ಐಎಎಸ್ ರವಿ ಸಾವಿನ ಬಗ್ಗೆ ಕೆಲ ರಹಸ್ಯ ಬಿಚ್ಚಿಟ್ಟ: ಎಸ್.ಕೆ.ಉಮೇಶ್‌

Untitled design 2025 04 06t120810.922

ದಕ್ಷ ಐಎಎಸ್‌ ಅಧಿಕಾರಿ ಎಂದು ಕರೆಸಿಕೊಂಡಿದ್ದ ಡಿ.ಕೆ.ರವಿ ಅವರು ರಾಜ್ಯದ ಮನೆಮಾತಾಗಿದ್ದರು. ಆದರೆ ದಿಢೀರನೆ ಅವರ ಸಾವಿನ ವಿಚಾರ ತಿಳಿದು ಇಡೀ ರಾಜ್ಯವೇ ಬೆಚ್ಚಿಬಿದ್ದಿತ್ತು.

ಹೌದು 2015ರ ಮಾರ್ಚ್ 16ರಂದು ಬೆಂಗಳೂರಿನ ಫ್ಲ್ಯಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರವಿ ಅವರ ಮೃತದೇಹ ಪತ್ತೆಯಾಗಿತ್ತು. ಸೇವೆಯಲ್ಲಿರುವಾಗಲೇ ಅವರು ನಿಗೂಢವಾಗಿ ಸಾವನ್ನಪ್ಪಿದ್ದರು. ಬಳಿಕ ಇದನ್ನು ಕೆಲವರು ಆತ್ಮಹತ್ಯೆ ಎಂದು ಕರೆದರೆ, ಹಲವರು ಕೊಲೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಈ ಪ್ರಕರಣ ಮುಗಿದು ಹತ್ತು ವರ್ಷಗಳು ಕಳೆದಿವೆಯಾದರೂ, ಇದೀಗ ರವಿ ಅವರ ಸಾವಿನ ವಿಚಾರದ ಕುರಿತು ಅಚ್ಚರಿಯ ವಿಚಾರ ಬೆಳಕಿಗೆ ಬಂದಿದೆ.

ರವಿ ಸಾವಿನ ಬಗ್ಗೆ ತನಿಖೆ ನಡೆಸಿದ್ದ ಸಿಬಿಐ ಅದು ಆತ್ಮಹತ್ಯೆ ಎಂದು ದೃಢಪಡಿಸಿತ್ತು. ಆದರೂ ಡಿ.ಕೆ.ಡಿಕೆ ರವಿ ಅವರ ಸಾವಿನ ಸುತ್ತ ಅನೇಕ ಅನುಮಾನದ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ರವಿ ಅವರ ಸಾವಿನ ವಿಚಾರವಾಗಿ ಹಿರಿಯ ಹಾಗೂ ನಿವೃತ್ತ ಪೊಲೀಸ್‌ ಅಧಿಕಾರಿ ಎಸ್.ಕೆ.ಉಮೇಶ್‌ ಅವರು “ರಾಜೇಶ್‌ ರಿವೀಲ್ಸ್‌” ಯುಟ್ಯೂಬ್‌ ಚಾನಲ್‌ನ ಸಂದರ್ಶನದಲ್ಲಿ ಕೆಲ ಅಚ್ಚರಿ ಸಂಗತಿಗಳನ್ನು ಹೇಳಿಕೊಂಡಿದ್ದಾರೆ.

ಕೆಲವು ಸಾವುಗಳು ಜನರಿಗೆ ತೃಪ್ತಿ ತರುವುದಿಲ್ಲ. ಜನರ ಮನಸ್ಸಿನಲ್ಲಿ ಏನೇನೋ ಆಲೋಚನೆಗಳು ಇರುತ್ತವೆ. ಆದರೆ ಆ ಆಲೋಚನೆಗಳಿಗೆ ತಕ್ಕಂತೆ ಏನೂ ನಡೆಯುವುದಿಲ್ಲ. ಏಕೆಂದರೆ ಈಗಿನ ಸೈನ್ಸ್‌ ತುಂಬಾ ಅಡ್ವಾನ್ಸ್ಡ್‌ ಆಗಿದೆ. ಈ ಮನುಷ್ಯ ತಾನೇ ನೇಣು ಹಾಕಿಕೊಂಡಿದ್ದಾನೆ ಅಥವಾ ಈ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ ಎಂಬುದು ಮರಣೋತ್ತರ ಪರೀಕ್ಷೆ ನಡೆಸುವಾಗಲೇ ನೂರಕ್ಕೆ ನೂರರಷ್ಟು ಖಚಿತವಾಗಿ ತಿಳಿಯುತ್ತದೆ. ನಾವು ಇಂತಹ ನೂರಾರು ಮೃತದೇಹಗಳನ್ನು ನೋಡಿರುವುದರಿಂದ ಚೆನ್ನಾಗಿ ತಿಳಿದಿರುತ್ತೆ. ಆದ್ರೆ ನಾವು ಡಾಕ್ಟರ್‌ ಅಲ್ಲದ ಕಾರಣ ಏನನ್ನೂ ಮಾತನಾಡೋಕೆ ಹೋಗಲ್ಲ’ ಎಂದು ಎಸ್.ಕೆ.ಉಮೇಶ್‌ ಅವರು ಸಂದರ್ಶನದಲ್ಲಿ ಹೇಳಿದ್ದಾರೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version