ಬಾಯ್‌ಫ್ರೆಂಡ್‌ ಜೊತೆಗೆ ವ್ಯಾಲೆಂಟೈನ್ಸ್‌ ಡೇ ಸೆಲೆಬ್ರೇಟ್‌ ಮಾಡಿದ ರಕ್ಷಿತಾ ಶೆಟ್ಟಿ

Untitled design 2026 02 04T175037.457

ʻಬಿಗ್‌ ಬಾಸ್‌ ಕನ್ನಡ ಸೀಸನ್‌ 12’ರ ರನ್ನರ್‌ ಅಪ್‌ ಆಗಿ ಹೊರಹೊಮ್ಮಿದ ರಕ್ಷಿತಾ ಶೆಟ್ಟಿ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರ ಆಟ, ಮಾತು ಅಥವಾ ಕಾರ್ಯಕ್ರಮವಲ್ಲ, ಬದಲಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿರುವ ಹಳೆಯ ವ್ಯಾಲೆಂಟೈನ್ಸ್‌ ಡೇ ವಿಡಿಯೋವೇ ಹೊಸ ಚರ್ಚೆಗೆ ಕಾರಣವಾಗಿದೆ. ರಕ್ಷಿತಾ ಶೆಟ್ಟಿ ಜೊತೆ ಕಾಣಿಸಿಕೊಂಡಿರುವ ಯುವಕನ ಬಗ್ಗೆ “ಇವರೇ ಬಾಯ್‌ಫ್ರೆಂಡ್‌ ಹಾ?” ಎಂಬ ಅನುಮಾನಗಳು ನೆಟ್ಟಿಗರಲ್ಲಿ ಮನೆ ಮಾಡಿವೆ.

ಕಂಟೆಂಟ್‌ ಕ್ರಿಯೇಟರ್‌ ಆಗಿ ಗುರುತಿಸಿಕೊಂಡಿದ್ದ ರಕ್ಷಿತಾ ಶೆಟ್ಟಿ, ʻಬಿಗ್‌ ಬಾಸ್‌ ಕನ್ನಡ’ ಮನೆಗೆ ಎಂಟ್ರಿ ಕೊಟ್ಟ ಮೊದಲ ದಿನವೇ ಔಟ್‌ ಆಗಿದ್ದರು. ಆದರೆ, ರೀ-ಎಂಟ್ರಿ ಪಡೆದು ತಮ್ಮ ಪಾಸಿಟಿವ್‌ ಆಟ, ಸರಳ ಸ್ವಭಾವ ಮತ್ತು ನೇರ ಮಾತಿನ ಮೂಲಕ ವೀಕ್ಷಕರ ಮನಸ್ಸು ಗೆದ್ದರು. ವಯಸ್ಸಿನಲ್ಲಿ ಚಿಕ್ಕವರಾದರೂ, ಅನುಭವಿ ಸ್ಪರ್ಧಿಗಳ ಮಧ್ಯೆ ಆಟವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಆಡಿದ ರಕ್ಷಿತಾ ಶೆಟ್ಟಿ ಫೈನಲ್‌ ತಲುಪಿ ರನ್ನರ್‌ ಅಪ್‌ ಪಟ್ಟವನ್ನು ತಮ್ಮದಾಗಿಸಿಕೊಂಡರು.

ಬಿಗ್‌ ಬಾಸ್‌ ಮನೆಯೊಳಗೆ ರಕ್ಷಿತಾ ಶೆಟ್ಟಿ ಹೆಚ್ಚು ಹೈಲೈಟ್‌ ಆದ ವಿಷಯಗಳಲ್ಲಿ ʻಗಿಲ್ಲಿ ಟಾಪಿಕ್‌’ ಕೂಡ ಒಂದು. “ನನಗೆ ಗಿಲ್ಲಿ ತರದ ಹುಡುಗ ಬೇಕು, ಒಳ್ಳೆಯ ಮನಸ್ಸಿನವನಾಗಿರಬೇಕು, ಲೈವ್‌ಲಿ ಆಗಿರಬೇಕು” ಎಂದು ರಕ್ಷಿತಾ ಹಲವು ಬಾರಿ ಹೇಳಿಕೊಂಡಿದ್ದರು. ರೈತ ಕುಟುಂಬದ ಹಿನ್ನೆಲೆ ಇರಬೇಕು ಎಂಬ ಆಸೆಯನ್ನೂ ಅವರು ವ್ಯಕ್ತಪಡಿಸಿದ್ದರು. ಆದರೆ, ಎಲ್ಲರನ್ನು ಅಣ್ಣ ಎಂದು ಕರೆಯುತ್ತಿದ್ದ ರಕ್ಷಿತಾ, ಗಿಲ್ಲಿಯನ್ನ ಮಾತ್ರ ಅಣ್ಣ ಎಂದು ಒಪ್ಪಿಕೊಳ್ಳದೆ ಇರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಬಿಗ್‌ ಬಾಸ್‌ನಿಂದ ಹೊರಬಂದ ನಂತರ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ರಕ್ಷಿತಾ ಶೆಟ್ಟಿ, “ಗಿಲ್ಲಿ ತರದ ಹುಡುಗ ಬೇಕು ಎಂದಿದ್ದೇನೆ ಹೊರತು, ಗಿಲ್ಲಿಯೇ ಬೇಕು ಎಂದು ಹೇಳಿಲ್ಲ. ಗಿಲ್ಲಿ ನನ್ನ ಪ್ರೈಯಾರಿಟಿ, ಅವರು ತುಂಬಾ ಒಳ್ಳೆಯ ಫ್ರೆಂಡ್‌” ಎಂದು ಹೇಳುವ ಮೂಲಕ ಲವ್‌ ಗಾಸಿಪ್‌ಗಳಿಗೆ ಬ್ರೇಕ್‌ ಹಾಕಿದ್ದರು.

