ಪುಲಿಕೇಶಿನಗರ: ಕಾಂಗ್ರೆಸ್ ಪರ ಜನರ ಒಲವು

ಗ್ಯಾರಂಟಿ ನ್ಯೂಸ್ ಮೂಡ್ ಆಫ್ ಕರ್ನಾಟಕ ಮೆಗಾ ಸರ್ವೆ

Untitled design 2025 04 05t213453.064

ಗ್ಯಾರಂಟಿ ನ್ಯೂಸ್ ಸ್ಯಾಟಲೈಟ್ ಸುದ್ದಿ ವಾಹಿನಿ ಮೂಡ್ ಆಫ್ ಕರ್ನಾಟಕ ಎಂಬ ಮೆಗಾ ಸರ್ವೆ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸದ್ಯದ ಸ್ಥಿತಿಗತಿ ಹೇಗಿದೆ ಅನ್ನೋದ್ರ ಕುರಿತಾಗಿ ಜನರ ನಾಡಿಮಿಡಿತ ಗ್ರಹಿಸುವ ಕೆಲಸ ಮಾಡ್ತಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಪುಲಿಕೇಶಿನಗರದಿಂದ ಎ.ಸಿ.ಶ್ರೀನಿವಾಸ್ ಭರ್ಜರಿ ಬಹುಮತದೊಂದಿಗೆ ಗೆಲುವು ಸಾಧಿಸಿದ್ದರು. ಫಲಿತಾಂಶದ ಅಂಕಿ ಅಂಶಗಳನ್ನು ಗಮನಿಸುವುದಾದರೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಎ.ಸಿ.ಶ್ರೀನಿವಾಸ್ 87,316 (67 %), ಬಿಎಸ್‌ಪಿ ಅಭ್ಯರ್ಥಿ ಅಖಂಡ ಶ್ರೀನಿವಾಸಮೂರ್ತಿ 25,106 (19 %), ಬಿಜೆಪಿ ಪಕ್ಷದ ಮುರಳಿಗೆ 10,624 (8 %) ಎಸ್‌ಡಿಪಿಐನಿಂದ ಸ್ಪರ್ಧೆ ಮಾಡಿದ್ದ ಭಾಸ್ಕರ್ ಪ್ರಸಾದ್ ಗೆ 4102 (3 %) ಮತಗಳೂ ಬಂದಿದ್ದವು.

ಪುಲಿಕೇಶಿನಗರ ಕ್ಷೇತ್ರದ ಚಿತ್ರಣ..

ವಿಧಾನಸೌಧದ ಕೂಗಳತೆ ದೂರದಲ್ಲಿರುವ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಶೇ. 65ಕ್ಕೂ ಅಧಿಕ ಭಾಗ ಕೊಳಚೆ ಪ್ರದೇಶಗಳಿಂದ ತುಂಬಿದ್ದು, ಇಲ್ಲಿ ಐವತ್ತಕ್ಕೂ ಹೆಚ್ಚು ಸ್ಲಂಗಳಿವೆ, ಇದುವೇ ಈ ಕ್ಷೇತ್ರದ ದೊಡ್ಡ ಸಮಸ್ಯೆಯಾಗಿದೆ. ಇಲ್ಲಿ ಕನ್ನಡ ಭಾಷಿಕರಿಗಿಂತ ಅನ್ಯ ಭಾಷಿಕರೇ ಹೆಚ್ಚಿರುವುದು ಈ ಕ್ಷೇತ್ರದ ವಿಶೇಷತೆ. ಕೆ ಜಿ ಹಳ್ಳಿ, ಡಿ ಜೆ ಹಳ್ಳಿ ಹಾಗೂ ಕಾವಲ್ ಭೈರಸಂದ್ರದಲ್ಲಿ ನಡೆದ ಗಲಭೆ ಪ್ರಕರಣಗಳಿಂದ ಕ್ಷೇತ್ರ ಕಳೆದುಕೊಂಡಿದ್ದ ಅಖಂಡ ಶ್ರೀನಿವಾಸ್ ಮೂರ್ತಿ ಬಿಎಸ್‌ಪಿಯಿಂದ ಸ್ಪರ್ಧೆ ಮಾಡಿ ಸೋಲು ಕಂಡರು.

ಮೂಡ್ ಆಫ್ ಕರ್ನಾಟಕ : ಪುಲಿಕೇಶಿನಗರ ಮೂಡ್ ಹೇಗಿದೆ?

ಮುಸ್ಲಿಂ, ಒಕ್ಕಲಿಗ, ಎಸ್ಸಿ-ಎಸ್ಟಿ ಮತದಾರರೇ ನಿರ್ಣಾಯಕ ಪಾತ್ರವಹಿಸುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಹೆಚ್ಚು ಲಾಭದಾಯಕವಾಗಿದೆ. ಗ್ಯಾರಂಟಿ ಯೋಜನೆಗಳೇ ಶಾಸಕ ಶ್ರೀನಿವಾಸ್ ಗೆ ಶ್ರೀ ರಕ್ಷೆ ಎಂದೇ ಹೇಳಬಹುದು. ಕಳೆದ ಚುನಾವಣೆಯಲ್ಲಿ ಕೊನೇ ಕ್ಷಣದಲ್ಲಿ ಬಿಎಸ್‌ಪಿ ಯಿಂದ ಸ್ಪರ್ಧೆ ಮಾಡಿದ್ದ ಅಖಂಡ ಶ್ರೀನಿವಾಸ ನಡೆ ಕುತೂಹಲ ಮೂಡಿಸಿದೆ. ಬಿಜೆಪಿಗೆ ಈ ಕ್ಷೇತ್ರದ ನೆಲೆ ಇಲ್ಲದ ಕಾರಣ ಶಾಸಕ ಶ್ರೀನಿವಾಸ್ ಗೆ ಇದು ನಿಜಕ್ಕೂ ಲಕ್ಕಿ ಕ್ಷೇತ್ರವಾಗಿದೆ. ಗ್ಯಾರಂಟಿ ನ್ಯೂಸ್ ನ ಮೂಡ್ ಆಫ್ ಕರ್ನಾಟಕ ಸರ್ವೆ ಪ್ರಕಾರ ಪುಲಿಕೇಶಿನಗರದಲ್ಲಿ ಕಾಂಗ್ರೆಸ್ ಪರ ಜನರ ಒಲವು ಹೆಚ್ಚಿದೆ.

ಪುಲಿಕೇಶಿನಗರ ಆಕಾಂಕ್ಷಿಗಳು

ವಿಧಾನಸೌಧದ ಕೂಗಳತೆ ದೂರದಲ್ಲಿರುವ ಈ ಕ್ಷೇತ್ರದ ಮೇಲೆ ಹಲವು ಕಣ್ಣು ಇದ್ದು, ಕಾಂಗ್ರೆಸ್ ಟಿಕೆಟ್ ಗೆ ಶ್ರೀನಿವಾಸ್ , ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ಸಂಪತ್ ರಾಜ್ ಪ್ರಯತ್ನ ಮಾಡುತಿದ್ದರೆ. ಬಿಜೆಪಿಯಿಂದ ಮುರಳಿ ಟಿಕೆಟ್ ಸಿಗುವ ಸಾಧ್ಯತೆ ಇದೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version