ಮಿಸ್ ಯೂನಿವರ್ಸ್ 2025: 21 ಸ್ಪರ್ಧಿಗಳನ್ನ ಸೋಲಿಸಿ ಕಿರೀಟ ಗೆದ್ದ ಫಾತಿಮಾ ಬಾಷ್

Untitled design (28)

ಬ್ಯಾಂಕಾಕ್ (ಥೈಲ್ಯಾಂಡ್), ನವೆಂಬರ್ 21: ಮಿಸ್ ಯೂನಿವರ್ಸ್ 2025 ಸ್ಪರ್ಧೆಯ ಫೈನಲ್‌ನಲ್ಲಿ ಭಾರೀ ಉತ್ಸಾಹ ಮತ್ತು ವಿವಾದಗಳ ನಡುವೆ ಮೆಕ್ಸಿಕೋದ ಫಾತಿಮಾ ಬಾಷ್ ಫರ್ನಾಂಡೆಜ್ (25) ಅವರು 74ನೇ ಮಿಸ್ ಯೂನಿವರ್ಸ್ ಕಿರೀಟವನ್ನು ಗೆದ್ದುಕೊಂಡಿದ್ದಾರೆ. 121 ದೇಶಗಳ 121 ಸುಂದರಿಯರನ್ನು ಹಿಂದಿಕ್ಕಿ ಅವರು ವಿಜಯ ಸಾಧಿಸಿದ್ದಾರೆ. ಥೈಲ್ಯಾಂಡ್‌ನ ಪ್ರವೀನಾ ಸಿಂಗ್ ಅವರು ರನ್ನರ್-ಅಪ್ (ಪ್ರಥಮ ರನ್ನರ್-ಅಪ್) ಪ್ರಶಸ್ತಿಯನ್ನು ಪಡೆದರು. ವೆನೆಜುವೆಲಾ, ಫಿಲಿಪೈನ್ಸ್ ಮತ್ತು ಕೋಟ್ ಡಿ ದೇಶಗಳ ಸುಂದರಿಯರು ಟಾಪ್-5ರಲ್ಲಿ ಸ್ಥಾನ ಪಡೆದರು. ಕಳೆದ ವರ್ಷದ ವಿಜೇತೆ ಡೆನ್ಮಾರ್ಕ್‌ನ ವಿಕ್ಟೋರಿಯಾ ಕ್ಜೆರ್ ಥೀಲ್ವಿಗ್ ಅವರು ಫಾತಿಮಾ ಅವರ ತಲೆಗೆ ಕಿರೀಟವನ್ನು ಧರಿಸಿದ್ದಾರೆ.

ಫೈನಲ್ ಇಂಪ್ಯಾಕ್ಟ್ ಅರೀನಾದಲ್ಲಿ ನಡೆದ ಈ ಸ್ಪರ್ಧೆಯು ಥೈಲ್ಯಾಂಡ್‌ನಲ್ಲಿ ಮೊದಲ ಬಾರಿಗೆ ನಡೆಯುತ್ತಿದ್ದು, 100ಕ್ಕೂ ಹೆಚ್ಚು ದೇಶಗಳ ಸುಂದರಿಯರನ್ನು ಒಳಗೊಂಡಿತ್ತು. ಫಾತಿಮಾ ಅವರು ಸ್ವಿಮ್‌ಸೂಟ್, ಇವನಿಂಗ್ ಗೌನ್ ರೌಂಡ್‌ಗಳಲ್ಲಿ ಮಿಗ್ಗಿದ್ದು, ಕ್ವೆಶ್ಚನ್-ಆಂಸರ್ ಸೆಶನ್‌ನಲ್ಲಿ 2025ರಲ್ಲಿ ಮಹಿಳೆಯರ ಮುಂದಿರುವ ಸವಾಲುಗಳು ಮತ್ತು ಮಿಸ್ ಯೂನಿವರ್ಸ್ ಹುದ್ದೆಯ ಮೂಲಕ ಮಹಿಳೆಯರಿಗೆ ಸುರಕ್ಷಿತ ಸ್ಥಳ ಒದಗಿಸುವುದು ಹೇಗೆ ? ಎಂಬ ಪ್ರಶ್ನೆಗೆ ಸಣ್ಣದಾದ ಉತ್ತರ ನೀಡಿ ಜ್ಞಾನದ ಜೊತೆಗೆ ಸಹೃದಯತೆಯನ್ನು ತೋರಿಸಿದರು. ಇದರಿಂದ ಜಡ್ಜ್‌ ಮತ್ತು ಪ್ರೇಕ್ಷಕರ ಮನಗೆದ್ದರು.

