ಕರ್ನಾಟಕ SSLC ಫಲಿತಾಂಶ ಪ್ರಕಟ: ರಾಜ್ಯಕ್ಕೆ ಮೂವರು ಟಾಪರ್, ಶೇ. 90ರಷ್ಟು ಫಲಿತಾಂಶ ದಾಖಲು!

BeFunky collage (9)

2026ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷಾ ಫಲಿತಾಂಶ ಇಂದು ಅಧಿಕೃತವಾಗಿ ಹೊರಬಿದ್ದಿದ್ದು, ರಾಜ್ಯದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಬಿಡುಗಡೆ ಮಾಡಿದ್ದು, ಈ ಬಾರಿ ಮೂವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ.

ರಾಜ್ಯದ ಟಾಪರ್‌ಗಳು ಇವರೇ :

ಪೂರ್ಣ ಅಂಕಗಳನ್ನು ಪಡೆಯುವ ಮೂಲಕ ಮೂವರು ವಿದ್ಯಾರ್ಥಿಗಳು ಇತಿಹಾಸ ಬರೆದಿದ್ದಾರೆ:

ಜಾನವಿ – ಹಾಸನ-625ಕ್ಕೆ 625

ಉತ್ಸವ ಪಾಟೀಲ್ – ಹಾಸನ-625ಕ್ಕೆ 625

ರೂಪಾ ಚನಗೌಡ ಪಾಟೀಲ – ಬೆಳಗಾವಿ-625ಕ್ಕೆ 625

ಪ್ರತಿ ವರ್ಷದಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಉತ್ತೀರ್ಣ ಪ್ರಮಾಣದಲ್ಲಿ ಮುಂಚೂಣಿಯಲ್ಲಿದ್ದಾರೆ.

ದಾಖಲೆಯ ಶೇ. 90ರಷ್ಟು ಫಲಿತಾಂಶ :

ಕಳೆದ ವರ್ಷ ಶೇ. 68.38ರಷ್ಟು ಫಲಿತಾಂಶ ಬಂದಿತ್ತು. ಆದರೆ ಈ ಬಾರಿ ಭರ್ಜರಿ ಏರಿಕೆ ಕಂಡಿದ್ದು, ಒಟ್ಟು ಶೇ. 90ರಷ್ಟು ಫಲಿತಾಂಶ ದಾಖಲಾಗಿದೆ. ಪಾಸಿಂಗ್ ಅಂಕಗಳನ್ನು ಶೇ. 33ಕ್ಕೆ ಇಳಿಸಿರುವುದು ಮತ್ತು ತೃತೀಯ ಭಾಷೆಗಳಿಗೆ ಗ್ರೇಸ್ ಮಾರ್ಕ್ಸ್ ನೀಡಿರುವುದು ಈ ಹೆಚ್ಚಿನ ಉತ್ತೀರ್ಣ ದರಕ್ಕೆ ಪ್ರಮುಖ ಕಾರಣವಾಗಿದೆ.

ಮೌಲ್ಯಮಾಪನದಲ್ಲಿ ಬದಲಾವಣೆ :

ಹೈಕೋರ್ಟ್ ಆದೇಶದಂತೆ ಈ ಬಾರಿ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಗ್ರೇಡ್ ನೀಡುವ ಬದಲಿಗೆ ಅಂಕಗಳನ್ನು ನೀಡಲಾಗಿದೆ. ಅಷ್ಟೇ ಅಲ್ಲದೆ, ತೃತೀಯ ಭಾಷೆಗಳಿಗೆ ವಿಶೇಷ ಕೃಪಾಂಕ (Grace Marks) ನೀಡಲಾಗಿದ್ದು, ಇದು ವಿದ್ಯಾರ್ಥಿಗಳ ಅಂಕಗಳನ್ನು ಹೆಚ್ಚಿಸಲು ನೆರವಾಗಿದೆ.

ಫಲಿತಾಂಶ ಚೆಕ್ ಮಾಡುವುದು ಹೇಗೆ?

ವಿದ್ಯಾರ್ಥಿಗಳು ಕೆಳಗಿನ ಅಧಿಕೃತ ಜಾಲತಾಣದಲ್ಲಿ ತಮ್ಮ ನೋಂದಣಿ ಸಂಖ್ಯೆ ಬಳಸಿ ಫಲಿತಾಂಶ ವೀಕ್ಷಿಸಬಹುದು:

https://karresults.nic.in

ಫಲಿತಾಂಶ ಬಂದ ತಕ್ಷಣವೇ ಡಿಜಿಲಾಕರ್ (DigiLocker) ನಲ್ಲಿ ಡಿಜಿಟಲ್ ಅಂಕಪಟ್ಟಿಗಳು ಲಭ್ಯವಿರಲಿವೆ.

Exit mobile version