ಮಂಗಳೂರಿನಲ್ಲಿ ದಾರುಣ ಘಟನೆ: ಹೆತ್ತ ತಾಯಿಯನ್ನೆ ಬೆಂಕಿಯಲ್ಲಿ ಸುಟ್ಟ ಮಗ

Web 2025 06 26t163248.053

ಮಂಗಳೂರಿನ ಕಾಸರಗೋಡು ಗಡಿಯ ವರ್ಕಾಡಿಯಲ್ಲಿ ತಾಯಿಯನ್ನೇ ಕೊಲೆಗೈದು, ದೇಹಕ್ಕೆ ಬೆಂಕಿ ಹಚ್ಚಿರುವ ಆಘಾತಕಾರಿ ಘಟನೆಯೊಂದು ನಡೆದಿದೆ. 59 ವರ್ಷದ ಹಿಲ್ಡಾ ಮೊಂತೇರೊ ಈ ಕೊಲೆಯ ದುರ್ದೈವಿ ಆಗಿದ್ದು, ಆರೋಪಿಯಾಗಿರುವ 26 ವರ್ಷದ ಮಗ ಮೆಲ್ವಿನ್ ಮೊಂತೇರೊ.

ನಲ್ಲೆಂಗಿಯ ವರ್ಕಾಡಿಯಲ್ಲಿ ವಾಸವಾಗಿದ್ದ ಹಿಲ್ಡಾ ಮೊಂತೇರೊ ತಮ್ಮ ಮಗ ಮೆಲ್ವಿನ್ ಜೊತೆಗೆ ವಾಸಿಸುತ್ತಿದ್ದರು. ರಾತ್ರಿ ಊಟ ಮಾಡಿ ಮಲಗಿದ್ದ ಹಿಲ್ಡಾರನ್ನು, ಮುಂಜಾನೆ ಮೆಲ್ವಿನ್ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಕೊಲೆಯ ನಂತರ, ಮೆಲ್ವಿನ್ ತಾಯಿಯ ದೇಹವನ್ನು ಮನೆಯ ಹಿಂಬದಿಗೆ ಕೊಂಡೊಯ್ದು ಬೆಂಕಿ ಹಾಕಿ ಸುಟ್ಟಿದ್ದಾನೆ.

ಈ ಘಟನೆಯ ಸಂದರ್ಭದಲ್ಲಿ, ಸಹಾಯಕ್ಕಾಗಿ ಓಡಿಬಂದ ನೆರೆಮನೆಯ 30 ವರ್ಷದ ಲೋಲಿಟಾ ಎಂಬವರಿಗೂ ಮೆಲ್ವಿನ್ ಬೆಂಕಿ ಹಚ್ಚಿದ್ದಾನೆ. ಇದರಿಂದ ಲೋಲಿಟಾರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶ ಮೂಡಿದೆ.

ಕೊಲೆ ಮತ್ತು ದೇಹಕ್ಕೆ ಬೆಂಕಿ ಹಚ್ಚಿದ ನಂತರ, ಮೆಲ್ವಿನ್ ಮೊಂತೇರೊ ಪರಾರಿಯಾಗಿದ್ದ. ಆದರೆ, ಪೊಲೀಸರು ಕುಂದಾಪುರದಲ್ಲಿ ಆತನನ್ನು ಬಂಧಿಸಿದ್ದಾರೆ. ಆರೋಪಿ ಮಾದಕ ವ್ಯಸನಿಯಾಗಿದ್ದು, ನಶೆಯ ಮತ್ತಲ್ಲಿ ಈ ಕೃತ್ಯವನ್ನು ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

Exit mobile version