ಅಮೆರಿಕಾದಲ್ಲಿ ಭೀಕರ ಭೂಕಂಪ: ಕರಾಳ ಭವಿಷ್ಯವಾಣಿ ನುಡಿದ ಪ್ರವಾದಿ ಬ್ರ್ಯಾಂಡನ್ ಡೇಲ್ ಬಿಗ್ಸ್.!

ಭೂಕಂಪ ಬಗ್ಗೆ ಕರಾಳ ಭವಿಷ್ಯವಾಣಿ ನುಡಿದ ಪ್ರವಾದಿ ಬ್ರ್ಯಾಂಡನ್ ಡೇಲ್ ಬಿಗ್ಸ್.!

Untitled design 2025 01 13T170210.102 1140x570

ವಾಷಿಂಗ್ಟನ್‌‌: ಡೊನಾಲ್ಡ್‌‌ ಟ್ರಂಪ್‌‌ ಹತ್ಯೆಗೆ ಯತ್ನಿಸಿದ ಕುರಿತು ಅಮೆರಿಕಾದ ಸ್ವಯಂಘೋಷಿತ ಪ್ರವಾದಿ ಬ್ರ್ಯಾಂಡನ್‌‌ ಡೇಲ್‌‌ ಬಿಗ್ಸ್‌‌ ಭವಿಷ್ಯ ನುಡಿದಿದ್ದು, ಇದೀಗ ನೈಸರ್ಗಿಕ ವಿಕೋಪದ ಭವಿಷ್ಯ ನುಡಿದಿದ್ದಾರೆ. ಒಕ್ಲಹೋಮಾದ ಪಾರ್ದಿಯ ಪ್ರಕಾರ ಅಮೆರಿಕದಲ್ಲಿ ಲಕ್ಷಾಂತರ ಜನರನ್ನು ಬಲಿ ಪಡೆಯಲಿರುವ ಭೂಕಂಪವೊಂದು ಶೀಘ್ರದಲ್ಲೇ ಸಂಭವಿಸಲಿದೆ ಎಂದು ಹೇಳಿದ್ದಾರೆ.

10 ತೀವ್ರತೆಯ ಭೂಕಂಪನ
ರಿಕ್ಟರ್‌ ಮಾಪಕದಲ್ಲಿ 10 ರಷ್ಟು ತೀವ್ರತೆ ದಾಖಲಾಗಲಿದ್ದು, ಈ ಭೂಕಂಪದ ನಂತರ ಅತೀ ಭೀಕರ ದೃಶ್ಯಗಳನ್ನು ಈಗಾಗಲೇ ದೇವರು ತನಗೆ ದರ್ಶನ ಮಾಡಿಸಿದ್ದಾನೆ ಎಂದು ಬ್ರ್ಯಾಂಡನ್‌‌ ಡೇಲ್‌‌ ಬಿಗ್ಸ್‌ ಭವಿಷ್ಯ ನುಡಿದಿದ್ದಾನೆ. ಅಮೆರಿಕದ ಮಿಸೌರಿ, ಅರ್ಕಾನ್ಸಾಸ್, ಟೆನ್ನೆಸ್ಸೀ, ಕೆಂಟುಕಿ, ಇಲಿನಾಯ್ಸ್ ಮತ್ತು ನ್ಯೂ ಮ್ಯಾಡ್ರಿಡ್ ಪ್ರದೇಶದಲ್ಲಿ ಭಾರೀ ಮಾನವ ಹಾನಿಗೆ ಈ ಭೂಕಂಪನ ಮುನ್ನುಡಿ ಬರೆಯಲಿದೆ ಎಂದು ಬಿಗ್ಸ್‌ ಎಚ್ಚರಿಸಿದ್ದಾನೆ.

“ದೇವರು ನನಗೆ ದರ್ಶನ ಮಾಡಿಸಿದ ಭೂಕಂಪನದ ಭೀಕರ ದೃಶ್ಯಗಳು ನನ್ನ ಮನಸ್ಸನ್ನು ಕದಡಿದೆ. ನಾನು ನೋಡಿದ ಒಂದು ದೃಶ್ಯದಲ್ಲಿ ಸುಮಾರು 1,800 ಜನರು ಮನೆ ಮತ್ತು ಕಟ್ಟಡಗಳ ಅವಶೇಷಗಳಡಿ ಸಿಲುಕಿ ಕ್ಷಣಮಾತ್ರದಲ್ಲಿ ಸಾವನ್ನಪ್ಪಿದರು. ನ್ಯೂ ಮ್ಯಾಡ್ರಿಡ್‌ನಲ್ಲಿ ಭೂಕಂಪನ ಸಂಭವಿಸಿದಾಗ ಮಿಸ್ಸಿಸ್ಸಿಪ್ಪಿ ನದಿಯ ಹರಿಯುವ ದಿಕ್ಕು ಬದಲಾಗಲಿದೆ..” ಎಂದು ಬಿಗ್ಸ್‌ ಹೇಳಿದ್ದಾನೆ.

