ಮದುವೆ ಮಂಟಪ ಏರೋಕೂ ಮುನ್ನವೇ ಮುರಿದು ಬಿತ್ತಾ ಕಾಲಿವುಡ್-ಬಾಲಿವುಡ್ ಸ್ಟಾರ್ಸ್ ಸಂಬಂಧ..? ಹೌದು ಸದ್ದಿಲ್ಲದೆ ಸೌಂಡ್ ಮಾಡ್ತಿದ್ದ ಧನುಷ್ ಮತ್ತು ಮೃಣಾಲ್ ಠಾಕೂರ್ ಲವ್ ಸ್ಟೋರಿ ಈಗ ಬ್ರೇಕಪ್‌ನಲ್ಲಿ ಎಂಡ್ ಆಗಿದೆ ಅನ್ನೋ ಶಾಕಿಂಗ್ ಗಾಸಿಪ್ ಫಿಲ್ಮ್ ನಗರ್‌ನಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ. ನಿನ್ನೆ ಮೊನ್ನೆವರೆಗೂ ಒಟ್ಟಿಗೆ ಪಾರ್ಟಿ ಮಾಡ್ತಿದ್ದ ಈ ಜೋಡಿ ಮಧ್ಯೆ ದಿಢೀರ್ ಅಂತ ಬಿರುಗಾಳಿ ಎದ್ದಿದ್ದಾದ್ರೂ ಯಾಕೆ?
- ಧನುಷ್ ಲವ್ ಸ್ಟೋರಿ ದಿ ಎಂಡ್..? ಮೃಣಾಲ್‌ಗೆ ಬ್ರೇಕಪ್ ಶಾಕ್
- ಪಾರ್ಟಿಗಳಿಂದ ಶುರುವಾಗಿತ್ತು ಪ್ರೀತಿ… ಸತ್ಯ ಮುಚ್ಚಿಟ್ಟಿದ್ರು ಮೃಣಾಲ್!
- ಆಪ್ತ ಮೂಲಗಳಿಂದ ಲೀಕ್ ಆಗಿತ್ತು ಇಬ್ಬರ ಡೇಟಿಂಗ್ ಸೀಕ್ರೆಟ್..!
- ಐಶ್ವರ್ಯಾ ಜೊತೆಗಿನ 18 ವರ್ಷದ ದಾಂಪತ್ಯ ಮುರಿದಿದ್ದ ಧನುಷ್
ಚಿತ್ರರಂಗದ ಲೇಟೆಸ್ಟ್ ಲವ್ ಬರ್ಡ್ಸ್ ಅಂತಾನೇ ಗುರುತಿಸಿಕೊಂಡಿದ್ದ ನಟ ಧನುಷ್ ಹಾಗೂ ಬಾಲಿವುಡ್ ಬೆಡಗಿ ಮೃಣಾಲ್ ಠಾಕೂರ್ ಪ್ರೇಮ ಪುರಾಣಕ್ಕೆ ಈಗ ಬ್ರೇಕಪ್ ಕತ್ತರಿ ಬಿದ್ದಿದೆ. ಕಳೆದ ಕೆಲವು ತಿಂಗಳುಗಳಿಂದ ಸದ್ದಿಲ್ಲದೆ ಡೇಟಿಂಗ್ ನಡೆಸುತ್ತಿದ್ದ ಈ ಜೋಡಿ, ಮುಂದಿನ ವರ್ಷದ ಆರಂಭದಲ್ಲೇ ಮದುವೆ ಮಂಟಪ ಏರಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದ್ದವು. ಆದರೆ ಈಗ ಮದುವೆಗೂ ಮುನ್ನವೇ ಇಬ್ಬರ ನಡುವಿನ ಸಂಬಂಧ ಸಂಪೂರ್ಣವಾಗಿ ಮುರಿದುಬಿದ್ದಿದೆ ಎಂಬ ಗಾಸಿಪ್ ಶುರುವಾಗಿದೆ. ಇದರಿಂದ ಇಬ್ಬರ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದೆ.
ಅಸಲಿಗೆ ಇವರಿಬ್ಬರ ಲವ್ ಸ್ಟೋರಿ ಗಾಸಿಪ್ ಗಲ್ಲಿಯಲ್ಲಿ ರೆಕ್ಕೆಪುಕ್ಕ ಪಡ್ಕೊಂಡಿದ್ದು ‘ಸನ್ ಆಫ್ ಸರ್ದಾರ್ 2’ ಚಿತ್ರದ ಪ್ರೀಮಿಯರ್ ಶೋನಲ್ಲಿ. ಆ ಬಳಿಕ ಧನುಷ್ ನಟನೆಯ ತೇರೆ ಇಷ್ಕ್ ಮೇ ಶೂಟಿಂಗ್ ಮುಕ್ತಾಯದ ಪಾರ್ಟಿಯಲ್ಲೂ ಮೃಣಾಲ್ ಸ್ಪೆಷಲ್ ಅಟ್ರಾಕ್ಷನ್ ಆಗಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಧನುಷ್ ಸಹೋದರಿಯರಾದ ಕಾರ್ತಿಕಾ ಮತ್ತು ವಿಮಲಾ ಗೀತಾ ಅವರನ್ನು ಮೃಣಾಲ್ ಫಾಲೋ ಮಾಡ್ತಿರೋದು ಇವರ ಆತ್ಮೀಯತೆಗೆ ಸಾಕ್ಷಿಯಾಗಿತ್ತು. ಆದರೆ ಮೀಡಿಯಾಗಳು ಕೇಳಿದಾಗಲೆಲ್ಲಾ ಮೃಣಾಲ್ ಮಾತ್ರ, “ಧನುಷ್ ಜಸ್ಟ್ ಫ್ರೆಂಡ್ ಅಷ್ಟೇ” ಅಂತ ಸತ್ಯ ಮುಚ್ಚಿಡುತ್ತಾ ಬಂದಿದ್ದರು.
