ಮತ್ತೆ ಶುರುವಾಯ್ತು ಇರಾನ್-ಅಮೆರಿಕ-ಇಸ್ರೇಲ್ ಯುದ್ಧ..!

Untitled design 2026 06 08T121408.547

ಟೆಹ್ರಾನ್ / ಜೆರುಸಲೇಮ್: ಮಧ್ಯ ಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಿಚ್ಚು ಹೊತ್ತಿಕೊಂಡಿದೆ. ಇರಾನ್ ನೇರವಾಗಿ ಇಸ್ರೇಲ್ ದೇಶದ ಎರಡು ಪ್ರಮುಖ ವಾಯು ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಸೋಮವಾರ ಬೆಳಗಿನ ಜಾವ ಈ ಕ್ಷಿಪಣಿಗಳು ಇಸ್ರೇಲ್ ನೆಲಕ್ಕೆ ಅಪ್ಪಳಿಸಿದವು. ಇದರಿಂದಾಗಿ ಎರಡೂ ವಾಯು ನೆಲೆಗಳು ತೀವ್ರವಾಗಿ ಹಾನಿಗೊಂಡಿವೆ ಎಂದು ವರದಿಯಾಗಿದೆ.

ಇಸ್ರೇಲ್ ವಾಯು ನೆಲೆಗಳ ಮೇಲೆ ಇರಾನ್ ದಾಳಿ
ಇರಾನ್‌ನ ಉನ್ನತ ಮಿಲಿಟರಿ ಮೂಲಗಳ ಪ್ರಕಾರ, ಇಸ್ರೇಲ್ ದಕ್ಷಿಣ ಭಾಗದಲ್ಲಿರುವ ನೆವಾಟಿಮ್ ಮತ್ತು ಉತ್ತರ ಭಾಗದಲ್ಲಿರುವ ರಾಮಾನ್ ವಾಯು ನೆಲೆಗಳ ಮೇಲೆ ಕ್ಷಿಪಣಿಗಳನ್ನು ಪ್ರಯೋಗಿಸಲಾಗಿದೆ. ಸ್ಥಳೀಯ ಕಾಲಮಾನ ಬೆಳಿಗ್ಗೆ 5:15 ಕ್ಕೆ ಈ ದಾಳಿ ನಡೆದಿದೆ. ದಾಳಿಯ ತೀವ್ರತೆಗೆ ಎರಡೂ ನೆಲೆಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದೆ. ಹಾನಿಯ ವಿವರಗಳನ್ನು ಇಸ್ರೇಲ್ ಸರ್ಕಾರ ತಕ್ಷಣವೇ ಬಹಿರಂಗಪಡಿಸಿಲ್ಲ.

ಇಸ್ರೇಲ್ನ ತಕ್ಷಣದ ಪ್ರತಿದಾಳಿ
ಇರಾನ್ ದಾಳಿಗೆ ಕೂಡಲೇ ಪ್ರತಿಕ್ರಿಯಿಸಿದ ಇಸ್ರೇಲ್, ಇರಾನ್‌‌ನ ಪ್ರಮುಖ ಪೆಟ್ರೋ ಕೆಮಿಕಲ್ ಕಾರ್ಖಾನೆಯ ಮೇಲೆ ವಾಯುದಾಳಿ ನಡೆಸಿದೆ. ಇಸ್ರೇಲಿ ಯುದ್ಧ ವಿಮಾನಗಳು ಇರಾನ್‌ನ ಹೊರ್ಮೊಜ್ಗಾನ್ ಪ್ರಾಂತ್ಯದಲ್ಲಿರುವ ಈ ಕಾರ್ಖಾನೆಯನ್ನು ಗುರಿಯಾಗಿಸಿಕೊಂಡಿವೆ. ಈ ದಾಳಿಯಲ್ಲಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಅಗಾಧ ಪ್ರಮಾಣದ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿದೆ. ಇದುವರೆಗೆ ಪ್ರಾಣ ಹಾನಿಯ ವಿವರಗಳು ತಿಳಿದುಬಂದಿಲ್ಲ.

ಹೆಜ್ಬೊಲ್ಲಾ ಮತ್ತು ಲೆಬನಾನ್ ಹಿನ್ನೆಲೆ
ಲೆಬನಾನ್ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಕಾರ್ಯಾಚರಣೆಗೆ ಇರಾನ್ ಈ ಕ್ಷಿಪಣಿ ದಾಳಿ ನಡೆಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ಲೆಬನಾನ್ ರಾಜಧಾನಿ ಬೈರೂತ್‌ನಲ್ಲಿ ಹೆಜ್ಬೊಲ್ಲಾ ಉಗ್ರರ ವಿರುದ್ಧ ಇಸ್ರೇಲ್ ವಾಯುದಾಳಿ ನಡೆಸಿತ್ತು. ಈ ದಾಳಿಯಲ್ಲಿ ಹಲವಾರು ಹೆಜ್ಬೊಲ್ಲಾ ಕಮಾಂಡರ್‌ಗಳು ಮೃತಪಟ್ಟಿದ್ದರು. ಅದಕ್ಕೆ ಪ್ರತೀಕಾರವಾಗಿಯೇ ಇರಾನ್ ನೇರವಾಗಿ ಇಸ್ರೇಲ್ ಮೇಲೆ ದಾಳಿಗೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಮಧ್ಯ ಪ್ರಾಚ್ಯದಲ್ಲಿ ಉದ್ವಿಗ್ನತೆ
ಇರಾನ್–ಇಸ್ರೇಲ್ ನಡುವಿನ ನೇರ ಮಿಲಿಟರಿ ಮುಖಾಮುಖಿ ಮಧ್ಯ ಪ್ರಾಚ್ಯವನ್ನು ಮತ್ತೆ ಕದನದ ಅಂಚಿಗೆ ತಳ್ಳಿದೆ. ಅಮೆರಿಕ ತನ್ನ ಸೈನ್ಯವನ್ನು ಎಚ್ಚರಿಕೆಯ ಸ್ಥಿತಿಯಲ್ಲಿರಿಸಿದ್ದು, ಇಸ್ರೇಲ್‌‌ಗೆ ತನ್ನ ಸಂಪೂರ್ಣ ಬೆಂಬಲವನ್ನು ಘೋಷಿಸಿದೆ. ವಿಶ್ವಸಂಸ್ಥೆಯು ತುರ್ತಾಗಿ ಕದನ ವಿರಾಮಕ್ಕೆ ಕರೆ ನೀಡಿದ್ದರೂ, ಎರಡೂ ಕಡೆಯೂ ಮತ್ತಷ್ಟು ದಾಳಿಗೆ ಸಿದ್ಧತೆ ನಡೆಸುತ್ತಿರುವುದಾಗಿ ಸೂಚನೆಗಳು ಬಂದಿವೆ.

ಇಸ್ರೇಲ್ ತನ್ನ ರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿನ ಅಲರ್ಟ್ ಮೇಲೆ ಇರಿಸಿದ್ದು, ನಾಗರಿಕರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಟೆಹ್ರಾನ್ ಮತ್ತು ಜೆರುಸಲೇಮ್‌ನ ವಿಮಾನ ನಿಲ್ದಾಣಗಳ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. 

Exit mobile version