Fact Check:ವಿಶ್ವಸಂಸ್ಥೆಯಲ್ಲಿ ವಾಜಪೇಯಿ ಕಾಶ್ಮೀರದ ಕುರಿತು ಆಡಿದ ಮಾತು ನಿಜವೇ?

Untitled design (29)

ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಈ ಪೋಸ್ಟ್, ಅಟಲ್ ಬಿಹಾರಿ ವಾಜಪೇಯಿ ಅವರು, ರಾಷ್ಟ್ರೀಯ ಸಂಘಟನೆಗಳು (UNO)ಯಲ್ಲಿ ಕಾಶ್ಮೀರ ವಿಚಾರವಾಗಿ ನೀಡಿದ ಭಾಷಣ ಎಂದು ಹೇಳುತ್ತಾ, ಅವರು ಪಿ.ವಿ. ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭಾರತವನ್ನು ಪ್ರತಿನಿಧಿಸಲು ಯುಎನ್‌ಗೆ ಕಳುಹಿಸಲ್ಪಟ್ಟಾಗ, ಋಷಿ ಕಶ್ಯಪರ ಕುರಿತು ಕಥೆಯೊಂದನ್ನು ಹೇಳಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಎಂಬದು ಈ ಪೋಸ್ಟ್‌ನ ಮುಖ್ಯ ವಾದವಾಗಿದೆ.

ಈ ಕಥೆಗೆ ಪಾಕಿಸ್ತಾನ ಪ್ರತಿನಿಧಿಯೊಬ್ಬರು ವಿರೋಧ ವ್ಯಕ್ತಪಡಿಸಿ, ಕಶ್ಯಪರ ಕಾಲದಲ್ಲಿ ಪಾಕಿಸ್ತಾನ ಅಸ್ತಿತ್ವದಲ್ಲಿಯೇ ಇರಲಿಲ್ಲ ಎಂಬುದನ್ನು ಒಪ್ಪಿಕೊಂಡಂತೆ ಪೋಸ್ಟ್ ಹೇಳುತ್ತದೆ. ಅಷ್ಟಕ್ಕೂ ಇದು ನಿಜವೇ?

ADVERTISEMENT
ADVERTISEMENT

ಪಿ.ವಿ. ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರವು 1994ರಲ್ಲಿ ನಡೆದ ಜೆನಿವಾ ಯುನೈಟೆಡ್ ನೇಷನ್ಸ್ ಕಮಿಷನ್ ಆನ್ ಹ್ಯೂಮನ್ ರೈಟ್ಸ್ (UNHCR) ಅಧಿವೇಶನಕ್ಕೆ  ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭಾರತದ ನಿಯೋಗದ ನಾಯಕನಾಗಿ ಕಳುಹಿಸಿತ್ತು. ವಾಜಪೇಯಿ ನೇತೃತ್ವದ ನಿಯೋಗವು ಕಾಶ್ಮೀರ ಕುರಿತು ಭಾರತ ವಿರುದ್ಧ ಯುಎನ್ ನಿರ್ಣಯವನ್ನು ಯಶಸ್ವಿಯಾಗಿ ತಡೆಯುವಲ್ಲಿ ಯಶಸ್ವಿಯಾಯಿತು ಎಂದು ಸಾಮಾಜಿಕ ಮಾಧ್ಯಮದಲ್ಲಿ ಹರಡಲಾಗುತ್ತಿದೆ.

ಅಸಲಿಗೆ ಈ ಪೋಸ್ಟ್ ಹೇಳುತ್ತಿರುವುದು ನಿಜವೇ ಎಂದು ಪರಿಶೀಲಿದಾಗ, ವಾಜಪೇಯಿ ಅವರು ಯುಎನ್‌ಎಚ್‌ಸಿಆರ್‌(UNHCR) ಸಮ್ಮೇಳನದಲ್ಲಿ ಋಷಿ ಕಶ್ಯಪರ ಕಥೆ ಹೇಳಿದರು ಎಂಬುದು ಯಾವುದೇ ಅಧಿಕೃತ ವರದಿಗಳಲ್ಲಿಯೂ ಕಂಡುಬಂದಿಲ್ಲ. ಈ ಅಧಿವೇಶನದ ಕೆಲವು ಅಧಿಕೃತ ಪ್ರತಿಕ್ರಿಯೆಗಳ ದಸ್ತಾವೇಜುಗಳನ್ನು “ಇಲ್ಲಿ, ಇಲ್ಲಿ ಮತ್ತು ಇಲ್ಲಿ” ಎಂದು ಹಲವಾರು ಮೂಲಗಳಲ್ಲಿ ಕಾಣಬಹುದು.

ಇದೇ ಕಥೆಯನ್ನು ಕೀವರ್ಡ್‌ಗಳ ಮೂಲಕ ಹುಡುಕಿದಾಗ, ಇದು ಖ್ಯಾತ ಲೇಖಕ ಕುಶ್ವಂತ್ ಸಿಂಗ್ ಅವರ ‘Joke Book 9’ ನಲ್ಲಿ ಪ್ರಕಟವಾದ ಒಂದು ಕಲ್ಪಿತ ಹಾಸ್ಯ ಕಥೆಯ ಆಧಾರದ ಮೇಲೆ ಸಂಪಾದಿತ ಮಾಡಲಾಗಿರುವುದು ಎಂಬುದು ತಿಳಿದುಬಂದಿದೆ.

ಈ ಕಥೆಯನ್ನು ನವದೆಹಲಿಯ ವಿಪಿನ್ ಬಕ್ಸಿ ಎಂಬವರು ಮೊದಲು ಕಳುಹಿಸಿದ್ದರು. ಈ ಕಥೆಯ ಸ್ಕ್ರೀನ್‌ಶಾಟ್‌ಗಳನ್ನು ಕೂಡ ಜನಪ್ರಿಯ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಲಭ್ಯವಿರುವ ಪುಸ್ತಕದ ಆವೃತ್ತಿಗಳಲ್ಲಿ ಕಾಣಬಹುದು.

ಸತ್ಯಾಂಶವೇನು?

ಕುಶ್ವಂತ್ ಸಿಂಗ್ ಅವರ ‘Joke Book 9’ ನಲ್ಲಿ ಪ್ರಕಟವಾದ ಕಲ್ಪಿತ ಹಾಸ್ಯ ಕಥೆಯನ್ನು ಸಂಪಾದಿಸಿ, ಅಟಲ್ ಬಿಹಾರಿ ವಾಜಪೇಯಿ ಅವರು ಯುನೈಟೆಡ್ ನೇಷನ್ಸ್‌ನಲ್ಲಿ ಹೇಳಿದ್ದಾರೆ ಎಂಬುದಾಗಿ ತಪ್ಪಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಲಾಗುತ್ತಿದೆ. ಸದ್ಯ ಇದು ಸುಳ್ಳು ಎಂದು ಸಾಬೀತುಪಡಿಸಲಾಗಿದೆ.

Exit mobile version