ಅಮೆರಿಕ ಎದುರು 3 ಹಂತದ ಸಂಧಾನ ಪ್ರಸ್ತಾಪ ಇರಿಸಿದ ಇರಾನ್

Untitled design 2026 04 27T130100.572

ಟೆಹರಾನ್, ಏಪ್ರಿಲ್ 27:ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆಯ ನಡುವೆ, ಇರಾನ್ ತನ್ನ ಅಣು ಕಾರ್ಯಕ್ರಮ ಮತ್ತು ಪ್ರಾದೇಶಿಕ ಸ್ಥಿರತೆ ಕುರಿತುಮೂರು ಹಂತದ ಸಂಧಾನ ಪ್ರಸ್ತಾಪವನ್ನು ಅಮೆರಿಕದ ಮುಂದಿಟ್ಟಿದೆ. ಈ ಪ್ರಸ್ತಾಪವು ಸಂಪೂರ್ಣ ಯುದ್ಧ ನಿಲುಗಡೆಯಿಂದ ಹಿಡಿದು ಅಣು ಸಂಸ್ಕರಣೆಯ ಬಗ್ಗೆ ವಿಸ್ತಾರವಾದ ಕಾರ್ಯಸೂಚಿಯನ್ನು ಒಳಗೊಂಡಿದೆ.

ಹಂತ 1: ಸಂಪೂರ್ಣ ಯುದ್ಧ ವಿರಾಮದ ಬಗ್ಗೆ ಪ್ರಸ್ತಾಪ
ಇರಾನ್‌ ತನ್ನ ಪ್ರಸ್ತಾಪದ ಮೊದಲ ಹಂತದಲ್ಲಿ ಸಂಪೂರ್ಣವಾಗಿ ಯುದ್ಧವನ್ನು ನಿಲ್ಲಿಸುವಂತೆ ತಮ್ಮ ಅಭಿಪ್ರಾಯವನ್ನು ನೀಡಿದೆ. ಇದು ಅಮೆರಿಕ ಮತ್ತು ಇತರ ರಾಷ್ಟ್ರಗಳಿಗೆ ಸಂದೇಶವನ್ನು ನೀಡುತ್ತದೆ. “ನಾವು ಲೆಬನಾನ್‌ ಮೇಲೆ ಮತ್ತೊಮ್ಮೆ ದಾಳಿ ಮಾಡುವುದಿಲ್ಲ” ಎಂಬ ಗ್ಯಾರಂಟಿಯನ್ನು ಇರಾನ್ ನೀಡಿದರೆ, ಇದನ್ನು ವಿಶ್ವದ ರಾಜಕೀಯ ರಂಗದಲ್ಲಿ ಹೊಸ  ಒಪ್ಪಂದವಾಗಿ ಪರಿಗಣಿಸಬಹುದು.

ಹಂತ 2: ಹಾರ್ಮುಜ್ ಜಲಸಂಧಿ ತೆರೆಯುವಿಕೆ ಕುರಿತು ಮಾತುಕತೆ
ಮೊದಲ ಹಂತ ಯಶಸ್ವಿಯಾಗಿ ಜಾರಿಗೆ ಬಂದ ಬಳಿಕವೇ, ಹಾರ್ಮುಜ್ ಜಲಸಂಧಿಯ ಮೂಲಕ ಹಡಗು ಸಂಚಾರವನ್ನು ತೆರೆಯುವ ವಿಚಾರದಲ್ಲಿ ಮಾತುಕತೆ ನಡೆಸಲು ಇರಾನ್ ಸಿದ್ಧವಾಗಿದೆ. ಪ್ರಸ್ತುತ ಜಲಸಂಧಿ ಸಂಚಾರಕ್ಕೆ ಅಡಚಣೆಯಾಗಿದ್ದು, ಇದು ಜಾಗತಿಕ ತೈಲ ಸರಬರಾಜು ಮತ್ತು ಸರಕು ಸಾಗಣೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಈ ಹಂತವು ಸಮುದ್ರ ಮಾರ್ಗಗಳ ಮರುಸ್ಥಾಪನೆಗೆ ಅನುಕೂಲವಾಗಲಿದೆ.

ಹಂತ 3: ಅಣು ಸಂಸ್ಕರಣೆಗೆ ಸಂಬಂಧಿಸಿದ ಚರ್ಚೆಗಳು
ಮೊದಲೆರಡು ಹಂತಗಳು ಸಂಪೂರ್ಣವಾಗಿ ಜಾರಿಗೆ ಬಂದ ಬಳಿಕವೇ ಮೂರನೇ ಹಂತದಲ್ಲಿ ಇರಾನ್‌ನ ಅಣು ಸಂಸ್ಕರಣಾ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಬಹುದು ಎಂದು ಇರಾನ್ ಸ್ಪಷ್ಟಪಡಿಸಿದೆ. ಆದರೆ, ಇರಾನ್ ಮೇಲೆ ತನ್ನ ಅಣು ಸಂಸ್ಕರಣೆಯನ್ನು ನಿಲ್ಲಿಸುವಂತೆ ಯಾವುದೇ ಒತ್ತಡ ಹೇರುವಂತಿಲ್ಲ ಎಂಬ ಕಟ್ಟುನಿಟ್ಟಿನ ನಿಯಮವನ್ನೂ ಇರಾನ್ ಪ್ರಸ್ತಾಪದಲ್ಲಿ ಸೇರಿಸಿದೆ.

ಈ ಮೂರು ಹಂತದ ಪ್ರಸ್ತಾಪವು ಇರಾನ್ ತನ್ನ ಸಂಧಾನದಲ್ಲಿ ಪ್ರಾಬಲ್ಯ ಮತ್ತು ಮೇಲುಗೈ ಸಾಧಿಸುವ ದೃಷ್ಟಿಯಿಂದ ಮುಂದಿಟ್ಟಿರುವ ಕಾರ್ಯತಂತ್ರವಾಗಿದೆ. ಪ್ರತಿ ಹಂತದಲ್ಲೂ ಕೆಲವು ಪೂರ್ವ ಷರತ್ತುಗಳನ್ನು ಪೂರೈಸಿದ ಬಳಿಕವೇ ಮುಂದಿನ ಹಂತಕ್ಕೆ ತೆರಳಬೇಕು ಎನ್ನುವುದು ಇರಾನ್ನ ಸ್ಪಷ್ಟ ನಿಲುವಾಗಿದೆ. ಅಮೆರಿಕ ಮತ್ತು ಪಾಶ್ಚಾತ್ಯ ರಾಷ್ಟ್ರಗಳು ಸಂಪೂರ್ಣವಾಗಿ ಯುದ್ಧ ನಿಲುಗಡೆ ಮತ್ತು ಆಕ್ರಮಣವಲ್ಲದ ಗ್ಯಾರಂಟಿಯನ್ನು ನೀಡದಿದ್ದಲ್ಲಿ ಇರಾನ್ ಹಾರ್ಮುಜ್ ಜಲಸಂಧಿಯನ್ನು ತೆರೆಯುವುದಿಲ್ಲ ಅಥವಾ ಅಣು ಚರ್ಚೆಗೆ ಸಿದ್ಧವಾಗುವುದಿಲ್ಲ ಎಂಬ ನಿಲುವನ್ನು ಇರಾನ್‌ ಮುಂದಿಟ್ಟಿದೆ.

Exit mobile version