ಚಿಕ್ಕಬಾಣಾವರದಲ್ಲಿ ಪತ್ನಿಯ ಕಾಟಕ್ಕೆ ಪತಿ ನೇಣಿಗೆ ಶರಣು

Untitled design 2025 04 05t173701.835

ವರದಿ: ಮೂರ್ತಿ.ಬಿ ನೆಲಮಂಗಲ
ಬೆಂಗಳೂರು ನಗರದಲ್ಲಿ ಮತ್ತೊಂದು ದಾರುಣ ಘಟನೆ ಬೆಳಕಿಗೆ ಬಂದಿದೆ. ಲಿನೋವೋ ಕಂಪನಿಯ ಹಿರಿಯ ಉದ್ಯೋಗಿಯಾಗಿದ್ದ ಪ್ರಶಾಂತ್ ನಾಯರ್ (ವಯಸ್ಸು 40) ಅವರು ಪತ್ನಿಯ ಕಿರುಕುಳದಿಂದ ಮನನೊಂದು ಚಿಕ್ಕಬಾಣಾವರದ ಡಿ.ಎಕ್ಸ್ ಸ್ಮಾರ್ಟ್ ನೆಸ್ಟ್ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಶಾಂತ್ ಅವರು 12 ವರ್ಷದ ಹಿಂದೆ ಪೂಜಾ ನಾಯರ್ ಅವರೊಂದಿಗೆ ವಿವಾಹವಾಗಿದ್ದರು. ದಂಪತಿಗೆ 8 ವರ್ಷದ ಮಗಳು ರಶೀಕಾ ನಾಯರ್ ಇದ್ದಾಳೆ. ಪೂಜಾ ನಾಯರ್ ಡೆಲ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಇವರಿಬ್ಬರ ನಡುವೆ ಇತ್ತೀಚೆಗೆ ಹೊಂದಾಣಿಕೆಯಲ್ಲಿ ಸಮಸ್ಯೆಗಳು ಎದುರಾಗಿದ್ದವು.

ಸುಮಾರು ಎರಡು ತಿಂಗಳ ಹಿಂದೆ ಅವರು ವಿಭಜನೆಗೆ ಒಳಗಾಗಿ, ಪ್ರಶಾಂತ್ ಅವರು ಚಿಕ್ಕಬಾಣಾವರಕ್ಕೆ ಸ್ಥಳಾಂತರಗೊಂಡಿದ್ದರು. ಆದರೆ ದೂರವಾಣಿ ಸಂಭಾಷಣೆಯಲ್ಲಿಯೂ ಅವರು ಎತ್ತಿದ ವಾಗ್ವಾದಗಳು ಮತ್ತೆ ಮತ್ತೆ ಮನಸ್ಸು ಕೆಡಿಸುವ ಸ್ಥಿತಿಗೆ ತಳ್ಳಿದವು. ಕೊನೆಗೆ ಈ ದುರಂತದ ಹೆಜ್ಜೆಯತ್ತ ಅವರು ದಾರಿ ಹಿಡಿದಿದ್ದಾರೆ.

ಪ್ರಶಾಂತ್ ಅವರು ಮನೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು,ತಂದೆ ಎಮ್ ಎನ್ ಕುಟ್ಟಿ ಮಗನಿಗೆ ಕರೆ ಮಾಡಿದ್ರು ಎಷ್ಟು ಬಾರಿ ಕರೆ ಸ್ವೀಕರಿಸಿದ ಹಿನ್ನೆಲೆಯಲ್ಲಿ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ,ಸದ್ಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

| Reported by: ಮೂರ್ತಿ.ಬಿ ನೆಲಮಂಗಲ
Exit mobile version