ಫಾತಿಮಾ ಬಾಷ್ ಫರ್ನಾಂಡೆಜ್ ಅವರು ಮೆಕ್ಸಿಕೋದ ಟಬಾಸ್ಕೋ ರಾಜ್ಯದ ವಿಲ್ಲಾಹೆರ್ಮೋಸಾ ಮೂಲದವರು. ಮೇ 19, 2000ರಲ್ಲಿ ಜನಿಸಿದ ಅವರು, ಬಾಲ್ಯದಿಂದಲೇ ಡಿಸ್‌ಲೆಕ್ಸಿಯಾ, ಎಡಿಎಚ್‌ಡಿ (ಅಟೆನ್ಷನ್ ಡೆಫಿಸಿಟ್ ಹೈಪರ್‌ಆಕ್ಟಿವಿಟಿ ಡಿಸ್‌ಆರ್ಡರ್) ಮತ್ತು ಹೈಪರ್‌ಆಕ್ಟಿವಿಟಿ ಸಮಸ್ಯೆಗಳಿಂದ ತೊಂದರೆಪಡುತ್ತಿದ್ದರು. ಆದರೂ, ಈ ಅಡೆತಡೆಗಳನ್ನು ದೌರ್ಬಲ್ಯವಲ್ಲ, ಸಾಮರ್ಥ್ಯಗಳಾಗಿ ಪರಿವರ್ತಿಸಿ ಮುಂದುವರಿದರು. ನನ್ನ ಅನುಭವಗಳು ನನಗೆ ಸಹಾನುಭೂತಿ ಮತ್ತು ಗಾಢ ಪ್ರಜ್ಞೆಯನ್ನು ಕಲಿಸಿದವು ಎಂದು ಫಾತಿಮಾ ಬಾಷ್ ಹೇಳುತ್ತಾರೆ. 17 ವರ್ಷ ವಯಸ್ಸಿನಲ್ಲಿ ಫ್ಲೋರ್ ಟಬಾಸ್ಕೋ ಕಿರೀಟ ಗೆದ್ದು, 2025ರಲ್ಲಿ ಮಿಸ್ ಮೆಕ್ಸಿಕೋ ಆಯ್ಕೆಯಾಗಿ, ಟಬಾಸ್ಕೋದಿಂದ ಮೆಕ್ಸಿಕೋಗೆ ಮೊದಲ ವಿಜೇತೆಯಾಗಿ ಇತಿಹಾಸ ಸೃಷ್ಟಿಸಿದರು.

ಮೆಕ್ಸಿಕೋ ನಗರದ ಯುನಿವರ್ಸಿಡಾಡ್ ಐಬೆರೊ ಅಮೆರಿಕಾನಾದಲ್ಲಿ ಫ್ಯಾಷನ್ ಮತ್ತು ಉಡುಪು ವಿನ್ಯಾಸದಲ್ಲಿ ಪದವಿ ಪಡೆದ ಅವರು, ಇಟಲಿಯ ಮಿಲಾನ್‌ನಲ್ಲಿರುವ NABA (ನುವೊವಾ ಅಕಾಡೆಮಿಯಾ ಡಿ ಬೆಲ್ಲೆ ಆರ್ಟಿ)ಯಲ್ಲಿ ತಮ್ಮ ಅಧ್ಯಯನವನ್ನು ಮುಂದುವರಿಸಿದರು. ವರ್ಮಾಂಟ್‌ನ ಲಿಂಡನ್ ಇನ್‌ಸ್ಟಿಟ್ಯೂಟ್‌ನಲ್ಲೂ ಕೋರ್ಸ್ ಮಾಡಿದ್ದಾರೆ. ಸುಸ್ಥಿರ ಫ್ಯಾಷನ್‌ಗೆ ತೊಡಗಿದ ಅವರು, ತಿರಸ್ಕೃತ ವಸ್ತುಗಳನ್ನು (upcycled materials) ಬಳಸಿ ಹೊಸ ವಿನ್ಯಾಸಗಳನ್ನು ರೂಪಿಸುತ್ತಾರೆ. ಕಲಾತ್ಮಕತೆಯನ್ನು ಸಾಮಾಜಿಕ ಉದ್ದೇಶಗಳೊಂದಿಗೆ ಬೆರೆಸಿ, ಕ್ಯಾನ್ಸರ್‌ಗೆ ಒಳಗಾದ ಮಕ್ಕಳಿಗೆ ಸಹಾಯ ಮಾಡುವ ಸ್ವಯಂಸೇವಾ ಕಾರ್ಯ ಮಾಡುತ್ತಿದ್ದಾರೆ. ಕಾರ್ಬೊನ್ ಮೈಗ್ರಾಂಟ್ ಮತ್ತು ರೂಟಾ ಮೊನಾರ್ಕಾ ಸಂಸ್ಥೆಗಳೊಂದಿಗೆ ಪರಿಸರ ಮತ್ತು ವಲಸೆ ಸಮಸ್ಯೆಗಳಿಗೆ ಕೆಲಸ ಮಾಡುತ್ತಾರೆ.

