ನಲಪಾಡ್ ಯಡವಟ್ಟುಗಳ ನಡೆವೆಯೂ ಶಾಂತಿನಗರದಲ್ಲಿ ಹ್ಯಾರಿಸ್ ಸೇಫ್.!

ಗ್ಯಾರಂಟಿ ನ್ಯೂಸ್ ಮೂಡ್ ಆಫ್ ಕರ್ನಾಟಕ ಮೆಗಾ ಸರ್ವೆ

Untitled design 2025 04 05t221121.080

ಗ್ಯಾರಂಟಿ ನ್ಯೂಸ್ ಸ್ಯಾಟಲೈಟ್ ಸುದ್ದಿ ವಾಹಿನಿ ಮೂಡ್ ಆಫ್ ಕರ್ನಾಟಕ ಎಂಬ ಮೆಗಾ ಸರ್ವೆ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸದ್ಯದ ಸ್ಥಿತಿಗತಿ ಹೇಗಿದೆ ಅನ್ನೋದ್ರ ಕುರಿತಾಗಿ ಜನರ ನಾಡಿಮಿಡಿತ ಗ್ರಹಿಸುವ ಕೆಲಸ ಮಾಡ್ತಿದೆ.

ಶಾಂತಿನಗರ 2023ರ ವಿಧಾನಸಭಾ ಕ್ಷೇತ್ರದ ಫಲಿತಾಂಶ ನೋಡುವುದಾದರೆ ಕಾಂಗ್ರೆಸ್ ನ ಎನ್ ಎ ಹ್ಯಾರಿಸ್ 61,000 (51 %) ಬಿಜೆಪಿಯ ಶಿವಕುಮಾರ್ 53,905 (45%) ಎಎಪಿಕೆ.ಮಥಾಯ್ 1604 ( 1 %) ಮತ ಪಡೆದಿದ್ದರು. 7,125 ಮತಗಳ ಅಂತರದಲ್ಲಿ ಎನ್ ಎ ಹ್ಯಾರಿಸ್ ವಿಜಯ ಸಾಧಿಸಿದ್ದರು.

ಶಾಂತಿನಗರ ಕ್ಷೇತ್ರದ ಚಿತ್ರಣ..
ಶಾಂತಿನಗರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಕಳೆದ ಮೂರು ಚುನಾವಣೆಯಲ್ಲೂ ಎನ್ ಹ್ಯಾರಿಸ್ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ತಮಿಳು-ತೆಲುಗು-ಮಲಯಾಳಿ, ಮುಸ್ಲಿಂ ಕುರುಬ ಮತದಾರರೇ ನಿರ್ಣಾಯಕ ಪಾತ್ರ.

ಮೂಡ್ ಆಫ್ ಕರ್ನಾಟಕ ; ಶಾಂತಿನಗರ ಮೂಡ್ ಹೇಗಿದೆ.?
ಹ್ಯಾರಿಸ್ ವೈಯಕ್ತಿಕ ವರ್ಚಸ್ಸಿನ ಜೊತೆ ಗ್ಯಾರಂಟಿ ಪ್ರಭಾವ ಬೀರಿದ್ದು, ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಹ್ಯಾರಿಸ್ ಗೆ ಕ್ಷೇತ್ರದ ಮೇಲೆ ಹಿಡಿತಸಾಧಿಸಿದ್ದಾರೆ. ಬಿಜೆಪಿ-ಜೆಡಿಎಸ್ ನಿಂದ ಪ್ರಬಲ ಅಭ್ಯರ್ಥಿ ಇಲ್ಲದಿರೋದು ಹ್ಯಾರಿಸ್ ಗೆ ವರದಾನದ ಜೊತೆಗೆ ಪುತ್ರ ನಲಪಾಡ್ ಮಾಡುವ ಯಡವಟ್ಟುಗಳು ಹ್ಯಾರಿಸ್ ಗೆ ಕಿರಿಕಿರಿ ಉಂಟು ಮಾಡುತ್ತಿದೆ. ಗ್ಯಾರಂಟಿ ನ್ಯೂಸ್ ನ ಮೂಡ್ ಆಫ್ ಕರ್ನಾಟಕ ಸರ್ವೆ ಪ್ರಕಾರ ಶಾಂತಿನಗರದಲ್ಲಿ ಸದ್ಯಕ್ಕೆ ಎನ್.ಎ. ಹ್ಯಾರಿಸ್ ಸೇಫ್.!

ಶಾಂತಿನಗರ ಕ್ಷೇತ್ರದ ಆಕಾಂಕ್ಷಿಗಳು
ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಎನ್.ಎ. ಹ್ಯಾರಿಸ್ ಗೆ ಕಾಂಗ್ರೆಸ್ ಟಿಕೆಟ್ ಪಕ್ಕಾ. ಬಿಜೆಪಿಯಿಂದ ಶಿವಕುಮಾರ್ ಪ್ರಯತ್ನ ಮಾಡುತಿದ್ದರೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version