ರಿಜ್ವಾನ್ ಅರ್ಷದ್ ಪರ ಶಿವಾಜಿನಗರ

ಗ್ಯಾರಂಟಿ ನ್ಯೂಸ್ ಮೂಡ್ ಆಫ್ ಕರ್ನಾಟಕ ಮೆಗಾ ಸರ್ವೆ

Untitled design 2025 04 05t210745.057

ಗ್ಯಾರಂಟಿ ನ್ಯೂಸ್ ಸ್ಯಾಟಲೈಟ್ ಸುದ್ದಿ ವಾಹಿನಿ ಮೂಡ್ ಆಫ್ ಕರ್ನಾಟಕ ಎಂಬ ಮೆಗಾ ಸರ್ವೆ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸದ್ಯದ ಸ್ಥಿತಿಗತಿ ಹೇಗಿದೆ ಅನ್ನೋದ್ರ ಕುರಿತಾಗಿ ಜನರ ನಾಡಿಮಿಡಿತ ಗ್ರಹಿಸುವ ಕೆಲಸ ಮಾಡ್ತಿದೆ.

2023ರ ಶಿವಾಜಿನಗರ ವಿಧಾನಸಭಾ ಕ್ಷೇತ್ರ ಫಲಿತಾಂಶ ನೋಡುವುದಾದರೆ, ರಿಜ್ವಾನ್ ಅರ್ಷದ್ ಕಾಂಗ್ರೆಸ್ ನಿಂದ ಸ್ಪರ್ಧಿಸಿ 64,913 (59 %) ಮತ ಪಡೆದು ಗೆಲುವು ಸಾಧಿಸಿದ್ದರು. ಬಿಜೆಪಿಯ ಎನ್.ಚಂದ್ರುಗೆ 41,719 (38 %), ಎಎಪಿ ಪರ ಪ್ರಕಾಶ್ ನೆಡುಂಗಡಿ 1,634 (1 %) ಮತ ಪಡೆದಿದ್ದರು.

ADVERTISEMENT
ADVERTISEMENT

ಶಿವಾಜಿನಗರ ಕ್ಷೇತ್ರದ ಚಿತ್ರಣ..

ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲ ಧರ್ಮ, ಎಲ್ಲ ಭಾಷೆಗಳ ಜನ ಇದ್ದು, ಒಂದು ರೀತಿ ಮಿನಿ ಭಾರತದಂತಿದೆ. ಬೆಂಗಳೂರಿನ ಹೃದಯ ಭಾಗದಲ್ಲಿರುವ ಅತ್ಯಂತ ಹಳೆಯ, ಪ್ರಮುಖ ವಾಣಿಜ್ಯ ಪ್ರದೇಶ ಇದಾಗಿದೆ. ಶಿವಾಜಿನಗರ ವಿಧಾನಸಭಾ ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದು, ಅತಿ ಹೆಚ್ಚು ಮುಸ್ಲಿಂ ಸಮುದಾಯದ ಜನ ನೆಲೆಸಿದ್ದಾರೆ. ಐಎಂಐ ಹಗರಣದಲ್ಲಿ ಸಿಲುಕಿ ಕ್ಷೇತ್ರ ಕಳೆದುಕೊಂಡ ರೋಷನ್ ಬೇಗ್ ಬಳಿಕ ರಿಜ್ವಾನ್ ಅರ್ಷದ್ ಕ್ಷೇತ್ರದ ಮೇಲೆ ಪ್ರಾಬಲ್ಯ ಸಾಧಿಸಿದ್ದಾರೆ.

ಮೂಡ್ ಆಫ್ ಕರ್ನಾಟಕ ಶಿವಾಜಿನಗರ ಮೂಡ್ ಹೇಗಿದೆ.?

ಅಹಿಂದ ವರ್ಗ ಹೆಚ್ಚಿರುವುದರಿಂದ ಸಹಜವಾಗಿ ಕಾಂಗ್ರೆಸ್ ಪರ ಒಲವು ಕಂಡು ಬರುತ್ತದೆ. ಗ್ಯಾರಂಟಿ ಯೋಜನೆಗಳಿಂದ ಕ್ಷೇತ್ರದ ಜನ ಫುಲ್ ಖುಷ್ ಆಗಿದ್ದು, ಶಾಸಕ ರಿಜ್ವಾನ್ ಅರ್ಷದ್ ಕ್ಷೇತ್ರದ ಜನರ ಜೊತೆ ನಿರಂತರ ಸಂಪರ್ಕ ಹೊಂದಿದ್ದಾರೆ. ಅಹಿಂದ ಮತಗಳು ಬಿಜೆಪಿಯಿಂದ ದೂರ ಆಗಿರೋದು ಹಾಗೂ ಸೂಕ್ತ ಅಭ್ಯರ್ಥಿಯೂ ಬಿಜೆಪಿಗೆ ಸಿಗುತ್ತಿಲ್ಲ.

ಶಿವಾಜಿನಗರ ಕ್ಷೇತ್ರದ ಆಕಾಂಕ್ಷಿಗಳು..
ಕಾಂಗ್ರೆಸ್ ನಿಂದ ಹಾಲಿ ಶಾಸಕ ರಿಜ್ವಾನ್ ಅರ್ಷದ್ ಸ್ಪರ್ಧೆ ಕಹಿತವಾಗಿದ್ದು ಖಚಿತವಾಗಿದ್ದು, ಬಿಜೆಪಿಯಿಂದ ಎನ್.ಚಂದ್ರುಗೆ ಅವಕಾಶ ಸಿಗಬಹುದು.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version