ಯುದ್ಧಕ್ಕೆ ಅಂತ್ಯ ಸಿಗುತ್ತಾ? ಪಾಕಿಸ್ತಾನದ ರಹಸ್ಯ ಸ್ಥಳದಲ್ಲಿ ಇರಾನ್, ಅಮೆರಿಕ ಮಾತುಕತೆ

Untitled design 2026 04 11T134447.738

ಇಸ್ಲಾಮಾಬಾದ್, ಏಪ್ರಿಲ್ 11: ಕಳೆದ ಆರು ವಾರಗಳಿಂದ ಮಧ್ಯಪ್ರಾಚ್ಯದಲ್ಲಿ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವೆ ನಡೆಯುತ್ತಿದ್ದ ಭೀಕರ ಸಂಘರ್ಷಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಮಹತ್ವದ ರಾಜತಾಂತ್ರಿಕ ಬೆಳವಣಿಗೆಯೊಂದು ನಡೆದಿದೆ. ಅಮೆರಿಕ ಮತ್ತು ಇರಾನ್ ಪ್ರತಿನಿಧಿಗಳು ಶನಿವಾರ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ನೇರ ಮಾತುಕತೆ ಆರಂಭಿಸಿದ್ದಾರೆ. ಒಂದು ದಶಕದ ಸುದೀರ್ಘ ಬಿಕ್ಕಟ್ಟಿನ ನಂತರ ಈ ಎರಡು ದೇಶಗಳ ನಡುವೆ ನಡೆಯುತ್ತಿರುವ ಉನ್ನತ ಮಟ್ಟದ ಸಂಧಾನವು ಜಾಗತಿಕ ಕುತೂಹಲವನ್ನು ಕೆರಳಿಸಿದೆ.

ಯುದ್ಧದ ಪರಿಣಾಮ ಮತ್ತು ಸಂಧಾನದ ಅಗತ್ಯತೆ
ಈ ಸಂಘರ್ಷದಿಂದಾಗಿ ಜಾಗತಿಕ ಇಂಧನ ಮತ್ತು ಅನಿಲ ಮಾರುಕಟ್ಟೆಯಲ್ಲಿ ತೀವ್ರ ತಲ್ಲಣ ಸೃಷ್ಟಿಯಾಗಿತ್ತು. ಸಾವಿರಾರು ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ, ಅಂತಾರಾಷ್ಟ್ರೀಯ ಸಮುದಾಯದ ಒತ್ತಡದ ಮೇರೆಗೆ ಅಮೆರಿಕ ಮತ್ತು ಇರಾನ್ ಮಾತುಕತೆಗೆ ಮುಂದಾಗಿವೆ.

ಪಾಕಿಸ್ತಾನದ ಮಹತ್ವದ ಪಾತ್ರ
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ವಿಶೇಷ ಆಹ್ವಾನದ ಮೇರೆಗೆ ಈ ಎರಡೂ ದೇಶಗಳ ನಿಯೋಗಗಳು ಇಸ್ಲಾಮಾಬಾದ್‌ಗೆ ಆಗಮಿಸಿವೆ. ಭದ್ರತಾ ಕಾರಣಗಳಿಂದ ಸಭೆಯ ಸ್ಥಳವನ್ನು ಅತ್ಯಂತ ರಹಸ್ಯವಾಗಿಡಲಾಗಿದ್ದು, ನಗರದ ಯಾವುದೋ ಗುಪ್ತ ಸ್ಥಳದಲ್ಲಿ ಮಾತುಕತೆ ನಡೆಯುತ್ತಿದೆ.

ಪಾಕಿಸ್ತಾನವನ್ನು ಸಂಧಾನಕಾರನಾಗಿ ಆಯ್ಕೆ ಮಾಡಿಕೊಳ್ಳಲು ಮೂರು ಕಾರಣಗಳಿವೆ.

1) ಅಮೆರಿಕದ ನ್ಯಾಟೋ ಅಲ್ಲದ ಪ್ರಮುಖ ಮಿತ್ರ ರಾಷ್ಟ್ರ

2) ಇರಾನ್ ಜೊತೆ 900 ಕಿಮೀ ಗಡಿಯನ್ನು ಹಂಚಿಕೊಂಡಿರುವುದು

3) ಉಭಯ ದೇಶಗಳ ಸೇನಾ ಮುಖ್ಯಸ್ಥರೊಂದಿಗೆ ನಿರಂತರ ಸಂಪರ್ಕ. ಚೀನಾ ಕೂಡ ಈ ಮಾತುಕತೆಯಲ್ಲಿ ತೆರೆಮರೆಯ ಪ್ರಮುಖ ಪಾತ್ರ ವಹಿಸಿದೆ ಎಂದು ವರದಿಯಾಗಿದೆ.

ಯಾರ್ಯಾರು ಭಾಗವಹಿಸಿದ್ದಾರೆ?

15 ಅಂಶಗಳ ಕಾರ್ಯಸೂಚಿ ಮತ್ತು ಪ್ರಮುಖ ಬೇಡಿಕೆಗಳು
ಈ ಸಭೆಯಲ್ಲಿ 15 ಅಂಶಗಳ ಕಾರ್ಯಸೂಚಿಯನ್ನು ಇರಿಸಿಕೊಳ್ಳಲಾಗಿದೆ.

ಅಮೆರಿಕದ ಬೇಡಿಕೆಗಳು

  1. ಇರಾನ್ ತನ್ನಲ್ಲಿರುವ ಸಂಸ್ಕರಿಸಿದ ಯುರೇನಿಯಂ ದಾಸ್ತಾನನ್ನು ಒಪ್ಪಿಸಬೇಕು.

  2. ಜಾಗತಿಕ ವ್ಯಾಪಾರಕ್ಕೆ ಪ್ರಮುಖವಾಗಿರುವ ಹೊರ್ಮುಜ್ ಜಲಸಂಧಿಯನ್ನು ತಕ್ಷಣವೇ ಮುಕ್ತಗೊಳಿಸಬೇಕು.

ಇರಾನ್‌ನ ಬೇಡಿಕೆಗಳು

  1. ತನ್ನ ಮೇಲೆ ವಿಧಿಸಲಾಗಿರುವ ಎಲ್ಲಾ ಆರ್ಥಿಕ ನಿರ್ಬಂಧಗಳನ್ನು ತೆರವುಗೊಳಿಸಬೇಕು.

  2. ಲೆಬನಾನ್ನಲ್ಲಿ ತಕ್ಷಣವೇ ಕದನ ವಿರಾಮ ಜಾರಿಗೆ ತರಬೇಕು. ಇಲ್ಲದಿದ್ದರೆ ಮಾತುಕತೆ ವಿಳಂಬಗೊಳಿಸುವ ಎಚ್ಚರಿಕೆಯನ್ನೂ ಇರಾನ್ ನೀಡಿದೆ.

ಆದರೆ ಲೆಬನಾನ್ ಕದನ ವಿರಾಮದ ಈ ಷರತ್ತನ್ನು ಇಸ್ರೇಲ್ ಸದ್ಯಕ್ಕೆ ತಿರಸ್ಕರಿಸಿದೆ ಎಂದು ತಿಳಿದುಬಂದಿದೆ.

Exit mobile version