ಗ್ರಾಹಕರಿಗೆ ಮತ್ತೊಂದು ಶಾಕ್!: ಹಾಲಿನ ದರ ಏರಿಕೆಗೆ ಮುಹೂರ್ತ ಫಿಕ್ಸ್?

Untitled design 2026 09 26T114401.424

ಬೆಂಗಳೂರು, ಸೆಪ್ಟೆಂಬರ್ 26: ಹಾಲಿನ ದರ ಏರಿಕೆ ಸಂಬಂಧ ಹಾಲು ಒಕ್ಕೂಟಗಳು ಇಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲಿದ್ದು, ಇಂದೇ ದರ ಏರಿಕೆಗೆ ಮುಹೂರ್ತ ಫಿಕ್ಸ್ ಆಗುವ ಸಾಧ್ಯತೆಯಿದೆ. ಬಮುಲ್ ಅಧ್ಯಕ್ಷ ಡಿಕೆ ಸುರೇಶ್ ಹಾಗೂ ಕೆಎಂಎಫ್ ಮಾಜಿ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದ ನಿಯೋಗ ಇಂದು ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲಿದೆ. ಈ ವೇಳೆ ಪ್ರತಿ ಲೀಟರ್ ಹಾಲಿನ ಮೇಲೆ 10 ರೂ. ಹೆಚ್ಚಳ ಮಾಡಲು ಪ್ರಸ್ತಾವನೆ ಸಲ್ಲಿಕೆ ಮಾಡಲಿದ್ದಾರೆ. ಜೊತೆಗೆ ಹಾಲಿನ ಜೊತೆಗೆ ಮೊಸರು, ಬೆಣ್ಣೆ, ತುಪ್ಪದ ಬೆಲೆ ಏರಿಕೆಗೂ ಮನವಿ ಮಾಡಲಿದ್ದಾರೆ.

ಇಂದು ಸಿಎಂ ನಿವಾಸದಲ್ಲಿ ಹೈವೋಲ್ಟೇಜ್ ಸಭೆ

ಈಗಾಗಲೇ ಹಾಲು ಒಕ್ಕೂಟಗಳೊಂದಿಗೆ ಸಭೆ ನಡೆದಿದ್ದು, ದರ ಏರಿಕೆ ಬಗ್ಗೆ ಸರ್ಕಾರ ಇಂದೇ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಸಿಎಂ ಡಿಕೆ ಶಿವಕುಮಾರ್ ಅವರ ನಿವಾಸದಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಸಭೆಯಲ್ಲಿ ಹಾಲಿನ ಉತ್ಪಾದನಾ ವೆಚ್ಚ, ಮೇವು ಮತ್ತು ನಿರ್ವಹಣಾ ವೆಚ್ಚ ಏರಿಕೆ ಹಿನ್ನೆಲೆ ದರ ಪರಿಷ್ಕರಣೆ ಬಗ್ಗೆ ಚರ್ಚೆ ನಡೆಯಲಿದೆ. ರಾಜ್ಯದ 16 ಹಾಲು ಒಕ್ಕೂಟಗಳು ದರ ಏರಿಕೆಗೆ ಒತ್ತಾಯ ಮಾಡುತ್ತಿದ್ದು, ಪ್ರತಿ ಲೀಟರ್‌ಗೆ ಕನಿಷ್ಠ 5 ರೂ.ನಿಂದ 10 ರೂ.ವರೆಗೆ ಹೆಚ್ಚಳ ಮಾಡುವ ಪ್ರಸ್ತಾವನೆ ಸಲ್ಲಿಸಲಾಗಿದೆ.

ಸಂಭಾವ್ಯ ಪರಿಷ್ಕೃತ ದರಗಳ ಪಟ್ಟಿ

ಸರ್ಕಾರದ ಮುಂದಿರುವ ಪ್ರಸ್ತಾವನೆಯಂತೆ, ಹಾಲಿನ ದರಗಳು ಈ ಕೆಳಗಿನಂತೆ ಪರಿಷ್ಕರಣೆಯಾಗುವ ಸಾಧ್ಯತೆಯಿದೆ.

ಈ ದರ ಪರಿಷ್ಕರಣೆ ಜಾರಿಗೆ ಬಂದರೆ ರಾಜ್ಯದ ಜನರಿಗೆ ಮಿಲ್ಕ್ ಶಾಕ್ ಕಾದಿದೆ ಎಂದೇ ಹೇಳಬಹುದು. ಇನ್ಮುಂದೆ ಹಾಲು, ಮೊಸರು, ಕಾಫಿ, ಟೀ ಕುಡಿಯುವುದಕ್ಕೂ ಹೆಚ್ಚು ಹಣ ವ್ಯಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.

ಕಾಫಿ, ಟೀ ಪ್ರಿಯರಿಗೂ ಶಾಕ್

ಹಾಲಿನ ದರ ಏರಿಕೆಯಾದರೆ ಅದರ ಪರಿಣಾಮ ಕಾಫಿ ಮತ್ತು ಟೀ ದರಗಳ ಮೇಲೂ ಬೀಳಲಿದೆ. ಇನ್ಮುಂದೆ ಕಾಫಿ, ಟೀ ಕುಡಿಯಬೇಕು ಅಂದ್ರೂ ಹೆಚ್ಚು ದುಡ್ಡು ಕೊಡಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ಈಗಾಗಲೇ ಹೋಟೆಲ್ ಅಸೋಸಿಯೇಷನ್‌ನಲ್ಲಿ ಕಾಫಿ, ಟೀ ದರ ಏರಿಕೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಸಿಎಂ ಸಭೆ ಬಳಿಕ ಹಾಲಿನ ದರ ಏರಿಕೆ ಅಧಿಕೃತವಾದರೆ, ಕಾಫಿ, ಟೀ ರೇಟ್ ಏರಿಸಲು ನಿರ್ಧರಿಸುವ ಸಾಧ್ಯತೆಯಿದೆ. ಇದರಿಂದ ಸಾಮಾನ್ಯ ಜನರ ಮೇಲೆ ಹೆಚ್ಚುವರಿ ಹೊರೆ ಬೀಳಲಿದೆ.

Exit mobile version