲಾ ಬಳಿ ಇಂದು ಬೆಳಿಗ್ಗೆ 5.5 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದ ಮ್ಯಾನ್ಮಾರ್‌ನ ಜನರಲ್ಲಿ ಮತ್ತೊಮ್ಮೆ ಭೀತಿಯ ವಾತಾವರಣ ನಿರ್ಮಾಣವಾಗಿದೆ.

ಮಾರ್ಚ್ 28 ರಂದು ಸಂಭವಿಸಿದ 7.7 ತೀವ್ರತೆಯ ಭೀಕರ ಭೂಕಂಪವು ದೇಶವನ್ನೆಲ್ಲಾ ಬೆಚ್ಚಿ ಬೀಳಿಸಿದೆ. ಆ ಅವಘಡದಲ್ಲಿ ಸುಮಾರು 3,649 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡರು. ಆ ಭೂಕಂಪ ಇನ್ನೂ ಮಾಸುವ ಮುನ್ನವೇ ಮತ್ತೆ ಭೂಮಿ ಕಂಪಿಸಿದ್ದು, ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.

ಇತ್ತೀಚಿನ ಭೂಕಂಪದ ಕೇಂದ್ರಬಿಂದು ಮಂಡಲೆ ಮತ್ತು ನೇಪಿಟಾವ್ ನಡುವಿನ ಹಜಾರ ಎಂಬ ಪ್ರದೇಶದ ಬಳಿ ದಾಖಲಾಗಿದ್ದು, ಈ ಪ್ರದೇಶವು ಕಳೆದ ತಿಂಗಳ ಭೂಕಂಪದ ವೇಳೆ ಗಂಭೀರ ಹಾನಿಯನ್ನು ಅನುಭವಿಸಿತ್ತು. ಅಲ್ಲಿ ಅನೇಕ ಕಟ್ಟಡಗಳು, ಸರ್ಕಾರಿ ಕಚೇರಿಗಳು ನೆಲಸಮವಾಗಿದ್ದವು. ಸಾರ್ವಜನಿಕರ ಮನೆಗಳು ಕೂಡ ಭಾರಿ ಪ್ರಮಾಣದಲ್ಲಿ ಹಾನಿಗೊಳಗಾಗಿದ್ದವು. ಮ್ಯಾನ್ಮಾರ್‌ನ ಜನರು ಇನ್ನೂ ಈ ಭೂಕಂಪದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಇದೇ ಸಂದರ್ಭದಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿದ್ದು, ಮತ್ತಷ್ಟು ಅವರ ಭೀತಿಯನ್ನು ಹೆಚ್ಚಿಸಿದೆ.

ಈ ಹಿಂದೆ ಸಂಭವಿಸಿದ ಭೂಕಂಪದ ಬಳಿಕ ಮ್ಯಾನ್ಮಾರ್ ಸರ್ಕಾರ ಮತ್ತು ಹಲವಾರು ಅಂತಾರಾಷ್ಟ್ರೀಯ ಸಂಸ್ಥೆಗಳು ಪರಿಹಾರ ಕಾರ್ಯಗಳಲ್ಲಿ ತೊಡಗಿದ್ದವು. ಗಾಯಾಳುಗಳಿಗೆ ಚಿಕಿತ್ಸೆ ನೀಡುವುದು, ನೆರೆಸಂದರ್ಭದಲ್ಲಿ ತಮ್ಮ ಮನೆ ಕಳೆದುಕೊಂಡವರಿಗಾಗಿ ತಾತ್ಕಾಲಿಕ ಆಶ್ರಯ ಕೇಂದ್ರಗಳನ್ನು ಸ್ಥಾಪಿಸುವುದು, ಆಹಾರ ಮತ್ತು ಔಷಧಿ ಪೂರೈಕೆ ಮುಂತಾದ ಅಗತ್ಯ ಸಹಾಯಗಳನ್ನು ಒದಗಿಸುವ ಕಾರ್ಯ ನಡೆಯುತ್ತಿತ್ತು. ಆದರೆ, ಇತ್ತೀಚಿನ ಭೂಕಂಪದಿಂದ ಈ ಕಾರ್ಯಗಳಲ್ಲಿ ವಿಳಂಬ ಸಂಭವಿಸುವ ಸಾಧ್ಯತೆ ಇದೆ ಎಂಬ ಆತಂಕ ಉಂಟಾಗಿದೆ.

ಭೂಕಂಪದ ತೀವ್ರತೆ 5.5 ಆಗಿದ್ದರೂ, ಭೂಮಿ ಕಂಪಿಸುವುದು ಮತ್ತು ಭೀತಿಯ ವಾತಾವರಣವು ಜನರಲ್ಲಿ ಆತಂಕ ಹುಟ್ಟಿಸಿದೆ. ಆದರೆ ಯಾವುದೇ ಸಾವು-ನೋವು ಅಥವಾ ಭಾರೀ ಆಸ್ತಿ ನಷ್ಟದ ವರದಿಗಳು ಈವರೆಗೆ ಲಭ್ಯವಾಗಿಲ್ಲ. ಇದರ ಹೊರತಾಗಿಯೂ, ಸರ್ಕಾರ ಶಾಶ್ವತ ಪರಿಹಾರದತ್ತ ಗಂಭೀರ ಚಿಂತನೆ ನಡೆಸಬೇಕು ಎಂಬುದು ತಜ್ಞರ ಅಭಿಪ್ರಾಯ.

ಭೂಕಂಪಗೊಳಗಾದ ಪ್ರದೇಶಗಳಲ್ಲಿ ತುರ್ತು ಸೇವಾ ತಂಡಗಳು, ವೈದ್ಯರು ಮತ್ತು ರಕ್ಷಣಾ ಪಡೆಗಳು ಹತ್ತಿರದ ಗ್ರಾಮಗಳತ್ತ ಮುನ್ನಡೆಯುತ್ತಿದ್ದು, ಸ್ಥಳೀಯ ಜನರಿಗೆ ಧೈರ್ಯವನ್ನು ತುಂಬುತ್ತಿದ್ದಾರೆ. ಅವರು ಭಯದಿಂದ ಮನೆಯನ್ನು ತೊರೆಯುತ್ತಿದ್ದಾರೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
Exit mobile version