ಇದೀಗ ಮತ್ತೆ ಹೊಸ ಗಾಸಿಪ್‌ಗೆ ಕಾರಣವಾದದ್ದು ರಕ್ಷಿತಾ ಶೆಟ್ಟಿಯ ಹಳೆಯ ಯೂಟ್ಯೂಬ್‌ ವ್ಲಾಗ್‌. ಸುಮಾರು ಒಂದೆರಡು ವರ್ಷಗಳ ಹಿಂದೆ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ರಕ್ಷಿತಾ ಶೆಟ್ಟಿ ವ್ಯಾಲೆಂಟೈನ್ಸ್‌ ಡೇ ಸೆಲೆಬ್ರೇಷನ್‌ ವ್ಲಾಗ್‌ ಅನ್ನು ಅಪ್‌ಲೋಡ್‌ ಮಾಡಿದ್ದರು. ಆ ವಿಡಿಯೋದಲ್ಲಿ ರಕ್ಷಿತಾ ಶೆಟ್ಟಿ ಒಬ್ಬ ಯುವಕನ ಜೊತೆ ವ್ಯಾಲೆಂಟೈನ್ಸ್‌ ಡೇ ಆಚರಿಸುತ್ತಿರುವ ದೃಶ್ಯಗಳು ಇದ್ದವು. ಈ ವೀಡಿಯೋದ ಕೆಲ ಕ್ಲಿಪ್‌ಗಳು ಮಾತ್ರ ಇದೀಗ ವೈರಲ್‌ ಆಗಿದ್ದು, “ಇವರೇ ರಕ್ಷಿತಾ ಶೆಟ್ಟಿಯ ಬಾಯ್‌ಫ್ರೆಂಡ್‌” ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಶುರುವಾಗಿದೆ.

ಆದರೆ, ಈ ವೈರಲ್‌ ವಿಡಿಯೋ ಹಿಂದೆ ಇರುವ ಸತ್ಯವೇ ಬೇರೆ. ರಕ್ಷಿತಾ ಶೆಟ್ಟಿ ವ್ಯಾಲೆಂಟೈನ್ಸ್‌ ಡೇ ಸೆಲೆಬ್ರೇಟ್‌ ಮಾಡಿದ್ದು ನಿಜವಾದರೂ, ಅದು ವೈಯಕ್ತಿಕ ಕಾರಣಕ್ಕಾಗಿ ಅಲ್ಲ. ಅದು ಸಂಪೂರ್ಣವಾಗಿ ಸ್ಕ್ರಿಪ್ಟೆಡ್‌ ಕಂಟೆಂಟ್‌. ಹೌದು, ರಕ್ಷಿತಾ ಶೆಟ್ಟಿ ಹಲವು ಬ್ರ್ಯಾಂಡ್‌ ಪ್ರಮೋಷನ್‌ ಮತ್ತು ಕಂಟೆಂಟ್‌ ಕೊಲ್ಯಾಬರೇಷನ್‌ಗಳನ್ನು ಮಾಡುತ್ತಿರುತ್ತಾರೆ. ಅದರ ಭಾಗವಾಗಿ ಒಂದು ಬ್ರ್ಯಾಂಡ್‌ ಪ್ರಮೋಷನ್‌ಗಾಗಿ ವ್ಯಾಲೆಂಟೈನ್ಸ್‌ ಡೇ ಥೀಮ್‌ನಲ್ಲಿ ವ್ಲಾಗ್‌ ಮಾಡಲಾಗಿತ್ತು.

ಆ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಯುವಕ ಅನೀಶ್‌. ಅವರು ರಕ್ಷಿತಾ ಶೆಟ್ಟಿಯ ಸ್ನೇಹಿತ ಮಾತ್ರ. ಆದರೆ, ವ್ಲಾಗ್‌ನ ಕೆಲ ದೃಶ್ಯಗಳು ಕಟ್‌ ಆಗಿ ವೈರಲ್‌ ಆದ ಕಾರಣ ಅನಗತ್ಯ ಗಾಸಿಪ್‌ಗಳು ಹುಟ್ಟಿಕೊಂಡಿವೆ. ಸದ್ಯ ರಕ್ಷಿತಾ ಶೆಟ್ಟಿ ತಮ್ಮ ವೃತ್ತಿ ಜೀವನದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದು, ಲವ್‌ ಲೈಫ್‌ ಬಗ್ಗೆ ಹರಡುತ್ತಿರುವ ವದಂತಿಗಳಿಗೆ ಈ ರೀತಿ ಕಂಟೆಂಟ್‌ಗಳೇ ಕಾರಣವಾಗುತ್ತಿದೆ.

ಒಟ್ಟಾರೆ, ವೈರಲ್‌ ಆಗಿರುವ ವ್ಯಾಲೆಂಟೈನ್ಸ್‌ ಡೇ ವಿಡಿಯೋ ರಕ್ಷಿತಾ ಶೆಟ್ಟಿಯ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದದ್ದಲ್ಲ; ಅದು ಕೇವಲ ಒಂದು ಬ್ರ್ಯಾಂಡ್‌ ಕಂಟೆಂಟ್‌ ಅಷ್ಟೇ ಎಂಬುದು ಸ್ಪಷ್ಟವಾಗಿದೆ.

Exit mobile version