ಗಣಿತ ವಿಷಯ ಕಷ್ಟ ಎನ್ನುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್‌!

ಇನ್ಮುಂದೆ ಗಣಿತ ವಿಷಯದಲ್ಲಿ ಇರಲಿದ್ಯಾ ಎರಡು ಪೇಪರ್?

BeFunky collage 2026 01 20T131636.196

ಗಣಿತ ವಿಷಯ ಕಷ್ಟ ಎಂದು ಭಯಪಡುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.  ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯ ಗಣಿತ ವಿಷಯದಲ್ಲಿ ಎರಡು ಮಟ್ಟದ ಪ್ರಶ್ನೆ ಪತ್ರಿಕೆಗಳು ಜಾರಿಗೊಳಿಸುವಂತೆ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿವೆ. ಕೇಂದ್ರೀಯ ಮಾದರಿಯಾದ CBSEನಂತೆಯೇ ಇದನ್ನು ಅಳವಡಿಸಲು ಪ್ರಸ್ತಾವನೆ ಮಾಡಲಾಗಿದ್ದು, 2027-28ರ ಶೈಕ್ಷಣಿಕ ವರ್ಷದಿಂದಲೇ ಜಾರಿಗೊಳಿಸುವಂತೆ ಒತ್ತಾಯಿಸಲಾಗಿದೆ.

ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘಟನೆ KAMS ಈ ಮನವಿ ಸಲ್ಲಿಸಿದ್ದು, ಇದರಿಂದ ವರ್ಷಕ್ಕೆ 8-9 ಲಕ್ಷ ವಿದ್ಯಾರ್ಥಿಗಳಿಗೆ ನೇರವಾಗಿ ಪ್ರಯೋಜನ ಸಿಗಲಿದೆ ಎಂದು ಅಂದಾಜಿಸಲಾಗಿದೆ. ಗಣಿತ ಪರೀಕ್ಷೆಯ ಭಯ ಕಡಿಮೆಯಾಗಿ, ಅನುತ್ತೀರ್ಣ ಪ್ರಮಾಣ ಗಣನೀಯವಾಗಿ ತಗ್ಗುವ ಸಾಧ್ಯತೆ ಇದೆ.

ಏಕೆ ಈ ಬದಲಾವಣೆ?  ಕಾರಣಗಳು ಏನು?

ಎರಡು ಮಟ್ಟದ ಗಣಿತ ಪರೀಕ್ಷೆಗಳು ಹೇಗಿರಲಿವೆ?

ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮತ್ತು ಭವಿಷ್ಯದ ಗುರಿಗಳನ್ನು ಆಧರಿಸಿ ಆಯ್ಕೆ ಮಾಡಬಹುದು. ಇದರಿಂದ ಶೈಕ್ಷಣಿಕ ಒತ್ತಡ ಕಡಿಮೆಯಾಗಿ, ವಿದ್ಯಾರ್ಥಿಗಳು ಸಂತೋಷದಿಂದ ಕಲಿಯುವಂತಾಗುತ್ತದೆ.

ಶಿಕ್ಷಣ ತಜ್ಞರ ಅಭಿಪ್ರಾಯ

ಈ ಮನವಿಯನ್ನು ಸ್ವಾಗತಿಸುವ ಶಿಕ್ಷಣ ತಜ್ಞರು, ಇದು NEP 2020ನ ಆಧುನಿಕ ಶಿಕ್ಷಣ ಧೋರಣೆಗೆ ಹೊಂದಿಕೊಳ್ಳುವುದು ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಪಠ್ಯಕ್ರಮವನ್ನು ವೈಯಕ್ತಿಕಗೊಳಿಸುವುದು ಇದರ ಉದ್ದೇಶ ಎಂದು ಅವರು ಒತ್ತಿಹೇಳಿದ್ದಾರೆ.

ಶಿಕ್ಷಣ ಇಲಾಖೆಯು ಈ ಪ್ರಸ್ತಾವನೆಯನ್ನು ಪರಿಶೀಲಿಸಿ, ಶೀಘ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದರಿಂದ ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಆಗಲಿದೆ.

Exit mobile version