ಮೃಣಾಲ್ ಎಷ್ಟೇ ಮುಚ್ಚಿಟ್ಟರೂ ಇವರಿಬ್ಬರ ಡೇಟಿಂಗ್ ಸೀಕ್ರೆಟ್ ಮಾತ್ರ ಅಷ್ಟಾಗಿ ಅಡಗಿರಲಿಲ್ಲ. ಈ ಹಿಂದೆ ಚಿತ್ರರಂಗದ ಆಪ್ತ ಮೂಲಗಳೇ ಮಾಹಿತಿ ನೀಡಿ, “ಹೌದು, ಅವರಿಬ್ಬರ ಆಲೋಚನೆಗಳು, ಲೈಫ್ ಮೌಲ್ಯಗಳು ಒಂದೇ ತರ ಇರೋದ್ರಿಂದ ಇಬ್ಬರೂ ಡೇಟಿಂಗ್ ಮಾಡ್ತಿರೋದು ನಿಜ. ಆದರೆ ಸದ್ಯಕ್ಕೆ ಸಂಬಂಧವನ್ನು ಅಧಿಕೃತಗೊಳಿಸಲು ಇಷ್ಟಪಡುತ್ತಿಲ್ಲ” ಎಂದು ಬಾಂಬ್ ಸಿಡಿಸಿದ್ದವು. ಆದರೆ ಈಗ ಆರಂಭದಲ್ಲೇ ಈ ಪ್ರೀತಿಯ ಹಡಗು ಮುಳುಗಡೆಯಾಗಿದೆಯಂತೆ.
ಇದೇ ವರ್ಷದ ಫೆಬ್ರವರಿಯಲ್ಲಿ ಇವರಿಬ್ಬರ ಮದುವೆ ಸುದ್ದಿ ಯಾವ ಲೆವೆಲ್‌ಗೆ ಹಲ್ ಚಲ್ ಎಬ್ಬಿಸಿತ್ತು ಅಂದ್ರೆ, ದಕ್ಷಿಣ ಭಾರತದ ಸಾಂಪ್ರದಾಯಿಕ ಉಡುಪಿನಲ್ಲಿ ಧನುಷ್ ಮತ್ತು ಮೃಣಾಲ್ ಮದುಮಕ್ಕಳಂತೆ ನಿಂತಿರುವ ಫೋಟೋಗಳು ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸಿದ್ದವು. ನಂತರ ಇದು ಕೇವಲ AI ಸೃಷ್ಟಿಸಿದ ನಕಲಿ ಫೋಟೋಗಳು ಮತ್ತು ವದಂತಿ ಎಂದು ಚಿತ್ರರಂಗದವರು ಸ್ಪಷ್ಟನೆ ನೀಡಿದ್ದರು. ಆದರೀಗ ವದಂತಿಗಳ ಬೆನ್ನಲ್ಲೇ ನಿಜವಾಗಿಯೂ ಬ್ರೇಕಪ್ ಸುದ್ದಿ ಹೊರಬಿದ್ದಿದೆ.
ನಟ ಧನುಷ್ ಅವರ ವೈಯಕ್ತಿಕ ಜೀವನ ಸದಾ ಸುದ್ದಿಯಲ್ಲಿರುತ್ತೆ. ಈ ಹಿಂದೆ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರನ್ನು ವರಿಸಿದ್ದ ಧನುಷ್, 18 ವರ್ಷಗಳ ಕಾಲ ಸುದೀರ್ಘ ಸಂಸಾರ ನಡೆಸಿದ್ದರು. ಆದರೆ 2022ರಲ್ಲಿ ಇಬ್ಬರೂ ಪರಸ್ಪರ ಒಪ್ಪಿಗೆಯಿಂದಲೇ ಡಿವೋರ್ಸ್ ಘೋಷಿಸಿ ಬೇರ್ಪಟ್ಟಿದ್ದರು. ಇಬ್ಬರು ಗಂಡು ಮಕ್ಕಳಿರೋ ಧನುಷ್ ಬಾಳಿಗೆ ಮೃಣಾಲ್ ಎಂಟ್ರಿಯಾಗ್ತಾರೆ ಅಂದುಕೊಳ್ಳುವಷ್ಟರಲ್ಲಿ, ಈ ಪ್ರೀತಿಯ ಸಸ್ಪೆನ್ಸ್‌ಗೆ ಈಗ ಅಧಿಕೃತವಾಗಿಯೇ ಬ್ರೇಕಪ್ ಎಂಡ್ ಕಾರ್ಡ್ ಬಿದ್ದಿದೆ. ಆದರೆ ಈ ಮುನಿಸಿಗೆ ಅಸಲಿ ಕಾರಣ ಏನು ಅನ್ನೋದು ಸದ್ಯಕ್ಕೆ ಸಸ್ಪೆನ್ಸ್ ಆಗಿ ಉಳಿದಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
