ನ್ಯಾಯಾಂಗ, ಸರ್ಕಾರದ ಬಗ್ಗೆ ನಂಬಿಕೆ ಇತ್ತು: ಸುಪ್ರೀಂ ತೀರ್ಪಿಗೆ ರೇಣುಕಾಸ್ವಾಮಿ ತಂದೆ ಸಂತಸ!

ನ್ಯಾಯ ಸಾಬೀತಾಯಿತು: ರೇಣುಕಾಸ್ವಾಮಿ ತಂದೆ!

1 (22)

ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳ ಜಾಮೀನನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌ನ ತೀರ್ಪಿಗೆ ರೇಣುಕಾಸ್ವಾಮಿಯ ತಂದೆ ಕಾಶಿನಾಥ್ ಶಿವನಗೌಡ ಸಂತೋಷ ವ್ಯಕ್ತಪಡಿಸಿದ್ದಾರೆ.

ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಕಾಶಿನಾಥ್, “ತೀರ್ಪು ಏನಾಗುತ್ತದೆ ಎಂಬ ಆತಂಕವಿತ್ತು. ಜಾಮೀನು ರದ್ದಾದ್ದರಿಂದ ನ್ಯಾಯಾಂಗ ಮತ್ತು ಸರ್ಕಾರದ ಮೇಲೆ ನಂಬಿಕೆ ಇತ್ತು. ಅಪರಾಧಿಗಳಿಗೆ ಶಿಕ್ಷೆಯಾಗುವ ಭರವಸೆ ಇದೆ,” ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಪುತ್ರನ ನೆನಪಿನಲ್ಲಿ ಕಣ್ಣೀರಿಟ್ಟಿದ್ದಾರೆ.

“ನ್ಯಾಯಾಂಗ ಮತ್ತು ಸರ್ಕಾರದ ಬಗ್ಗೆ ನಂಬಿಕೆ ಬಂದಿದೆ. ಸೊಸೆಯ ಕೆಲಸದ ಬಗ್ಗೆ ನೋವಾಗಿದೆ. ಸರ್ಕಾರ ಆಕೆಗೆ ಕೆಲಸ ಕೊಡಿಸುವ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದೇನೆ,” ಎಂದು ಕಾಶಿನಾಥ್ ಮನವಿ ಮಾಡಿದ್ದಾರೆ.

“ಸುಪ್ರೀಂ ಕೋರ್ಟ್‌ನಿಂದ ನ್ಯಾಯ ಸಾಬೀತಾಗಿದೆ. ಮಗನನ್ನು ಕಳೆದುಕೊಂಡ ಆತಂಕದಲ್ಲಿದ್ದೆವು. ಈಗ ಸರ್ಕಾರ ಮತ್ತು ನ್ಯಾಯಾಂಗದ ಬಗ್ಗೆ ವಿಶ್ವಾಸ ಮೂಡಿದೆ. ಇದಕ್ಕಾಗಿ ಸರ್ಕಾರ ಮತ್ತು ನ್ಯಾಯಾಂಗವನ್ನು ಅಭಿನಂದಿಸುತ್ತೇನೆ,” ಎಂದು ತಿಳಿಸಿದ್ದಾರೆ.

“ಮೊಮ್ಮಗ ಮತ್ತು ಸೊಸೆಗೆ ಆಧಾರವಾಗಲೆಂದು ಪೂಜೆ ಸಲ್ಲಿಸಿದ್ದೆವು. ತೀರ್ಪು ವಿಳಂಬವಾಗಬಹುದೆಂದು ಭಾವಿಸಿದ್ದೆವು. ಆದರೆ, ಬೇಗನೆ ತೀರ್ಪು ಬಂದಿದೆ. ಗುರುಗಳ ಮಾರ್ಗದರ್ಶನ ಮತ್ತು ದೇವರ ಕೃಪೆಯಿಂದ ಒಳ್ಳೆಯ ತೀರ್ಪು ದೊರೆತಿದೆ,” ಎಂದು ಕಾಶಿನಾಥ್ ಸಂತಸವ್ಯಕ್ತಪಡಿಸಿದ್ದಾರೆ.

Exit mobile version