ಜಪಾನ್‌ನಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆ?

Untitled design 2026 04 27T075332.056

ಟೋಕಿಯೊ:  ಸೋಮವಾರ ಮುಂಜಾನೆ ಉತ್ತರ ಜಪಾನ್‌ನ ಹೊಕ್ಕೈಡೊ ಪ್ರದೇಶದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಮತ್ತು ಜಪಾನ್ ಹವಾಮಾನ ಸಂಸ್ಥೆ (JMA) ಎರಡೂ ಈ ಭೂಕಂಪವನ್ನು ದೃಢಪಡಿಸಿದ್ದು, ತಕ್ಷಣದ ಸಾವುನೋವುಗಳು ಕುರಿತು ವರದಿಗಳು ಲಭ್ಯವಾಗಿಲ್ಲ.

USGS ವರದಿ ಪ್ರಕಾರ, ಈ ಭೂಕಂಪವು ಹೊಕ್ಕೈಡೊದ ಸರಬೆಟ್ಸು ಪಟ್ಟಣದ ಪಶ್ಚಿಮಕ್ಕೆ ಸುಮಾರು 18 ಕಿಲೋಮೀಟರ್ ದೂರದಲ್ಲಿ ಸಂಭವಿಸಿದ್ದು, ಅದರ ಆಳವು 81 ಕಿಲೋಮೀಟರ್ ಆಗಿದೆ. ಆಳದಲ್ಲಿ ಸಂಭವಿಸಿದ ಕಾರಣ ಕೆಲವು ಪ್ರದೇಶಗಳಲ್ಲಿ ಬಲವಾದ ಕಂಪನದ ಅನುಭವವಾಗಿದೆ.

ಜಪಾನ್ ಹವಾಮಾನ ಸಂಸ್ಥೆಯ ಪ್ರಕಾರ, ಭೂಕಂಪವು ಸ್ಥಳೀಯ ಕಾಲಮಾನವಾದ ಬೆಳಿಗ್ಗೆ 05:24ಕ್ಕೆ (ಭಾರತೀಯ ಕಾಲಮಾನ 01:54) ಸಂಭವಿಸಿದೆ. ಮಧ್ಯ ಟೊಕಾಚಿ ಪ್ರದೇಶದಲ್ಲಿ “5+” ತೀವ್ರತೆಯ ಕಂಪನ ದಾಖಲಾಗಿದ್ದು, ಕೆಲವು ಭಾಗಗಳಲ್ಲಿ “5-” ಮಟ್ಟದ ಕಂಪನ ದಾಖಲಿಸಲಾಗಿದೆ. ಈ ಮಟ್ಟದ ಕಂಪನವು ಕಟ್ಟಡಗಳು ನಡುಗುವಂತೆ ಮಾಡುವುದರಿಂದ ಜನರು ಭಯಭೀತರಾಗಿದ್ದಾರೆ..

ಭೂಕಂಪದ ನಂತರ, ಜಪಾನ್ ಹವಾಮಾನ ಸಂಸ್ಥೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಆಘಾತಗಳ ಬಗ್ಗೆ ಜಾಗರೂಕರಾಗಿರಲು ಸೂಚಿಸಿದೆ. “ಪೀಡಿತ ಪ್ರದೇಶಗಳಲ್ಲಿರುವವರು ಆತಂಕಪಡಬೇಡಿ, ಶಾಂತವಾಗಿ ಮತ್ತು ಜಾಗರೂಕರಾಗಿ ನಡೆದುಕೊಳ್ಳಿ” ಎಂದು ಸಂಸ್ಥೆ ತಿಳಿಸಿದೆ.

ಈ ಭೂಕಂಪದ ನಂತರ ಯಾವುದೇ ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ ಎಂದು ಕ್ಯೋಡೋ ನ್ಯೂಸ್ ವರದಿ ಮಾಡಿದೆ. ಇದು ಕರಾವಳಿ ಪ್ರದೇಶಗಳ ನಿವಾಸಿಗಳಿಗೆ ನೆಮ್ಮದಿ ನೀಡಿದ್ದು, ಅಧಿಕಾರಿಗಳು ಎಚ್ಚರಿಕೆಯನ್ನು ಕೈಬಿಡಬಾರದು ಎಂದು ಸಲಹೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಜಪಾನ್‌ನಲ್ಲಿ ಭೂಕಂಪ ಹೆಚ್ಚಾಗುತ್ತದ್ದು, ಕಳೆದ ವಾರವೇ ಉತ್ತರ ಜಪಾನ್‌ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಅಲ್ಪಾವಧಿಯ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿತ್ತು. ಅದರ ಜೊತೆಗೆ, ಏಪ್ರಿಲ್ 20ರಂದು ಈಶಾನ್ಯ ಮತ್ತು ಉತ್ತರ ಭಾಗಗಳಲ್ಲಿ 7.5 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿತ್ತು.

Exit mobile version