ಬೆಳಗಾವಿಯಲ್ಲಿ ಸನ್ ಸ್ಟ್ರೋಕ್‌ಗೆ ಮತ್ತೊಬ್ಬ ಬಲಿ!

BeFunky collage (9)

ತೀವ್ರ ಬಿಸಿಲಿನ ಝಳಕ್ಕೆ ಕರ್ನಾಟಕದಲ್ಲಿ ಮತ್ತೊಂದು ಸಾವು ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಉಗಾರ ಖುರ್ದ ಪಟ್ಟಣದ ವಾರದ ಸಂತೆಯಲ್ಲಿ ವ್ಯಾಪಾರ ಮಾಡುತ್ತಿದ್ದ ವರ್ಧಮಾನ ಮಗದುಮ (ವಯಸ್ಸು ಸುಮಾರು 50) ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಸಂತೆಯಲ್ಲಿ ವ್ಯಾಪಾರದ ವೇಳೆ ಅವರು ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವ ಮುನ್ನವೇ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಾರಿ ಬೇಸಿಗೆಯಲ್ಲಿ ದಕ್ಷಿಣ ಭಾರತದಲ್ಲಿ ಸನ್ ಸ್ಟ್ರೋಕ್ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಹವಾಮಾನ ಬದಲಾವಣೆ: ಮಳೆಗೆ ತಯಾರಿ!

ಬಿಸಿಲಿನ ಬೇಗೆಯಿಂದ ಬಳಲುತ್ತಿರುವ ರಾಜ್ಯ ಜನರಿಗೆ ಸ್ವಲ್ಪ ಉಪಶಮನ ಸಿಗಲಿದೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಸುಳಿಗಾಳಿ ಮತ್ತು ವಾಯುಭಾರ ಕುಸಿತದ ಪರಿಣಾಮವಾಗಿ ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ಯೆಲ್ಲೋ ಅಲರ್ಟ್ ಘೋಷಣೆ :

ಸನ್ ಸ್ಟ್ರೋಕ್ ತಡೆಯುವ ಸಲಹೆಗಳು ತಜ್ಞರು ಈ ಸಲಹೆಗಳನ್ನು ನೀಡಿದ್ದಾರೆ:

ಬಿಸಿಲು ಮತ್ತು ಮಳೆಯ ನಡುವಿನ ಈ ಬದಲಾವಣೆಯಿಂದ ಜನರು ಎಚ್ಚರಿಕೆಯಿಂದಿರುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

Exit mobile version