ಮತ್ತೆ ಶುರುವಾಯ್ತು ಯುದ್ಧ ಈ ಬಾರೀ ಸೌದಿಗೆ ತೈಲ ಸಂಕಷ್ಟ

ಈಶ್ವರ ಖಂಡ್ರೆ (3)

ಮಧ್ಯಪ್ರಾಚ್ಯದಲ್ಲಿ ಸೌದಿ ಅರೇಬಿಯಾ, ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಇರಾನ್ ಬೆಂಬಲಿತ ಹೌತಿ ಬಂಡುಕೋರರು ಸೌದಿ ಅರೇಬಿಯಾದ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮುಂದುವರಿಸಿದ್ದು, ಈ ಬಾರಿ ಸಂಘರ್ಷ ಮತ್ತಷ್ಟು ಭೀಕರ ರೂಪ ಪಡೆದುಕೊಳ್ಳುವ ಮುನ್ಸೂಚನೆ ಸಿಕ್ಕಿದೆ.

ಅರಬ್ ರಾಷ್ಟ್ರಗಳಿಗೆ ಮತ್ತೆ ಎದುರಾಗಲಿದೆಯೇ ತೈಲ ಸಂಕಷ್ಟ?

ಸಿಕ್ಕಿರುವ ಮೂಲಗಳ ಮಾಹಿತಿಯ ಪ್ರಕಾರ, ಇರಾನ್ನ ಹೌತಿ ಬಂಡುಕೋರರು ಸೌದಿ ಅರೇಬಿಯಾದ ಪ್ರಮುಖ ತೈಲ ಸಂಗ್ರಹಣಾ ಕೇಂದ್ರಗಳನ್ನೇ (Oil Reserves) ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಈ ಬೆ ಬೆಳವಣಿಗೆಯಿಂದಾಗಿ ಸೌದಿಯಲ್ಲಿ ತೈಲ ಉತ್ಪಾದನೆ ಮತ್ತು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ಒಂದು ವೇಳೆ ತೈಲ ಅಭಾವ ಸೃಷ್ಟಿಯಾದರೆ, ಸೌದಿಯನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವ ಭಾರತವೂ ಸೇರಿದಂತೆ ಏಷ್ಯಾದ ಹಲವು ದೇಶಗಳು ಇಂಧನಕ್ಕಾಗಿ ಮತ್ತೆ ಪರದಾಡುವುದು ಖಚಿತ ಎನ್ನಲಾಗುತ್ತಿದೆ.

ಜೇಬಿಗೆ ಕತ್ತರಿ: ಮತ್ತೆ ಏರಿಕೆಯಾಗಲಿದೆಯೇ ಪೆಟ್ರೋಲ್-ಡೀಸಲ್ ಬೆಲೆ?

ಯುದ್ಧದ ವಿಕೋಪದಿಂದಾಗಿ ಸಾರ್ವಜನಿಕರಲ್ಲಿ ಇದೀಗ ಮತ್ತೊಂದು ದೊಡ್ಡ ಆತಂಕ ಶುರುವಾಗಿದೆ. ಈ ಹಿಂದಿನ ಸಂಘರ್ಷಗಳ ವೇಳೆ ಹೆಚ್ಚಾಗಿದ್ದ ಇಂಧನ ದರಗಳು ಇನ್ನೂ ಸಂಪೂರ್ಣವಾಗಿ ಹದಕ್ಕೆ ಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಕಚ್ಚಾ ತೈಲದ ಬೆಲೆ ಏರಿಕೆಯಾದರೆ, ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸಲ್ ದರಗಳು ಆಸಮಾನ ಮುಟ್ಟುವುದು ಖಚಿತ. ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರ ಜೇಬಿಗೆ ಈ ಯುದ್ಧ ಮತ್ತಷ್ಟು ಹೊರೆಯಾಗಲಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬಿಕ್ಕಟ್ಟು ತೀವ್ರಗೊಳ್ಳುವ ಆತಂಕ ಮೂಡಿಸಿದೆ.

Exit mobile version