ಫೈನಲ್‌ಗೆ ಮುಂಚೆಯೇ, ನವಾತ್ ಇತ್ಸರಾಗ್ರಿಸಿಲ್ ಅವರು (ಮಿಸ್ ಯೂನಿವರ್ಸ್ ಥೈಲ್ಯಾಂಡ್ ನಿರ್ದೇಶಕ) ಫಾತಿಮಾ ಅವರನ್ನು ವೀಡಿಯೊ ಕಾನ್ಫರೆನ್ಸ್‌ನಲ್ಲಿ “ಡಂಬ್‌ಹೆಡ್” ಎಂದು ಕಿರಿಕಿರಿ ಮಾಡಿದರು. ಸ್ಪಾನ್ಸರ್ ಇವೆಂಟ್‌ಗೆ ಸಹಕರಿಸದಿರುವುದರಿಂದ ಆಕ್ರೋಶಗೊಂಡ ನವಾತ್, “ನೀನು ಥೈಲ್ಯಾಂಡ್‌ಗೆ ಬೆಂಬಲ ನೀಡುತ್ತಿಲ್ಲವೇ ?” ಎಂದು ಕೇಳಿ, ಸೆಕ್ಯೂರಿಟಿ ಅವರನ್ನು ಹೊರಗೆ ಕಳುಹಿಸಿದರು. ಇದರಿಂದ ವಿಕ್ಟೋರಿಯಾ ಸೇರಿದಂತೆ ಹಲವು ಸ್ಪರ್ಧಿಯರು ರೂಮ್‌ನಿಂದ ಹೊರಬರಬೇಕಾಯಿತು. ಮಿಸ್ ಯೂನಿವರ್ಸ್ ಸಂಸ್ಥೆಯ ಅಧ್ಯಕ್ಷ ರೌಲ್ ರೊಚಾ (ಮೆಕ್ಸಿಕನ್) ತಕ್ಷಣ ಕ್ರಮ ತೆಗೆದು, ನವಾತ್ ಅವರನ್ನು ಭವಿಷ್ಯದ ಇವೆಂಟ್‌ಗಳಿಂದ ನಿಷೇದಿಸಲಾಗಿತ್ತು. ಆದರೂ, ನವಾತ್ ಕೆಲವು ಪ್ರಿ-ಫೈನಲ್ ಇವೆಂಟ್‌ಗಳಲ್ಲಿ ಕಂಡುಬಂದರು. ಇಂಟರ್ನೆಟ್‌ನಲ್ಲಿ ಫಾತಿಮಾ ಅವರ ವಿಜಯವನ್ನು “ವೆಲ್ ಡಿಸರ್ವ್ಡ್” ಎಂದು ಕೆಲವರು ಸ್ವಾಗತಿಸಿದರೆ, ಇನ್ನೂ ಕೆಲವರು “ಪಿಆರ್ ಡ್ಯಾಮೇಜ್ ಕಂಟ್ರೋಲ್” ಎಂದು ಟೀಕಿಸಿದರು. ಇದರಿಂದ ಸಂಸ್ಥೆಯಲ್ಲಿ ಎರಡು ಜಡ್ಜ್‌ಗಳು ರಾಜೀನಾಮೆ ನೀಡಿದರು.

Exit mobile version