ಊಟ ಮಾಡುತ್ತಿದ್ದಾಗಲೇ ವ್ಯಕ್ತಿಗೆ ಹೃದಯಾಘಾತ: ಮಗಳು ಕಣ್ಣೆದುರೇ ಪ್ರಾಣಬಿಟ್ಟ ತಂದೆ

ಮಾಡಲು (10)

ರಾಮನಗರ: ಮಗಳು ಮತ್ತು ಅಳಿಯನೊಂದಿಗೆ ಮನೆಯಲ್ಲಿ ಕುಳಿತು ಸಂತೋಷದಿಂದ ಊಟ ಮಾಡುತ್ತಿದ್ದ ವ್ಯಕ್ತಿಗೆ ಏಕಾಏಕಿ ಹೃದಯಾಘಾತವಾಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಈ ಘಟನೆ ರಾಮನಗರ ತಾಲೂಕಿನ ಮಂಚಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ. ಆಗಸ್ಟ್ 22ರ ರಾತ್ರಿ ನಡೆದ ಈ ಘಟನೆ ನಡೆದಿದೆ.

ಮೃತರನ್ನು ಶಿವಲಿಂಗಯ್ಯ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಮಗಳು ಮತ್ತು ಅಳಿಯನೊಂದಿಗೆ ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಅವರಿಗೆ ಏಕಾಏಕಿ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಅವರು ಕುಸಿದುಬಿದ್ದಿದ್ದು, ಪರಿಸ್ಥಿತಿ ಅರಿತ ಮಗಳು ತಕ್ಷಣ ತಂದೆಗೆ ಪ್ರಾಥಮಿಕ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಆದರೆ ಮಗಳು ಮತ್ತು ಅಳಿಯನ ಕಣ್ಣೆದುರೇ ಶಿವಲಿಂಗಯ್ಯ ಮೃತಪಟ್ಟಿದ್ದಾರೆ.  

ಈ ಸಂಪೂರ್ಣ ಘಟನೆ ಮನೆಯಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ತಿಳಿದುಬಂದಿದೆ. ಊಟ ಮಾಡುತ್ತಿದ್ದ ವ್ಯಕ್ತಿ ಏಕಾಏಕಿ ಅಸ್ವಸ್ಥಗೊಂಡು ಕುಸಿದುಬಿದ್ದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. 

 ಶಿವಲಿಂಗಯ್ಯ ಅವರು ಮಗಳು ಮತ್ತು ಅಳಿಯನೊಂದಿಗೆ ಊಟಕ್ಕೆ ಕುಳಿತಿದ್ದರು. ಎಲ್ಲರೂ ಊಟ ಮಾಡುತ್ತಿದ್ದ ವೇಳೆ ಯಾವುದೇ ಮುನ್ಸೂಚನೆಯಿಲ್ಲದೆ ಅವರು ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ ಮಗಳು ನೆರವಿಗೆ ಧಾವಿಸಿ ಪ್ರಾಥಮಿಕ ಚಿಕಿತ್ಸೆ ನೀಡಲು ಪ್ರಯತ್ನಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಶಿವಲಿಂಗಯ್ಯ ಅವರ ಸ್ಥಿತಿ ಗಂಭೀರವಾಗಿದ್ದು, ಅವರು ಮೃತಪಟ್ಟಿದ್ದಾರೆ.

 

Exit mobile version