ಪದ್ಮನಾಭನಗರದಲ್ಲಿ ಸಾಮ್ರಾಟ್ ಅಶೋಕ್ ಗೆ ಸರಿಸಾಟಿ ಯಾರೂ ಇಲ್ಲ..!

ಗ್ಯಾರಂಟಿ ನ್ಯೂಸ್ ಮೂಡ್ ಆಫ್ ಕರ್ನಾಟಕ ಮೆಗಾ ಸರ್ವೆ

Untitled design 2025 04 05t224819.092

ಗ್ಯಾರಂಟಿ ನ್ಯೂಸ್ ಸ್ಯಾಟಲೈಟ್ ಸುದ್ದಿ ವಾಹಿನಿ ಮೂಡ್ ಆಫ್ ಕರ್ನಾಟಕ ಎಂಬ ಮೆಗಾ ಸರ್ವೆ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸದ್ಯದ ಸ್ಥಿತಿಗತಿ ಹೇಗಿದೆ ಅನ್ನೋದ್ರ ಕುರಿತಾಗಿ ಜನರ ನಾಡಿಮಿಡಿತ ಗ್ರಹಿಸುವ ಕೆಲಸ ಮಾಡ್ತಿದೆ.

ಕಳೆದ 2023 ವಿಧಾನಸಭಾ ಚುನಾವಣೆಯಲ್ಲಿ ಬಾರಿ ಕುತೂಹಲ ಕೆರಳಿಸಿದ್ದ ಕ್ಷೇತ್ರಗಳಲ್ಲಿ ಪದ್ಮನಾಭನಗರವು ಒಂದು. ಅಂದಿನ ಫಲಿತಾಂಶದ ವಿವರ ನೋಡುವುದಾದರೆ, ಬಿಜೆಪಿಯಿಂದ ಸ್ಪರ್ಧಿಸಿದ್ದ ಆರ್.ಅಶೋಕ್ ಬರೋಬ್ಬರಿ 55,175 ಮತಗಳಿಂದ ಗೆದ್ದು ಬಿಗಿದ್ದಾರೆ. ಆರ್.ಅಶೋಕ್ ಗೆ ಒಟ್ಟು 98,750 ( 62 %) ಮತ ಬಂದರೆ, ಅವರ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ರಘುನಾಥ್ ನಾಯ್ಡುಗೆ 55,175 (27 %) ಜೆಡಿಎಸ್ ನ ಬಿ. ಮಂಜುನಾಥ್ 7857 (5 %) ಮತ ಪಡೆದಿದ್ದರು.

ಪದ್ಮನಾಭನಗರ ಕ್ಷೇತ್ರದ ಚಿತ್ರಣ..
ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ಆರ್ ಅಶೋಕ ಅವರ ಭದ್ರಕೋಟೆಯಾಗಿದ್ದು, ಸತತವಾಗಿ 7 ಭಾರಿ ಗೆಲುವು ಸಾಧಿಸಿರುವ ಮೂಲಕ ಆರ್ ಅಶೋಕ್ ಗೆ ಕ್ಷೇತ್ರದಲ್ಲಿ ಸರಿಸಾಟಿ ಯಾರೂ ಇಲ್ಲ. ಪದ್ಮನಾಭನಗರದಲ್ಲಿ ಅಶೋಕರೇ ಸಾಮ್ರಾಟ್ ಎಂಬುವುದು ಸಾಬೀತು ಮಾಡಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಇದೇ ಕ್ಷೇತ್ರದಲ್ಲಿ ವಾಸಿಸುತ್ತಿದ್ದರೂ ಜೆಡಿಎಸ್ ಗೆ ಅಷ್ಟೊಂದು ವೋಟ್ ಬ್ಯಾಂಕ್ ಸ್ಥಾಪಿಸಲು ಸಾಧ್ಯವಾಗಿಲ್ಲ. ಈ ಕ್ಷೇತ್ರದಲ್ಲಿ ಒಕ್ಕಲಿಗರು, ಬ್ರಾಹ್ಮಣರು, ನಾಯ್ಡು ಸಮುದಾಯದವರು ಅಭ್ಯರ್ಥಿಯ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾ ಬಂದಿರುವುದು ವಿಶೇಷ.

ಮೂಡ್ ಆಫ್ ಕರ್ನಾಟಕ : ಪದ್ಮನಾಭನಗರ ಮೂಡ್ ಹೇಗಿದೆ.?
ಬಿಜೆಪಿಯ ಪ್ರಭಾವಿ ನಾಯಕ ಹಾಗೂ ವಿರೋಧ ಪಕ್ಷದ ನಾಯಕರು ಆಗಿರುವ ಆರ್.ಅಶೋಕ್ ಕ್ಷೇತ್ರದ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ವಿಪಕ್ಷ ನಾಯಕ ಆಗಿರುವುದರಿಂದ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಉನ್ನತ ಹುದ್ದೆ ಸಿಗುವ ನಿರೀಕ್ಷೆಯಲ್ಲಿ ಇದ್ದಾರೆ. ಕ್ಷೇತ್ರ ಅಭಿವೃದ್ಧಿ ವಿಚಾರದಲ್ಲಿ ಅಶೋಕ್ ರಾಜೀ ಮಾಡಿಕೊಳ್ಳದೆ ಜನಪರ ಕಾಳಜಿ ಹೊಂದಿದ್ದರೆ.

ಇನ್ನು ಸಾಮ್ರಾಟ್ ಅಶೋಕ್ ವಿರುದ್ಧ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಪ್ರತಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗುತ್ತಿರುವುದು ಅಶೋಕ್ ಗೆ ವರ ಪರಣಮಿಸಿದೆ. ಬಿಜೆಪಿ ಪಾಳಯದಲ್ಲಿ ಅಶೋಕ್ ಗೆ ಎಷ್ಟು ಬೆಂಬಲ ಇದ್ದರೋ, ಅಷ್ಟೇ ವಿರೋಧವೂ ಇದೆ. ಗ್ಯಾರಂಟಿ ನ್ಯೂಸ್ ನ ಮೂಡ್ ಆಫ್ ಕರ್ನಾಟಕ ಸರ್ವೆ ಪ್ರಕಾರ ಪದ್ಮನಾಭನಗರದಲ್ಲಿ ಅಶೋಕ್ ಗೆಲುವು ಸುಲಭವಾಗಿದೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version