ಇರಾನ್ ಅಧ್ಯಕ್ಷರಿಂದ ನೆರೆ ರಾಷ್ಟ್ರಗಳಿಗೆ ಕ್ಷಮೆ: ಟ್ರಂಪ್‌ಗೆ ತಿರುಗೇಟು

ನೆರೆ ರಾಷ್ಟ್ರಗಳ ಕ್ಷಮೆ ಕೋರಿದ ಇರಾನ್‌ ಟ್ರಂಪ್‌‌ ಗೆ ತಿರುಗೇಟು

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ನೆರೆಯ ರಾಷ್ಟ್ರಗಳ ಮೇಲೆ ನಡೆದ ದಾಳಿಗಳಿಗೆ ಕ್ಷಮೆ ಕೋರಿದ್ದಾರೆ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ “ಅನ್‌ಕಂಡಿಷನಲ್ ಸರೆಂಡರ್” ಆಗ್ರಹಕ್ಕೆ ತಿರುಗೇಟು ನೀಡಿದ್ದಾರೆ. “ಟ್ರಂಪ್‌ರ ಯೋಚನೆ ಕನಸಿನಲ್ಲೂ ಈಡೇರಲ್ಲ, ಇರಾನ್ ಯಾವುದೇ ಕಾರಣಕ್ಕೂ ಸರೆಂಡರ್ ಆಗಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಕ್ಷಮೆಯ ಹೇಳಿಕೆ ಮತ್ತು ಕದನ ವಿರಾಮ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಅವರು ನೆರೆಯ ರಾಷ್ಟ್ರಗಳಿಗೆ ಕ್ಷಮೆ ಕೋರಿದ್ದಾರೆ. “ಈವರೆಗೆ ನಡೆದಿರುವ ದಾಳಿಗಳಿಗೆ ನಾವು ಕ್ಷಮೆ ಕೋರುತ್ತೇವೆ. ಮುಂದೆ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ಮಾಡಲ್ಲ. ಅಕ್ಕಪಕ್ಕದ ರಾಷ್ಟ್ರಗಳ ಮೇಲೆ ಇನ್ಮುಂದೆ ದಾಳಿ ಮಾಡೋದಿಲ್ಲ” ಎಂದು ಘೋಷಿಸಿದ್ದಾರೆ. ಆದರೆ “ನೆರೆ ರಾಷ್ಟ್ರಗಳೂ ನಮ್ಮ ಮೇಲೆ ಅಟ್ಯಾಕ್ ಮಾಡಬಾರದು” ಎಂದು ಷರತ್ತು ವಿಧಿಸಿದ್ದಾರೆ. ಇದು ಕದನ ವಿರಾಮಕ್ಕೆ ಸಂಬಂಧಿಸಿದ ಮಹತ್ವದ ನಡೆಯಾಗಿದ್ದು, ಯುದ್ಧದ ತೀವ್ರತೆ ಕಡಿಮೆಯಾಗುವ ನಿರೀಕ್ಷೆ ಮೂಡಿಸಿದೆ.

ಟ್ರಂಪ್‌ಗೆ ತಿರುಗೇಟು : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು “ಇರಾನ್ ಅನ್‌ಕಂಡಿಷನಲ್ ಸರೆಂಡರ್ ಮಾಡಬೇಕು” ಎಂದು ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮಸೌದ್ ಪೆಜೆಶ್ಕಿಯನ್, “ಅಮೆರಿಕಕ್ಕೆ ನಾವು ಯಾವುದೇ ಕಾರಣಕ್ಕೂ ಸರೆಂಡರ್ ಆಗೋದೇ ಇಲ್ಲ. ಟ್ರಂಪ್ ಕನಸು ಕೇವಲ ಕನಸಾಗಿಯೇ ಉಳಿಯೋದು ಪಕ್ಕಾ. ಅವರ ಯೋಚನೆ ಕನಸಿನಲ್ಲೂ ಈಡೇರಲ್ಲ” ಎಂದು ತಿರುಗೇಟು ನೀಡಿದ್ದಾರೆ. ಇದು ಯುದ್ಧದಲ್ಲಿ ರಾಜತಾಂತ್ರಿಕ ಚರ್ಚೆಗಳಿಗೆ ತಡೆಯಾಗಬಹುದು ಎಂಬ ಆತಂಕ ಮೂಡಿಸಿದೆ.

ಪ್ರಸ್ತುತ ಸ್ಥಿತಿ ಇರಾನ್‌ನ ಈ ಹೇಳಿಕೆಯ ನಂತರ ಗಲ್ಫ್ ರಾಷ್ಟ್ರಗಳು ಪ್ರತಿಕ್ರಿಯಿಸಿಲ್ಲ. ಅಮೆರಿಕಾ ಸಹ ಇದಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈ ನಡೆಯಿಂದ ತೈಲ ಬೆಲೆಗಳು ಸ್ವಲ್ಪ ಕಡಿಮೆಯಾಗಿವೆ. ಮುಂದಿನ ದಿನಗಳಲ್ಲಿ ಸ್ಥಿತಿ ಏನಾಗುತ್ತದೆ ಎಂಬುದು ನೋಡಬೇಕು.

Exit mobile version