ಟ್ರಂಪ್‌ ಹತ್ಯೆಗೆ ಯತ್ನಿಸಿದ ಘಟನೆಗೆ ಬಗ್ಗೆ ಭವಿಷ್ಯವಾಣಿ
ಬ್ರ್ಯಾಂಡನ್‌‌ ಡೇಲ್‌‌ ಬಿಗ್ಸ್‌‌ ಕಳೆದ ಮಾರ್ಚ್‌‌ 14, 2024 ರಂದು ತನ್ನ ಯೂಟ್ಯೂಬ್‌‌ ವೀಡಿಯೊದಲ್ಲಿ, ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದ ರಿಪಬ್ಲಿಕನ್‌‌ ಪಕ್ಷದ ಅಭ್ಯರ್ಥಿ ಡೋನಾಲ್ಡ್‌‌ ಟ್ರಂಪ್‌ ಮೇಲೆ ಹತ್ಯೆಗೆ ಯತ್ನ ನಡೆಯಲಿದೆ ಎಂದು ಭವಿಷ್ಯವಾಣಿ ನುಡಿದಿದ್ದರು.

ಟ್ರಂಪ್‌ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡುತ್ತಿರುವಾಗಲೇ, ಆಗುಂತಕನೋರ್ವ ಅವರ ಕಿವಿ ಭಾಗದತ್ತ ಗುಂಡು ಹಾರಿಸಲಿದ್ದಾನೆ ಎಂದು ಬ್ರ್ಯಾಂಡನ್‌‌ ಡೇಲ್‌‌ ಬಿಗ್ಸ್‌‌ ಕರಾರುವಕ್ಕಾಗಿ ಭವಿಷ್ಯ ಹೇಳಿದ್ದನು. ಅದರಂತೆ ಟ್ರಂಪ್ ಪೆನ್ಸಿಲ್ವೇನಿಯಾದ ಬಟ್ಲರ್ ಕೌಂಟಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿರುವಾಗ, ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂಬ ಬಂದೂಕುಧಾರಿ ಹಾರಿಸಿದ್ದ ಗುಂಡು ಅವರ ಕಿವಿಯನ್ನು ಸೀಳಿತ್ತು.

10 ತೀವ್ರತೆಯ ಭೂಕಂಪನ ಸಾಧ್ಯವೇ?
ಇನ್ನು ಬ್ರ್ಯಾಂಡನ್ ಡೇಲ್ ಬಿಗ್ಸ್ ಭವಿಷ್ಯವಾಣಿಯನ್ನು ಪ್ರಶ್ನಿಸಿರುವ ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS), ರಿಕ್ಟರ್‌ ಮಾಪಕದಲ್ಲಿ 10 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯ ಭೂಕಂಪನ ಸಂಭವಿಸುವುದು ಅಸಾಧ್ಯ ಎಂದು ಹೇಳಿದೆ. “ಭೂಕಂಪನದ ತೀವ್ರತೆಯು ಒಂದು ನಿರ್ದಿಷ್ಟ ಪ್ರದೇಶದ ಭೌಗೋಳಿಕ ಲಕ್ಷಣದ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಬಿಗ್ಸ್‌ ಭವಿಷ್ಯವಾಣಿ ಹೇಳುತ್ತಿರುವಂತೆ ಭೂಂಇಯ ಮೇಲಿನ ಯಾವುದೇ ಭಾಗದಲ್ಲಿ 10 ರಷ್ಟು ತೀವ್ರತೆಯ ಭೂಕಂಪನ ಸಂಭವಿಸಲು ಸಾಧ್ಯವಿಲ್ಲ..” ಎಂದು ಯುಎಸ್‌ಜಿಎಸ್‌ ಸ್ಪಷ್ಟಪಡಿಸಿದೆ.

Exit mobile version